ರಾಜರ ರಾಜ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಹು ನಿರೀಕ್ಷಿತ 'ಜೇಮ್ಸ್' ಚಿತ್ರದ 'ಸಲಾಂ ಸೋಲ್ಜರ್​..' ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಆಗಿದೆ. ಈ ಹಾಡನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ, ಚೇತನ್ ಕುಮಾರ್ (Chetan Kumar) ನಿರ್ದೇಶನದ 'ಜೇಮ್ಸ್' (James) ಚಿತ್ರದ ಬಿಡುಗಡೆಗೆ ರಾಜ್ಯಾದ್ಯಂತ ಕಾತರ ಹೆಚ್ಚಾಗಿದೆ. ಪುನೀತ್ ಹುಟ್ಟುಹಬ್ಬಕ್ಕೆ 'ಜೇಮ್ಸ್‌' ಸಿನಿಮಾ ರಿಲೀಸ್ ಆಗಲಿದೆ. ಅಂದರೆ ಮಾರ್ಚ್ 17ಕ್ಕೆ ಪವರ್‌ಫುಲ್ ಸಿನಿಮಾ 'ಜೇಮ್ಸ್‌' ತೆರೆ ಕಾಣಲಿದೆ. ಈ ಹೊತ್ತಲ್ಲೇ ಅಪ್ಪು ಅಭಿನಯದ ಕೊನೆಯ ಸಿನಿಮಾದ 'ಸಲಾಂ ಸೋಲ್ಜರ್​..' (Salaam Soldier) ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಆಗಿದೆ. ವಿಶೇಷವಾಗಿ ಈ ಹಾಡನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಬಿಡುಗಡೆ ಮಾಡಿದ್ದಾರೆ. 'ಪಿಆರ್​ಕೆ ಆಡಿಯೋ' (PRK Audio) ಮೂಲಕ ಬಿಡುಗಡೆ ಆಗಿರುವ ಈ ಹಾಡಿನಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಸೈನಿಕನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಸೋಲ್ಜರ್ ಲುಕ್‌ನಲ್ಲಿ ಪುನೀತ್ ಅವರನ್ನು ಕಂಡು ಅಭಿಮಾನಿಗಳು (Fans) 'ಸಲಾಂ ಅಪ್ಪು' ಎಂದು ಜೈಕಾರ ಹಾಕುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ 'ಸಲಾಂ ಸೋಲ್ಜರ್​..' ಹಾಡಿಗೆ ಚೇತನ್​ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಸಂಜಿತ್​ ಹೆಗಡೆ (Sanjith Hegde) ಮತ್ತು ಚರಣ್​ ರಾಜ್ (Charan Raj)​​​ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ. ಸಾಂಗ್​​ ನೋಡಿ ಖುಷಿಪಟ್ಟಿರುವ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈ ಚಿತ್ರದ ಹಾಡುಗಳಿಗೆ ಯುವ ಸಂಗೀತ ನಿರ್ದೇಶಕ ಚರಣ್​ ರಾಜ್​ ಸಂಗೀತ ನೀಡಿದ್ದಾರೆ. ಕಿಶೋರ್​ ಪತ್ತಿಕೊಂಡ (Kishore Pathikonda) ಅವರ ನಿರ್ಮಾಣದಲ್ಲಿ 'ಜೇಮ್ಸ್' ಸಿನಿಮಾ ಮೂಡಿಬಂದಿದ್ದು, ಆ ನಿರೀಕ್ಷೆಯನ್ನು ಡಬಲ್​ ಮಾಡುವ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ. 

