ಕನ್ನಡದ ಕನಸಿನ ರಾಣಿ ಮಾಲಾಶ್ರೀ ಅವರು ನಟ ಪುನೀತ್ ರಾಜ್‌ಕುಮಾರ್ ಅವರು ಸಾವಿಗೂ ಮೊದಲು ಆಡಿದ್ದ ಮಾತನ್ನು ನೆನಪಿಸಿಕೊಂಡು ಹೇಳಿದ್ದಾರೆ. ಅಪ್ಪುಗೆ ನಟಿ ಮಾಲಾಶ್ರೀ ಅಂದ್ರೆ ಪಂಚಪ್ರಾಣ.. ಅದನ್ನು ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹಾಗಿದ್ರೆ ಅಪ್ಪು ಹೇಳಿದ್ದೇನು..?
ಕನಸಿನ ರಾಣಿ ನಟಿ ಮಾಲಾಶ್ರೀ (Malashri) ತಮ್ಮ ಪತಿ ರಾಮು ಅವರನ್ನು ಕಳೆದುಕೊಂಡಿದ್ದು, ಬಹಳಷ್ಟು ನೋವು ಅನುಭವಸಿದ್ದು ಬಹುತೇಕ ಎಲ್ಲರಿಗೂ ಗೊತ್ತಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಹಾಗೂ ಕನ್ನಡದ ಸ್ಟಾರ್ ನಟಿ ಮಾಲಾಶ್ರೀ ಪತಿ ರಾಮು (Ramu) ಅವರು 6 ಏಪ್ರಿಲ್ 2021ರಂದು ಕೋವಿಡ್‌ಗೆ ಬಲಿಯಾಗಿದ್ದಾರೆ. ಮಾಲಾಶ್ರೀ ಹಾಗೂ ಎರಡು ಮಕ್ಕಳು ರಾಮು ಅವರನ್ನು ಕಳೆದುಕೊಂಡು ಕಂಗಾಲಾಗಿ, ಈಗ ನಿಧಾನಕ್ಕೆ ಮತ್ತೆ ಸಹಜ ಜೀವನಕ್ಕೆ ಮರಳಿರುವುದು ಕನ್ನಡಿಗರಿಗೆ ಗೊತ್ತಿದೆ.
ಅದೇ ವರ್ಷ 2021ರಲ್ಲಿ ಕನ್ನಡದ ಪವರ್ ಸ್ಟಾರ್ ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಸಹ ಅಕಾಲಿಕ ನಿಧನ ಹೊಂದಿದರು. ನಟ ಅಪ್ಪು (29 October 2021) ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದು, ಇಂದಿಗೂ ಕರುನಾಡು ಜನರು ಅವರನ್ನು ಮರೆಯದೇ ದಿನನಿತ್ಯವೂ ನೆನಪಿಸಿಕೊಳ್ಳುತ್ತಿರುವುದು ನಡೆದೇ ಇದೆ. ಈ ಮಧ್ಯೆ ನಟಿ ಮಾಲಾಶ್ರೀ ಅವರು ತಮ್ಮ ಗಂಡ ರಾಮು ಅವರನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿರುವ ಕಾಲದಲ್ಲಿ, 6 ತಿಂಗಳು ಬಳಿಕ ಸ್ಯಾಂಡಲ್‌ವುಡ್ ಸ್ಟಾರ್ ನಟ, ಅಪ್ಪು ಖ್ಯಾತಿಯ ಪುನೀತ್ ರಾಜ್‌ಕುಮಾರ್ ಹಠಾತ್ ನಿಧನದ ಸುದ್ದಿ ಸಿಡಿಲಿನಿಂತ ಎರಗಿತು.
ಅಪ್ಪು-ಅಣ್ಣಾವ್ರ ಬಗ್ಗೆ ಲಕ್ಷ್ಮೀ ಹೀಗ್ ಹೇಳೋದಾ? ಮಹಾನ್ ನಟಿ ಹೇಳದ್ಮೇಲೆ ನಿಜ ಆಗಿರ್ಬಹುದು ಅಲ್ವಾ!
ರಾಮು ನಿಧನದ ಶೋಕ ಹಾಗು ನಟ ಪುನೀತ್ ಮರಣಗಳ ಬಗ್ಗೆ ನಟಿ ಮಾಲಾಶ್ರೀ ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಾಮು ಅನಿರೀಕ್ಷಿತ ನಿಧನದಿಂದ ಸಹಜವಾಗಿಯೇ ಮಾಲಾಶ್ರೀ ಇಡೀ ಕುಟುಂಬ ಕಂಗೆಟ್ಟಿತ್ತು. ಅಂಥ ನೋವಿನ ಸಮಯದಲ್ಲಿ ನಟಿ ಮಾಲಾಶ್ರೀ ಎಲ್ಲೂ ಹೊರಗಡೆ ಕಾಣಿಸಿಕೊಳ್ಳುತ್ತಿರಲಿಲ್ಲ. ಸಿನಿಮಾ ಹಾಗಿರಲಿ, ಆಪ್ತರ ಕುಟುಂಬಗಳ ಫಂಕ್ಷನ್‌ಗಳನ್ನೂ ಮಾಲಾಶ್ರೀ ಅಟೆಂಡ್ ಆಗುವ ಆಸಕ್ತಿ ಹೊಂದಿರಲಿಲ್ಲ.
