ಪುನೀತ್ ರಾಜ್ಕುಮಾರ್ ನಟಿಸಿದ ಸೂಪರ್ ಹಿಟ್ ಸಿನಿಮಾ ಪೈಕಿ ಅಭಿ ಜನ ಅತೀ ಹೆಚ್ಚು ಇಷ್ಟಪ್ಟಟ ಸಿನಿಮಾ. ಆ ಸಿನಿಮಾ ಕಾಲ್ಪನಿಕ ಕತೆಯಲ್ಲಿ ಕರ್ನಾಟಕದಲ್ಲಿ ನಡೆದ ಘಟನೆ ಆಧರಿಸಿ ಸಿನಿಮಾ ಮಾಡಲಾಗಿತ್ತು. ಅಷ್ಟಕ್ಕೂ ಈ ಸಿನಿಮಾದ ನೈಜ ಘಟನೆ ಏನು? ನಡೆದಿದ್ದು ಏಲ್ಲಿ?
ಬೆಂಗಳೂರು (ನ.23) ಪುನೀತ್ ರಾಜ್ಕುಮಾರ್ ದೂರವಾಗಿ ವರ್ಷಗಳು ಉರುಳಿದರೂ ಸಿನಿಮಾ ಮೂಲಕ ಮತ್ತೆ ಮತ್ತೆ ಪ್ರೇಕ್ಷರ ಮೋಡಿ ಮಾಡುತ್ತಾರೆ. ಪುನೀತ್ ರಾಜ್ಕುಮಾರ್ ಸೂಪರ್ ಹಿಟ್ ಸಿನಿಮಾ ಪೈಕಿ ಅಭಿ ರಾಜ್ಯದಲ್ಲಿ ಭರ್ಜರಿ ಪ್ರದರ್ಶನ ಕಂಡು ಕಲೆಕ್ಷನ್ನಲ್ಲೂ ದಾಖಲೆ ಬರೆದ ಸಿನಿಮಾ. ಇಷ್ಟೇ ಅಲ್ಲ ಪುನೀತ್ ರಾಜ್ಕುಮಾರ್ ಹಾಗೂ ರಮ್ಯಾ ಜೋಡಿಗೆ ರಾಜ್ಯದ ಜನ ಫಿದಾ ಆಗಿದ್ದರು. ವಿಶೇಷ ಅಂದರೆ ಈ ಅಭಿ ಸಿನಿಮಾ ಕಾಲ್ಪನಿಕ ಕತೆಯಲ್ಲ. ಕರ್ನಾಟಕದಲ್ಲಿ ನಡೆದ ನೈಜ ಘಟನೆ ಆಧರಿಿ ತೆಗೆದ ಸಿನಿಮಾ. ಸಿನಿಮಾಗಾಗಿ ಕೆಲ ಸಣ್ಣ ಬದಲಾವಣೆ ಮಾಡಿ ಸಿನಿಮಾ ನಿರ್ದೇಶನ ಮಾಡಲಾಗಿತ್ತು. ಹೌದು, ಹುಬ್ಭಳ್ಳಿ ಹಾಗೂ ಬೆಂಗಳೂರಿನಲ್ಲಿ ನಡೆದ ಈ ನೈಜ ಘಟನೆ ತಿಳಿದರೆ ಆಘಾತವಾಗುದು ಖಚಿತ.
ಹುಬ್ಭಳ್ಳಿಯಲ್ಲಿ ಆರಂಭ, ಬೆಂಗಳೂರಿನಲ್ಲಿ ಅಂತ್ಯ
ಅಭಿ ಸಿನಿಮಾ ನೈಜ ಘಟನೆ ಆಧರಿಸಿ ತೆಗೆಯಲಾಗಿದೆ. ಈ ನೈಜ ಘಟನೆ ನಡೆದಿದ್ದು ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ. ಹುಬ್ಬಳ್ಳಿಯಲ್ಲಿ ಹಿಂದೂ ಹುಡುಗನೊಬ್ಬನಿಗೆ ಯುವತಿಯ ಮೇಲೆ ಪ್ರೀತಿ ಶುರುವಾಗಿತ್ತು. ಯುವತಿಗೂ ಆತನೆಂದರೇ ಎಲ್ಲಿಲ್ಲದ ಪ್ರೀತಿ. ಯುವಕನಿಗೆ ಆಕೆಗೆ ಪ್ರಪೋಸ್ ಮಾಡುವ ಯಾವುದೇ ಪ್ಲಾನ್ ಇರಲಿಲ್ಲ. ಕಾರಣ ಯುವತಿ ಮುಸ್ಲಿಂ ಸಮುದಾಯದ ಹುಡುಗಿ. ತನ್ನ ಪ್ರೀತಿ ತನ್ನಲ್ಲೇ ಸತ್ತು ಹೋಗಲಿ ಎಂದುಕೊಂಡಿದ್ದು. ಆದರೆ ಮುಸ್ಲಿಂ ಯುವತಿಗೂ ಈತನ ಮೇಲೆ ಪ್ರೀತಿ ಹೆಚ್ಚಾಗಿತ್ತು. ಕೊನೆಗೆ ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಇವರ ಪ್ರೀತಿಗೆ ಧರ್ಮ ಖಂಡಿತವಾಗಿ ಅಡ್ಡಿಯಾಗುತ್ತೆ ಅನ್ನೋದರಲ್ಲಿ ಯಾವುದೇ ಅನುಮಾನ ಇರಲಿಲ್ಲ.
