Asianet Suvarna News

ಜೇಮ್ಸ್ ಚಿತ್ರದ ಫೈಟ್ ಶೂಟಿಂಗ್ ಜು.5ರಿಂದ ಶುರು

  • ಜು.5ರಿಂದ ಫೈಟಿಂಗ್ ಸೀನ್ ಶೂಟಿಂಗ್
  • ಜೇಮ್ಸ್ ಸಿನಿಮಾದ ಫೈಟ್ ಸೀನ್ ಶೂಟಿಂಗ್ ಆರಂಭ
Puneeth Rajkumars James movie fight scene shooting to start from July 5th dpl
Author
Bangalore, First Published Jun 30, 2021, 10:22 AM IST
  • Facebook
  • Twitter
  • Whatsapp

ಜು.5ರಿಂದ ಫೈಟಿಂಗ್ ಸೀನ್ ಶೂಟಿಂಗ್ ಜೇಮ್ಸ್ ಸಿನಿಮಾದ ಫೈಟ್ ಸೀನ್ ಶೂಟಿಂಗ್ ಆರಂಭ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್‌ಸ್ ಸಿನಿಮಾದ ಆ್ಯಕ್ಷನ್ ಸೀಕ್ವೆನ್‌ಸ್ ಶೂಟಿಂಗ್ ಜು.5ರಿಂದ ಬೆಂಗಳೂರಿನ ಅರಮನೆ ಮೈದಾನ ದಲ್ಲಿ ನಡೆಯಲಿದೆ.

ದಕ್ಷಿಣ ಭಾರತದ ಜನಪ್ರಿಯ ಸಾಹಸ ನಿರ್ದೇಶಕರಾದ ರಾಮ್-ಲಕ್ಷ್ಮಣ್ ನಿರ್ದೇಶನದಲ್ಲಿ ಮೂಡಿ ಬರುವ ಈ ಸಾಹಸ ಚಿತ್ರೀಕರಣದಲ್ಲಿ ಪುನೀತ್ ಜೊತೆಗೆ ನಾಯಕಿ ಪ್ರಿಯಾ ಆನಂದ್, ಅನು ಪ್ರಭಾಕರ್ ಮೊದಲಾದವರು ಭಾಗವಹಿಸಲಿದ್ದಾರೆ.

ಈ ಸಾಹಸ ಸೀಕ್ವೆನ್‌ಸ್ ಶೂಟಿಂಗ್ ಬಗ್ಗೆ ಜೇಮ್‌ಸ್ ನಿರ್ದೇಶಕ ಚೇತನ್ ಕುಮಾರ್, ‘ಸಾಹಸ ಚಿತ್ರೀಕರಣಕ್ಕೆ ಬೇಕಾದ ಸೆಟ್‌ಗಳನ್ನು ಅರಮನೆ
ಮೈದಾನದಲ್ಲಿ ಹಾಕಲಾಗಿದೆ. ಎಲ್ಲರಿಗೂ ಲಸಿಕೆ ಹಾಕಿಸಿ, ಸುರಕ್ಷತಾ ಕ್ರಮಗಳನ್ನು ಪಾಲಿಸಿ ಚಿತ್ರೀಕರಣ ನಡೆಸಲಾಗುತ್ತದೆ. ಭಜರಂಗಿ 2 ಚಿತ್ರದಲ್ಲಿ ಕ್ಯಾಮರಾ ವರ್ಕ್ ಮಾಡಿದ ಸ್ವಾಮಿ ಈ ಸಾಹಸವನ್ನು ಕ್ಯಾಮರಾದಲ್ಲಿ ದಾಖಲಿಸಲಿದ್ದಾರೆ.

ನಟ ಸಂಚಾರಿ ವಿಜಯ್‌ಗೆ ಗೌರವ ಸಲ್ಲಿಸಿದ ಅಮೆರಿಕ ಫ್ರಾಂಕ್ಲಿನ್ ಥಿಯೇಟರ್‌!

ಆರ್ಟ್ ಡೈರೆಕ್ಟರ್ ರವಿ ಸೆಟ್ ಹಾಕಿದ್ದಾರೆ. ಐವತ್ತು ಜನ ಫೈಟರ್ಸ್ ಇರುತ್ತಾರೆ. ಈಗಾಗಲೇ ಬೈಕ್ ಸಾಹಸಗಳನ್ನು ಚಿತ್ರೀಕರಿಸಲಾಗಿದೆ. ಈ ಬಾರಿಯ ಸಾಹಸದಲ್ಲಿ ಕೇತನ್ ಕರಾಂಡೆ ಎಂಬ ಬಾಡಿ ಬಿಲ್ಡರ್ ಬಾಂಬೆಯಿಂದ, ಆಂಧ್ರದಿಂದ ಶ್ರೀಕಾಂತ್ ಮೆಹ್ತಾ, ಆದಿತ್ಯ ಮೆನನ್
ಪ್ರಮುಖವಾಗಿ ಭಾಗವಹಿಸುತ್ತಾರೆ.

ಏಳು ದಿನಗಳ ಸಾಹಸ ಚಿತ್ರೀಕರಣದ ಬಳಿಕ ಮಾತಿನ ಭಾಗದ ಶೂಟಿಂಗ್ ಬೆಂಗಳೂರಿನ ಸುತ್ತಮುತ್ತ ಸೆಟ್‌ನಲ್ಲಿ ನಡೆಯಲಿದೆ. ಸುಮಾರು 25 ದಿನಗಳ ಶೆಡ್ಯೂಲ್ ಹಾಕಿಕೊಂಡಿದ್ದೇವೆ’ ಎನ್ನುತ್ತಾರೆ.

Follow Us:
Download App:
  • android
  • ios