Asianet Suvarna News Asianet Suvarna News

ಪುನೀತ್ ಮಾಡಬೇಕಿದ್ದ ಮುಂಗಾರು ಮಳೆ-ಗಾಳಿಪಟ ಸಿನಿಮಾ ಗಣೇಶ್ ಪಾಲಾಗಿದ್ದು ಹೇಗೆ? ಇಂಟ್ರಸ್ಟಿಂಗ್ ವಿಚಾರ ಬಹಿರಂಗ

ಗೋಲ್ಡನ್ ಸ್ಟಾರ್ ಗಣೇಶ್ ಸ್ಟಾರ್ ಆಗಿ ಮೆರೆದಿದ್ದ ಮುಂಗಾರು ಮಳೆ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡಬೇಕಿತ್ತು. ಹೌದು, ಯೋಗರಾಜ್ ಭಟ್ ಸಿನಿಮಾದ ಕತೆ ಬರೆದಿದ್ದು ಪುನೀತ್ ಅವರಿಗಾಗಿ. ಆದರೆ ಪವರ್ ಸ್ಟಾರ್ ಈ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲ. ಹಾಗಾಗಿ ಈ ಸಿನಿಮಾದಲ್ಲಿ ಪುನೀತ್ ಹೀರೋ ಆಗುವ ಅವಕಾಶ ಕೈತಪ್ಪಿತು. 

puneeth rajkumar was the first choice of Yogaraj bhats blockbuster Mungaru male and galipata sgk
Author
Bengaluru, First Published Aug 11, 2022, 5:42 PM IST

ಮುಂಗಾರು ಮಳೆ ಸ್ಯಾಂಡಲ್ ವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ. ಕನ್ನಡ ಸಿನಿಮಾ ಇತಿಹಾಸದಲ್ಲಿ ಈ ಸಿನಿಮಾ ಪ್ರಮುಖ ಸ್ಥಾನ ಪಡೆದಿದೆ. ರೊಮ್ಯಾಂಟಿಕ್ ಮ್ಯೂಸಿಕಲ್ ಹಿಟ್ ಮುಂಗಾರುಮಳೆ ಎವರ್ ಗ್ರೀನ್ ಸಿನಿಮಾ ಸಾಲಿನಲ್ಲಿದೆ. ಕಲೆಕ್ಷನ್ ವಿಚಾರದಲ್ಲೂ ದಾಖಲೆ ಬರೆದಿತ್ತು. ಈ ಸಿನಿಮಾ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮೇಕಿಂಗ್ ಸ್ಟೈಲ್, ಕಥೆ ಹಾಗೂ ಹಾಡುಗಳ ವಿಭಾಗದಲ್ಲಿ ಗಮನಾರ್ಹ ಬದಲಾವಣೆಯಾಯಿತು. ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ಪ್ರೇಕ್ಷಕರ ಹೃದಯ ಗೆದ್ದಿತ್ತು. ಗಣೇಶ್ ರಾತ್ರೋರಾತ್ರಿ ಸ್ಟಾರ್ ಆಗಿ ಹೊಮ್ಮಿದರು. ಮನೋಮೂರ್ತಿ ಸಂಗೀತ, ಸೋನು ನಿಗಮ್ ಧ್ವನಿ ಕನ್ನಡಿಗರನ್ನು ಮೋಡಿ ಮಾಡಿತ್ತು. ಈ ಸಿನಿಮಾ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿಯೇ. ಅಂದಹಾಗೆ ಈ ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಆಗಿದೆ. 

ಗೋಲ್ಡನ್ ಸ್ಟಾರ್ ಗಣೇಶ್ ಸ್ಟಾರ್ ಆಗಿ ಮೆರೆದಿದ್ದ ಮುಂಗಾರು ಮಳೆ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡಬೇಕಿತ್ತು. ಹೌದು, ಯೋಗರಾಜ್ ಭಟ್ ಸಿನಿಮಾದ ಕತೆ ಬರೆದಿದ್ದು ಪುನೀತ್ ಅವರಿಗಾಗಿ. ಆದರೆ ಪವರ್ ಸ್ಟಾರ್ ಈ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲವಂತೆ. ಈ ಸಿನಿಮಾಗೆ ಪುನೀತ್ ಹೀರೋ ಆಗಬೇಕೆಂದು ಕನಸುಕಂಡಿದ್ದ ಯೋಗರಾಜ್ ಭಟ್ಟರ ಆಸೆ ಕೈಗೂಡಲಿಲ್ಲ. ಬಳಿಕ ಭಟ್ರ ಈ ಕಥೆ ವಿಜಯ್ ರಾಘವೇಂದ್ರ ಬಳಿ ಹೋಗಿದ್ದು, ವಿಜಯ್ ರಾಘವೇಂದ್ರ ಕೂಡ ಡೇಟ್ ಸಮಸ್ಯೆಯಿಂದ ಈ ಸಿನಿಮಾ ಕೈಬಿಟ್ಟಿದ್ದು ಎಲ್ಲಾ ಗೊತ್ತಿರುವ ವಿಚಾರ. ನಂತರ ಯೋಗರಾಜ್ ಭಟ್, ಗಣೇಶ್ ಅವರಿಗೆ ಈ ಸಿನಿಮಾ ಮಾಡಿ ದೊಡ್ಡ ಮಟ್ಟ ಮಟ್ಟದ ಯಶಸ್ಸು ಕಂಡರು. 

