ಅಣ್ಣಾವ್ರ ಮಗ ಅಪ್ಪು ಬಗ್ಗೆ ಕೂಡ ಅದೇನೋ ಹೇಳಿದಾರೆ. ಅದೂ ಕೂಡ ನಿಜ ಇರಬಹುದು. ಶಾಕಿಂಗ್ ಸಂಗತಿ ಅನ್ನಿಸಿದರೂ ಕೂಡ ಲಕ್ಷ್ಮೀ ಹೇಳಿದಾರೆ ಅಂದ್ಮೇಲೆ ಸುಳ್ಳು ಅಂತ ಹೇಗೆ ಹೇಳೋದು? ತಂದೆ-ಮಗ ಇಬ್ಬರು ಸಿನಿಮಾಗಳಲ್ಲೂ ನಟಿಸಿದ್ದಾರೆ ಲಕ್ಷ್ಮೀ... ಏನ್ ಮ್ಯಾಟರ್ ಗುರೂ..!

ಹಿರಿಯ ನಟಿ ಲಕ್ಷ್ಮೀ (Julie Lakshmi) ಅವರು ಕರ್ನಾಟಕ ಅಣ್ಣಾವ್ರು ಡಾ ರಾಜ್‌ಕುಮಾರ್ (Dr Rajkumar) ಹಾಗೂ ಅವರ ಮಗ ಅಪ್ಪು (Appu) ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? ನೀವು ಅದನ್ನು ಕೇಳಿದರೆ ಖಂಡಿತ ಶಾಕ್ ಆಗ್ತೀರಾ! ಡಾ ರಾಜ್‌ಕುಮಾರ್ ಜೊತೆ 15ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಲಕ್ಷ್ಮೀ. ಡಾ ರಾಕ್‌ಕುಮಾರ್ ಹಾಗೂ ಲಕ್ಷ್ಮೀ ಜೋಡಿ ನಟನೆಯ ಅದೆಷ್ಟೋ ಚಿತ್ರಗಳನ್ನು ಕನ್ನಡಿಗರು ನೋಡಿದ್ದಾರೆ. ಅವರಿಬ್ಬರ ಜೋಡಿಯನ್ನು ಮೆಚ್ಚಿದ್ದಾರೆ. ಅಂದ್ಮೇಲೆ ಡಾ ರಾಜ್‌ಕುಮಾರ್ ಬಗ್ಗೆ ಲಕ್ಷ್ಮೀ ಹೇಳಿದ್ದು ನಿಜನೇ ಆಗಿರ್ಬಹುದು. 

ಅದಿರ್ಲಿ, ಅಣ್ಣಾವ್ರ ಮಗ ಅಪ್ಪು ಬಗ್ಗೆ ಕೂಡ ಅದೇನೋ ಹೇಳಿದಾರೆ. ಅದೂ ಕೂಡ ನಿಜ ಇರಬಹುದು. ಶಾಕಿಂಗ್ ಸಂಗತಿ ಅನ್ನಿಸಿದರೂ ಕೂಡ ಲಕ್ಷ್ಮೀ ಹೇಳಿದಾರೆ ಅಂದ್ಮೇಲೆ ಸುಳ್ಳು ಅಂತ ಹೇಗೆ ಹೇಳೋದು? ತಂದೆ-ಮಗ ಇಬ್ಬರು ಸಿನಿಮಾಗಳಲ್ಲೂ ನಟಿಸಿದ್ದಾರೆ ಲಕ್ಷ್ಮೀ. ಡಾ ರಾಜ್‌ಕುಮಾರ್ ಜೊತೆ ನಾ ನಿನ್ನ ಮರೆಯಲಾರೆ, ಗೋವಾ ಸಿಐಡಿ 999, ಒಲವು ಗೆಲುವು ಹೀಗೆ ಸಾಲುಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ ಲಕ್ಷ್ಮೀ. ಇನ್ನು, ಪುನೀತ್ ರಾಜ್‌ಕುಮಾರ್ ಜೊತೆ 'ವಂಶಿ' ಚಿತ್ರದಲ್ಲಿ ನಟಿಸಿದ್ದಾರೆ. 

ಅಪ್ಪು-ಅಪ್ಪಾಜಿ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ: ಅದೆಷ್ಟೋ ಗುಟ್ಟು ಜಗತ್ತಿಗೆ ಗೊತ್ತೇ ಇಲ್ಲ! ಇಲ್ನೋಡಿ..

