Asianet Suvarna News Asianet Suvarna News

James 2022: ಮಾರ್ಚ್​​ 13ರಂದು ಅರಮನೆ ಮೈದಾನದಲ್ಲಿ ಅಪ್ಪು ಕೊನೆ ಚಿತ್ರದ ಪ್ರೀ-ರಿಲೀಸ್​ ಇವೆಂಟ್!

ಸದ್ಯ ಎಲ್ಲೆಲ್ಲೂ ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ್ದೇ ಮಾತು. ಇದೇ ಮಾರ್ಚ್‌ 17ರಿಂದ 'ಜೇಮ್ಸ್' ಸಿನಿಮಾ ಜಾತ್ರೆ ಶುರುವಾಗಲಿದೆ. ಈ ನಡುವೆ ಚಿತ್ರತಂಡ 'ಜೇಮ್ಸ್' ಪ್ರೀ-ರಿಲೀಸ್​ ಇವೆಂಟ್ ನಡೆಸೋಕೆ ಸಿದ್ಧತೆ ಮಾಡಿಕೊಂಡಿದೆ. 

Puneeth Rajkumar Starrer James Movie Pre Release Event in Palace Ground for March 13th gvd
Author
Bangalore, First Published Mar 12, 2022, 5:13 PM IST

ಸದ್ಯ ಎಲ್ಲೆಲ್ಲೂ ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ 'ಜೇಮ್ಸ್' (James) ಚಿತ್ರದ್ದೇ ಮಾತು. ಅಪ್ಪು ಅಭಿನಯದ ಕೊನೆಯ ಸಿನಿಮಾ ಆಗಿರುವುದರಿಂದ ಈ ಚಿತ್ರದ ಮೇಲೆ ಪುನೀತ್ ಅಭಿಮಾನಿಗಳಿಗಷ್ಟೇ (Fans) ಅಲ್ಲ, ಎಲ್ಲಾ ಕನ್ನಡಿಗರಿಗೂ ಪ್ರೀತಿ, ಅಭಿಮಾನ ಮತ್ತು ಸಾಕಷ್ಟು ನಿರೀಕ್ಷೆಗಳು ಇವೆ. ಇದೇ ಮಾರ್ಚ್‌ 17ರಿಂದ 'ಜೇಮ್ಸ್' ಸಿನಿಮಾ ಜಾತ್ರೆ ಶುರುವಾಗಲಿದೆ. ಸಿನಿಮಾವನ್ನು ಅದ್ಧೂರಿಯಾಗಿ ಬರವಾಗಿ ಮಾಡಿಕೊಳ್ಳಲು ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಚಿತ್ರತಂಡ 'ಜೇಮ್ಸ್' ಪ್ರೀ-ರಿಲೀಸ್​ ಇವೆಂಟ್​ (James Pre-Release Event) ನಡೆಸೋಕೆ ಸಿದ್ಧತೆ ಮಾಡಿಕೊಂಡಿದೆ. 

ಹೌದು! ಮಾರ್ಚ್​ 13 ಭಾನುವಾರದಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ (Palace Ground) ರಾತ್ರಿ 7ಗಂಟೆಗೆ ಅದ್ದೂರಿಯಾಗಿ 'ಜೇಮ್ಸ್' ಪ್ರೀ-ರಿಲೀಸ್​ ಇವೆಂಟ್ ಕಾರ್ಯಕ್ರಮ ನಡೆಯುತ್ತಿದೆ. ವಿಶೇಷವಾಗಿ ಪ್ಯಾಲೇಸ್​ ಗ್ರೌಂಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಮುಖ್ಯ ಅತಿಥಿಯಾಗಿ ಅಪ್ಪು ಪತ್ನಿ ಅಶ್ವಿನಿ (Ashwini Puneeth Rajkumar), ಪುನೀತ್​ ಸಹೋದರರಾದ ಶಿವರಾಜ್​ಕುಮಾರ್ (Shivarajkumar) ಹಾಗೂ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಸೇರಿದಂತೆ ದೊಡ್ಮನೆ ಬಳಗವೇ ಅಲ್ಲಿ ಸೇರುವ ಸಾಧ್ಯತೆ ಇದೆ. ಮಾತ್ರವಲ್ಲದೇ, ಚಿತ್ರರಂಗದ ಅನೇಕ ಸ್ಟಾರ್‌ಗಳು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆಯಿದ್ದು, ಈ ಅದ್ದೂರಿ ಪ್ರೀ-ರಿಲೀಸ್​ ಇವೆಂಟ್​ಗೆ ಸಾಕ್ಷಿಯಾಗಲಿದ್ದಾರೆ.