ಆದರೆ, ಬರೋಬ್ಬರಿ ಆರು ತಿಂಗಳುಗಳ ಬಳಿಕ ಮಾಲಾಶ್ರೀ ಮದುವೆಯೊಂದನ್ನು ಅಟೆಂಡ್ ಮಾಡಿದ್ದರಂತೆ. ಅಂದು ನಟ ಪುನೀತ್ ಸಹ ಬಂದಿದ್ದು, ಮಾಲಾಶ್ರೀ ಅವರನ್ನು ಹಗ್ ಮಾಡಿ ನಟ ಪುನೀತ್ ರಾಜ್‌ಕುಮಾರ್ ಅವರು 'ನಿಮ್ಮ ನೋವು ನನಗೂ ಅರ್ಥ ಆಗುತ್ತೆ.. ಆದ್ರೆ ನೀವು ಅದ್ರಿಂದ ಹೊರಗೆ ಬರಲೇಬೇಕು ನೀವು.. ನೀವು ಮದುವೆಗೆ ಬಂದಿದ್ದು ತುಂಬಾ ಸಂತೋಷ ತಂದಿದೆ ನಂಗೆ. ಮತ್ತೆ ಮೊದ್ಲಿನ ಥರ ಆಗ್ಬೇಕು ನೀವು, ದುರ್ಗಿ, ಚಾಮುಂಡಿ ತರ ಇರ್ಬೇಕು ಎಂದು ಹೇಳಿದ್ದರು' ಎಂದು ನಟ ಪುನೀತ್ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ ನಟಿ ಮಾಲಾಶ್ರೀ.
ರಮ್ಯಾ ಯಾಕ್ ಹಿಂಗ್ ಆಡ್ತಿದಾರೆ? ಸ್ಯಾಂಡಲ್‌ವುಡ್ ಕ್ವೀನ್ 'ಚೆಸ್' ಆಡ್ತಿದಾರಾ ಅಂತಿದಾರಲ್ರೀ..!
ಅಷ್ಟೇ ಅಲ್ಲ, 'ನಮ್ಮ ರಾಮು ಅವ್ರು ಎಲ್ಲೂ ದೂರ ಹೋಗಿಲ್ಲ, ನಮ್ಮ ಜತೆಯಲ್ಲೇ ಇದ್ದಾರೆ. ನೀವು ಅವ್ರ ನೆನಪಲ್ಲೇ ಮನೆಯಲ್ಲೆ ಕೂತ್ಕೋಬೇಡಿ, ಮನೆಯಿಂದ ಹೊರಗಡೆ ಬನ್ನಿ. ಅವ್ರು ನಮ್ಮ ಜತೆನಲ್ಲೇ ಇದ್ದಾರೆ, ನಾವು ಮಾಡೋ ಕೆಲಸ ಅವರೂ ನೋಡಿ ಖುಷಿ ಪಡಲಿ' ಎಂದಿದ್ದರಂತೆ ನಟ ಪುನೀತ್ ರಾಜ್‌ಕುಮಾರ್. ಆದರೆ ಮುಂದಿನ ಆರು ತಿಂಗಳು ಬಿಟ್ಟು ನಟ ಪುನೀತ್ ಸಾವಿನ ಸುದ್ದಿ ಮಾಲಾಶ್ರೀ ಕಿವಿಗೆ ಬೇಡವೆಂದರೂ ಅಪ್ಪಳಿಸಿಬಿಟ್ಟಿತು.
ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ನಟಿ ಮಾಲಾಶ್ರೀ ತೀವ್ರ ಶಾಕ್‌ಗೆ ಒಳಗಾಗಿದ್ದರಂತೆ. 'ಆವತ್ತು ಬೆಳಿಗ್ಗೆಯಿಂದ ರಾತ್ರಿ ತನಕ ನಾನು ಫುಲ್ ಬ್ಲಾಂಕ್' ಆಗಿಬಿಟ್ಟಿದ್ದೆ. ನನಗೆ ಏನೂ ಮಾಡಲು ಆಗುತ್ತಿರಲಿಲ್ಲ. ಹಲವು ಮಾಧ್ಯಮಗಳು ನನಗೆ ಕಾಲ್ ಮಾಡಿದರೂ ನಾನು ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಅದೇ ವರ್ಷ ಅಂದರೆ, 2021ರ ಕನ್ನಡ ಸಿನಿಮಾ ಉದ್ಯಮದ ಪಾಲಿಗೆ ನಿಜವಾಗಿಯೂ ಬ್ಯಾಡ್ ಈಯರ್. ಆ ವರ್ಷದಲ್ಲಿ ನಟ ಪುನೀತ್, ನಿರ್ಮಾಪಕರಾಗಿದ್ದ ನನ್ನ ಪತಿ ರಾಮು ನಿಧನರಾಗಿದ್ದಾರೆ' ಎಂದಿದ್ದಾರೆ ಮಾಲಾಶ್ರೀ.
Nanjundi Kalyana Secret: ಮಾಲಾಶ್ರೀ-ರಾಘಣ್ಣ 'ನಂಜುಂಡಿ ಕಲ್ಯಾಣ'ದ ಈ ಸೀಕ್ರೆಟ್ ನಿಮ್ಗೆ ಗೊತ್ತಿಲ್ಲ!