ತಂದೆ ತಾಯಿಗೆ ಹೇಳಿಕೊಳ್ಳಲಾಗದ ವಿಚಾರವನ್ನು ಸ್ನೇಹಿತರಿಗೆ ಹೇಳುತ್ತೇವೆ: ಯೋಗರಾಜ್‌ ಭಟ್

ಇದು ಮುಂಗಾರು ಮಳೆಯ ಕಥೆಯಾದರೆ ಗಾಳಿಪಟ ಸಿನಿಮಾ ಕೂಡ ಪುನೀತ್ ಗಾಗಿ ಸಿದ್ಧವಾದ ಕಥೆ. ಯೋಗರಾಜ್ ಭಟ್ ಅವರ ಮೊದಲ ಆಯ್ಕೆ ಪವರ್ ಸ್ಟಾರ್ ಪುನೀತ್ ಆಗಿದ್ದರು. ಆದರೆ ಆಗಲೂ ಪವರ್ ಸ್ಟಾರ್ ಗೆ ಯೋಗರಾಜ್ ಭಟ್ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಬಳಿಕ ಮತ್ತೆ ಗಾಳಿಪಚಟ ಸಿನಿಮಾದಲ್ಲಿ ಗಣೇಶ್ ನಾಯಕನಾಗಿ ಮಿಂಚಿದರು. ಆ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. 

ಗಾಳಿಪಟ-2; ಸೆನ್ಸೇಷನ್ ಸೃಷ್ಟಿಸಿದ ಭಟ್ರು-ಗಣಿ, ದಶಕದ ಹಿಂದಿನ ಇತಿಹಾಸ ಮತ್ತೆ ಮರುಕಳಿಸುತ್ತಾ?

ಈ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚಿಗಷ್ಟೆ ಬಹಿರಂಗ ಪಡಿಸಿದ್ದರು. ಸಂದರ್ಶನವೊಂದರಲ್ಲಿ ಗಣೇಶ್ ಮುಂಗಾರು ಮಳೆ ಮತ್ತು ಗಾಳಪಟ ಸಿನಿಮಾ ಪುನೀತ್ ಮಾಡಬೇಕಿತ್ತು, ಯೋಗರಾಜ್ ಭಟ್ ಪುನೀತ್ ಗಾಗಿ ಕಥೆ ಮಾಡಿದ್ದು ಎಂದು ಬಹಿರಂಗ ಪಡಿಸಿದರು. ಎರಡು ಭಾರಿ ಯೋಗರಾಜ್ ಭಟ್ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ಕೆಲಸ ಮಾಡುವ ಅವಕಾಶ ಕೈತಪ್ಪಿತ್ತು. ಆದರೆ ಪರಮಾತ್ಮ ಸಿನಿಮಾ ಮೂಲಕ ಭಟ್ರು ಮತ್ತು ಪವರ್ ಸ್ಟಾರ್ ಎಂದಾದರು. ಈ ಸಿನಿಮಾ ಕೆಲವು ವರ್ಗದ ಜನರಿಗೆ ತುಂಬಾ ಇಷ್ಟವಾಯಿತು. ಇನ್ನು ಕೆಲವರಿಗೆ ಆ ಸಿನಿಮಾ ಹಿಡಿಸಿಲ್ಲ. ಆದರೆ ಹಾಡುಗಳು ಸೂಪರ್ ಹಿಟ್ ಆಗಿವೆ. ಇಂದಿಗೂ ನೆನಪಿಸಿಕೊಳ್ಳುತ್ತಾರೆ. 

ಇದೀಗ ಗಾಳಿಪಟ-2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಮತ್ತೆ ಗೋಲ್ಡನ್ ಸ್ಟಾರ್ ಯೋಗರಾಜ್ ಭಟ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ಗಣೇಶ್ ಮತ್ತು ಭಟ್ರ ಗಾಳಿಪಟ-2ಗಾಗಿ ಕನ್ನಡ ಪ್ರೇಕ್ಷಕರು ಕಾಯುತ್ತಿದ್ದಾರೆ. ಆಗಸ್ಟ್ 12ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಗಾಳಿಪಟ ಸೃಷ್ಟಿಸಿದ್ದ ಇತಿಹಾಸ ಮತ್ತೆ ಕ್ರಿಯೇಟ್ ಆಗುತ್ತಾ ಕಾದು ನೋಡಬೇಕು. 

Follow Us:
Download App:
  • android
  • ios