ನಾಪತ್ತೆಯಾದ ಜೋಡಿ
ಇಬ್ಬರ ಪ್ರೀತಿ ವಿಚಾರ ಮನೆಯವರಿಗೆ ಸೂಚನೆ ಸಿಕ್ಕಿತ್ತು. ಅಲ್ಲಿಂದಲೇ ರಂಪಾಟಗಳು ಆರಂಭಗೊಂಡಿತ್ತು. ಅಷ್ಟೊತ್ತಿಗೆ ಇವರ ಪ್ರೀತಿ ಧರ್ಮ ಮೀರಿತ್ತು. ಹೀಗಾಗಿ ರಹಸ್ಯವಾಗಿ ಮದುವೆಯಾಗಲು ನಿರ್ಧರಿಸುತ್ತಾರೆ. ಇದಕ್ಕಾಗಿ ಪ್ಲಾನ್ ಮಾಡುತ್ತಾರೆ. ರಹಸ್ಯವಾಗಿ ಮದುವೆಯಾಗುತ್ತಾರೆ. ಮದುವೆ ಬಳಿಕ ಹುಬ್ಬಳ್ಳಿ ತೊರೆಯುತ್ತಾರೆ. ಮುಸ್ಲಿಂ ಸಮುದಾಯ ಕೆರಳಿ ಕೆಂಡವಾಗಿತ್ತು. ಹುಡುಗನ ಮನೆಗೆ ಬಂದು ರಂಪಾಟ ಮಾಡಿದ್ದರು. ಉದ್ವಘ್ನ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ಮೊದಲೇ ಅರಿತಿದ್ದ ಈ ಜೋಡಿ ಯಾರ ಕಣ್ಣಿಗೂ ಬೀಳದೆ ನಾಪತ್ತೆಯಾಗಿತ್ತು.
ಬರೋಬ್ಬರಿ ಮೂರೂವರೆ ವರ್ಷಗಳ ಕಾಲ ಈ ಜೋಡಿಯ ಯಾವುದೇ ಸುಳಿವು ಸಿಗಲಿಲ್ಲ. ಇದರ ನಡುವೆ ಹುಡುಗಿಯ ಕುಟುಂಬಸ್ಥರಿಗೆ ಈ ಜೋಡಿ ಬೆಂಗಳೂರಿನಲ್ಲಿ ನೆಲೆಸಿರುವ ಮಾಹಿತಿ ರವಾನೆಯಾಗುತ್ತದೆ. ನಾಪತ್ತೆಯಾದ ದಿನದಿಂದ ಸತತವಾಗಿ ಹುಡುಕಾಟ ಆರೇಂಭಿಸಿದ್ದ ಯುವತಿ ಕುಟುಂಬಸ್ಥರು ಕೊನೆಗೂ ಈ ಜೋಡಿ ಎಲ್ಲಿದ್ದಾರೆ ಅನ್ನೋ ಮಾಹಿತಿ ಕಲೆ ಹಾಕಿತ್ತು. ಒಂದಷ್ಟು ಮಂದಿಯೊಂದಿದೆ ಹುಬ್ಬಳ್ಳಿಯಿಂದ ನೇರವಾಗಿ ಬೆಂಗಳೂರಿಗೆ ಬಂದ ಮುಸ್ಲಿಂ ಯುವತಿಯ ಆಪ್ತರು, ಕುಟುಂಬಸ್ಥರು ರಾತ್ರೋ ರಾತ್ರೆ ಈ ಜೋಡಿಯನ್ನು ಹತ್ಯೆ ಮಾಡುತ್ತಾರೆ. ಹತ್ಯೆ ಬಳಿಕ ಆರೋಪಿಗಳು ಪರಾರಿಯಾಗಿದ್ದರು.