James 2022: ಪುನೀತ್ ರಾಜ್‍ಕುಮಾರ್ 'ಸಲಾಂ ಸೋಲ್ಜರ್' ಹಾಡನ್ನು ಲಾಂಚ್ ಮಾಡಿದ ಕಿಚ್ಚ ಸುದೀಪ್

ಮುಖ್ಯವಾಗಿ ಅಭಿಮಾನಿಗಳು ಈ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಈ ಇವೆಂಟ್​ ಓಪನ್​ ಗ್ರೌಂಡ್​ನಲ್ಲಿ ನಡೆಯುತ್ತಿರುವುದರಿಂದ ಅಭಿಮಾನಿಗಳಿಗೆ ಯಾವುದೇ ಪಾಸ್​ ಅಗತ್ಯವಿರುವುದಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. ಈ ಹಿಂದೆ 'ಜೇಮ್ಸ್​' ಪ್ರೀ-ರಿಲೀಸ್​ ಇವೆಂಟ್​ ಬಗ್ಗೆ ವದಂತಿಯೊಂದು ಹರಿದಾಡಿತ್ತು. ಚಿತ್ರತಂಡ ಮಾರ್ಚ್​ 6ರಂದು ಹೊಸಪೇಟೆಯಲ್ಲಿ (Hosapete) ಭರ್ಜರಿ ಪ್ರೀ-ರಿಲೀಸ್​ ಇವೆಂಟ್​ ನಡೆಸಲು ನಿರ್ಧರಿಸಿದೆ ಎನ್ನಲಾಗಿತ್ತು. 

Puneeth Rajkumar Starrer James Movie Pre Release Event in Palace Ground for March 13th gvd

ಈ ಕಾರ್ಯಕ್ರಮಕ್ಕೆ ಟಾಲಿವುಡ್‌ನ ಜ್ಯೂ.ಎನ್​ಟಿಆರ್ (Jr NTR) ಹಾಗೂ ಚಿರಂಜೀವಿ (Chiranjeevi) ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಈ ಬಗ್ಗೆ ಚಿತ್ರತಂಡವೇ ಸ್ಪಷ್ಟನೆ ನೀಡಿತ್ತು. ಈಗ ಬೆಂಗಳೂರಿನಲ್ಲೇ ಅದ್ದೂರಿ ಕಾರ್ಯಕ್ರಮ ನಡೆಯುತ್ತಿದೆ. ಸದ್ಯ ಶುಕ್ರವಾರವಷ್ಟೇ ಸಿನಿಮಾದ  'ಸಲಾಂ ಸೋಲ್ಜರ್​..' (Salaam Soldier) ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಆಗಿತ್ತು. ವಿಶೇಷವಾಗಿ ಈ ಹಾಡನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಬಿಡುಗಡೆ ಮಾಡಿದ್ದರು. 'ಪಿಆರ್​ಕೆ ಆಡಿಯೋ' (PRK Audio) ಮೂಲಕ ಬಿಡುಗಡೆ ಆಗಿರುವ ಈ ಹಾಡಿನಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಸೈನಿಕನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. 

James 2022: 'ಜೇಮ್ಸ್' ಪ್ರೀ-ರಿಲೀಸ್ ಹೊಸಪೇಟೆಯಲ್ಲಿ ಮಾಡಿ: ನಿರ್ಮಾಪಕರಿಗೆ ಅಭಿಮಾನಿಗಳ ಮನವಿ

ಇನ್ನು 'ಜೇಮ್ಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಪುನೀತ್‌ಗೆ ಎರಡನೇ ಬಾರಿಗೆ ನಾಯಕಿಯಾಗಿ ಕಾಲಿವುಡ್‌ನ ಪ್ರಿಯಾ ಆನಂದ್ (Priya Anand) ಜೋಡಿಯಾಗಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶರತ್ ಕುಮಾರ್, ಶ್ರೀಕಾಂತ್,‌ ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಸೇರಿದಂತೆ ದೊಡ್ಡ ತಾರಬಳಗ ಈ ಚಿತ್ರಕ್ಕಿದ್ದು, ಸ್ವಾಮಿ ಜೆ ಗೌಡ ಕ್ಯಾಮರಾ ಕೈಚಳಕ, ಚರಣ್ ರಾಜ್ ಸಂಗೀತ ಸಂಯೋಜನೆಯಿದೆ. ಕಿಶೋರ್ ಪತ್ತಿಕೊಂಡ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಟಿಕೆಟ್​ ಬುಕಿಂಗ್​ ಓಪನ್​ ಆಗಿದ್ದು, ಟಿಕೆಟ್​ ಖರೀದಿಸಲು ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ ಮುಗಿ ಬಿದ್ದಿದ್ದಾರೆ.

Follow Us:
Download App:
  • android
  • ios