James 2022: 'ಜೇಮ್ಸ್' ಪ್ರೀ-ರಿಲೀಸ್ ಹೊಸಪೇಟೆಯಲ್ಲಿ ಮಾಡಿ: ನಿರ್ಮಾಪಕರಿಗೆ ಅಭಿಮಾನಿಗಳ ಮನವಿ

ಇತ್ತೀಚೆಗಷ್ಟೇ ಚಿತ್ರದ 'ಟ್ರೇಡ್​ಮಾರ್ಕ್​..' (Trademark) ಲಿರಿಕಲ್​ ವಿಡಿಯೋ ಸಖತ್​ ಸೌಂಡು ಮಾಡಿತ್ತು. ಟ್ರೇಡ್‌ಮಾರ್ಕ್‌ ಹಾಡಿನ ಆರಂಭದಲ್ಲಿ 'ಜೇಮ್ಸ್' ಸಿನಿಮಾ ಮುಹೂರ್ತದಲ್ಲಿ ಅಶ್ವಿನಿ (Ashwini Puneeth) ಕ್ಲಾಪ್ ಹೊಡೆದಿರುವ ವಿಡಿಯೋವನ್ನೂ ಸೇರಿಸಲಾಗಿತ್ತು. ಆನಂತರ ಹಾಡಿನಲ್ಲಿ ರಚಿತಾ ರಾಮ್ (Rachita Ram), ಶ್ರೀಲೀಲಾ (Shreeleela), ಚರಣ್ ರಾಜ್, ಚಂದನ್ ಶೆಟ್ಟಿ, ಯುವ ರಾಜ್‌ಕುಮಾರ್, ಆಶಿಕಾ ರಂಗನಾಥ್ (Ashika Ranganath) ಹೆಜ್ಜೆ ಹಾಕಿದ್ದರು. ಸಿನಿಮಾ ಚಿತ್ರೀಕರಣದ ಸಣ್ಣ ಪುಟ್ಟ ವಿಡಿಯೋ ಕ್ಲಿಪ್‌ಗಳನ್ನು ಸಹ ಸೇರಿಸಲಾಗಿತ್ತು. ಈ ಮೂಲಕ ಅಪ್ಪು ಸಿನಿಮಾಗೆ ಇಡೀ ಚಿತ್ರರಂಗವೇ ಸಾಥ್ ಕೊಟ್ಟಿತ್ತು.



'ಜೇಮ್ಸ್' ಚಿತ್ರಕ್ಕೆ ಸೆನ್ಸಾರ್​ನಲ್ಲಿ ಯಾವುದೇ ಕಟ್​ ಇಲ್ಲದೆ ಯು/ಎ ಪ್ರಮಾಣಪತ್ರ (UA Censor Certificate) ಸಿಕ್ಕಿದೆ. ಇದರ ಜತೆಗೆ ಸಿನಿಮಾದಲ್ಲಿ ಯಾವುದೇ ದೃಶ್ಯವನ್ನು ಕಟ್​ ಮಾಡಲು ಸೆನ್ಸಾರ್ ಮಂಡಳಿ ಸೂಚನೆ ನೀಡಿಲ್ಲ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದರು. ವಿಶೇಷವಾಗಿ 'ಜೇಮ್ಸ್'​ ಸಿನಿಮಾದಲ್ಲಿ ಪುನೀತ್​ ಪಾತ್ರಕ್ಕೆ ಅವರ ಸಹೋದರ ಶಿವರಾಜ್​ಕುಮಾರ್ (Shivarajkumar) ಡಬ್​ ಮಾಡಿದ್ದಾರೆ. ಸದ್ಯ ಆಯಾಯ ಪ್ರದೇಶಗಳ ಪುನೀತ್ ಅಭಿಮಾನಿಗಳು (Fans) ಮಾ.17ರಂದು ದೊಡ್ಡ ಮಟ್ಟದಲ್ಲಿ 'ಜೇಮ್ಸ್' ಚಿತ್ರವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರಕ್ಕೆ ಟಿಕೆಟ್​ ಬುಕಿಂಗ್​ ಓಪನ್​ ಆಗಿದ್ದು, ಟಿಕೆಟ್​ ಖರೀದಿಸಲು ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ ಮುಗಿ ಬಿದ್ದಿದ್ದಾರೆ.

James 2022: ಮಾ.17ರಂದು ಏಕಕಾಲಕ್ಕೆ 5 ಭಾಷೆಯಲ್ಲಿ ಪುನೀತ್‌ ಸಿನಿಮಾ ಬಿಡುಗಡೆ

ಇನ್ನು 'ಜೇಮ್ಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಪುನೀತ್‌ಗೆ ಎರಡನೇ ಬಾರಿಗೆ ನಾಯಕಿಯಾಗಿ ಕಾಲಿವುಡ್‌ನ ಪ್ರಿಯಾ ಆನಂದ್ (Priya Anand) ಜೋಡಿಯಾಗಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶರತ್ ಕುಮಾರ್, ಶ್ರೀಕಾಂತ್,‌ ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಸೇರಿದಂತೆ ದೊಡ್ಡ ತಾರಬಳಗ ಈ ಚಿತ್ರಕ್ಕಿದ್ದು, ಸ್ವಾಮಿ ಜೆ ಗೌಡ ಕ್ಯಾಮರಾ ಕೈಚಳಕ, ಚರಣ್ ರಾಜ್ ಸಂಗೀತ ಸಂಯೋಜನೆಯಿದೆ. ಕಿಶೋರ್ ಪತ್ತಿಕೊಂಡ ಚಿತ್ರವನ್ನು ನಿರ್ಮಿಸಿದ್ದಾರೆ.

YouTube video player