ಈ ಇಬ್ಬರ ಬಗ್ಗೆಯೂ ನಟಿ ಲಕ್ಷ್ಮೀ ಅವರು ಸಂದರ್ಶನವೊಂದರಲ್ಲಿ ಮಾತನ್ನಾಡಿದ್ದಾರೆ. ಡಾ ರಾಜ್‌ಕುಮಾರ್ ಬಗ್ಗೆ 'ಕೆಲವು ದೇವತೆಗಳು ಭೂಮಿಗೆ ಬಂದು ಹೋಗ್ತವೆ ಅಂತ ಹೇಳ್ತಾರೆ. ಆದ್ರೆ ರಾಜ್‌ಕುಮಾರ್ ಬಗ್ಗೆ ಹೇಳ್ಬೇಕು ಅಂದ್ರೆ ಅವ್ರು ನಿಜವಾಗಿ ಒಬ್ಬ ಮನುಷ್ಯ. ನಾರ್ಮಲ್‌ ಆಗಿ ಮನುಷ್ಯರಿಗೆ ಕೋಪ-ತಾಪ ಎಲ್ಲವೂ ಬರುತ್ತೆ.. ಆದ್ರೆ ಅವರು ಒಂಥರಾ ದೇವರಂಥ ಮನುಷ್ಯರು, ಪರ್ಫೆಕ್ಟ್ ಮನುಷ್ಯರು' ಎಂದಿದ್ದಾರೆ. 

ಅಷ್ಟೇ ಅಲ್ಲ, 'ನಾನು ತುಂಬಾ ವೇಳೆ ಅವ್ರಿಗೆ ಕೋಪ ತರಿಸ್ಬೇಕು ಅಂತ ಏನೇನೋ ಹೇಳ್ತಾ ಇದ್ದೆ.. ನಾನು ಏನ್ ಹೇಳಿದ್ರೂ ಅವ್ರಿಗೆ ಕೋಪ ಬರ್ತಾ ಇರ್ಲಿಲ್ಲ. ಜೊತೆಗೆ, ನನ್ ಹತ್ರ 'ನಂಗೆ ಕೋಪ ತರಿಸ್ಬೇಕು ಅಂತಾನೇ ಏನೇನೋ ಹೇಳ್ತೀರ ಅಲ್ವಾ..? ಅಂತ ನಗ್ತಾ ನಗ್ತಾ ಹೇಳ್ತಾ ಇದ್ದರು. ಯಾವತ್ತೂ ಅವ್ರು ಕೋಪ ಮಾಡ್ಕೊಂಡಿಲ್ಲ. ನಂಗೇ ಅದೆಷ್ಟೋ ಬಾರಿ ಆಮೇಲೆ ಬೇಜಾರಾಗಿದ್ದೂ ಇದೆ' ಎಂದಿದ್ದಾರೆ ನಟಿ ಜೂಲಿ ಖ್ಯಾತಿಯ ಲಕ್ಷ್ಮೀ. 

ಶ್ರೇಯಾ ಘೋಷಾಲ್ ಮೊಟ್ಟಮೊದಲು ಹಾಡಿದ್ದು ಹೇಗೆ? ಅಲ್ಲಿ ಈ ಗಾಯಕಿ ಬಗ್ಗೆ ಏನಂತ ಹೇಳಿದ್ರು?

ಇನ್ನು, ನಟಿ ಲಕ್ಷ್ಮೀ ಅವರು ಪುನೀತ್ ಬಗ್ಗೆ ಅದೇನು ಹೇಳಿದ್ದಾರೆ ಅಂದ್ರೆ.. 'ಅವ್ರು ಒಬ್ಬ ಪುಣ್ಯಾತ್ಮ.. ಇಲ್ಲಿ ಬಂದು ಏನೇನೋ ಒಳ್ಳೇದು ಮಾಡಿ ಬೇಗ ವಾಪಸ್ ಹೋಗ್ಬೇಕಿತ್ತು ಅವ್ರಿಗೆ.. ಹಾಗೇ ಮಾಡಿದ್ರು.. ಅದಕ್ಕೇ ಅವ್ರು ದೊಡ್ಮನೆಯಲ್ಲಿ ಹುಟ್ಟಿದ್ದರು. ನಾನು ಆ ಕಂದನ್ನ ಹೊಟ್ಟೆಯಲ್ಲಿ ಇದ್ದಾಗಲೇ ನೋಡಿದೀನಿ.. ಅಂದ್ರೆ, ಪಾರ್ವತಿ ಅಮ್ಮ ಅವ್ರು ಪುನೀತ್‌ಗೆ ಗರ್ಭಿಣಿ ಆಗಿದ್ದಾಗ ನಾನು ಹಾಗೂ ಡಾ ರಾಜ್‌ಕುಮಾರ್ ಅವ್ರು 'ಒಲವು ಗೆಲುವು' ಶೂಟಿಂಗ್ ಮಾಡ್ತಾ ಇದ್ವಿ. ಆಮೇಲೆ ಅದೇ ಪುಟ್ಟ ಹುಡುಗನ ಜೊತೆ ನಾನು ನಟಿಸಿದ್ದೇನೆ ಕೂಡ' ಎಂದಿದ್ದಾರೆ ನಟಿ ಲಕ್ಷ್ಮೀ.