ಅನಾಥವಾದ ಮಗು
ಪ್ರೀತಿಸಿ ಮದುವೆಯಾದ ಜೋಡಿ ಕಳೆದ ಮೂರೂವರೆ ವರ್ಷ ಯಾರಿಗೂ ತಿಳಿಯದೆ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದರು. ಇವರಿಗೆ ಮುದ್ದಾದ ಮಗುವಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸಿದ ಹುಡುಗಿ ಕುಟುಂಬ್ಥರು ಇಬ್ಬರನ್ನು ಹತ್ಯೆ ಮಾಡಿದ್ದರು. ಹೀಗಾಗಿ ಮಗು ಅನಾಥವಾಗಿತ್ತು. ಎರಡೂ ಕುಟುಂಬಸ್ಥರು ಮಗುವನ್ನು ನೋಡಿಕೊಳ್ಳಲು ಮುಂದಾಗಲಿಲ್ಲ. ಯುವತಿ ಕುಟುಂಬಸ್ಥರು ಆಕೆಯನ್ನು ಸಮುದಾಯದಿಂದಲೇ ಹೊರಹಾಕಿದ್ದೇವೆ. ಹೀಗಾಗಿ ಮಗು ಬೇಡ ಎಂದರೆ, ಮಗ ಮದುವೆಯಾಗಿ ನಾವು ಸಾಕಷ್ಟು ನೋವು ಅನುಭವಿಸಿದ್ದೇನೆ. ಈ ಮಗುವನ್ನು ಬೆಳೆಸಿ ಮತ್ತೊಂದು ನೋವು ಅನುಭವಿಸಲು ಸಾಧ್ಯವಿಲ್ಲ ಎಂದಿತ್ತು. ಹೀಗಾಗಿ ಅಂದಿನ ಕಮಿಷನರ್ ಸಾಂಗ್ಲಿಯಾನ ಈ ಮಗವನ್ನು ಕಸ್ಟಡಿಗೆ ಪಡೆದಿದ್ದರು.
ಇದೇ ಘಟನೆ ಆಧರಿಸಿ ಅಭಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಕೆಲ ಬದಲಾವಣೆಗಳನ್ನು ಸಿನಿಮಾಗಾಗಿ ಮಾಡಲಾಗಿದೆ. ಈ ಮಗು ಬೆಳೆದು ದೊಡ್ಡದಾಗಿದೆ. ಕಾರಣ 2003ರಲ್ಲಿ ಅಭಿ ಸಿನಿಮಾ ತೆರೆಗೆ ಬಂದಿತ್ತು. 2002ರ ಜೂನ್ ತಿಂಗಳಲ್ಲಿ ಈ ಹತ್ಯೆ ನಡೆದಿತ್ತು. ಈ ಮಗುವನ್ನು ದತ್ತು ಪಡೆಯಲು ಹಲವರು ಮುಂದಾಗಿದ್ದರು. ಈ ವೇಳೆ ಕಾನೂನು ಬದ್ಧವಾಗಿ ದತ್ತು ಪಡೆಯಬೇಕು ಎಂದು ಸಾಂಗ್ಲಿಯಾನ ಹೇಳಿದ್ದರು. ಇಷ್ಟೇ ಅಲ್ಲ ಮಗುವಿನ ಹೆಸರಿನಲ್ಲಿ ಪೊಲೀಸರು 25 ಸಾವಿರ ರೂಪಾಯಿ ದೇಣಿಕೆ ನೀಡಿ ಬ್ಯಾಂಕ್ನಲ್ಲಿ ಹೂಡಿಕೆ ಮಾಡಿದ್ದರು. ಜೊತೆಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಜಮೆ ಮಾಡಲಾಗಿತ್ತು.
ಸೂಚನೆ: ಗೌಪ್ಯತೆ ಕಾರಣಕ್ಕಾಗಿ ಮಗುವಿನ ಹೆಸರು ಬಹಿರಂಗಪಡಿಸಲಿಲ್ಲ. ಜೊತೆಗೆ ಹತ್ಯೆಯಾದ ಜೋಡಿಯ ಹೆಸರನ್ನು ಬಹಿರಂಗಪಡಿಸಿಲ್ಲ.
















