James 2022: 'ಜೇಮ್ಸ್' ಪ್ರೀ-ರಿಲೀಸ್ ಹೊಸಪೇಟೆಯಲ್ಲಿ ಮಾಡಿ: ನಿರ್ಮಾಪಕರಿಗೆ ಅಭಿಮಾನಿಗಳ ಮನವಿ

ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ 'ಜೇಮ್ಸ್' ಚಿತ್ರ ಮಾರ್ಚ್‌ 17ಕ್ಕೆ ರಿಲೀಸ್ ಹಿನ್ನಲೆಯಲ್ಲಿ ಚಲನಚಿತ್ರವನ್ನು ಹೊಸಪೇಟೆಯಲ್ಲಿ ಅದ್ದೂರಿಯಾಗಿ ರಿಲೀಸ್ ಆಗಬೇಕೆಂದು ಅಭಿಮಾನಿಗಳು ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

Puneeth Rajkumar Fans Plea to Producer Kishore Pathikonda for Pre Release the Film James in the Hosapete gvd

ವಿಜಯನಗರ (ಮಾ.10): ಸ್ಯಾಂಡಲ್‌ವುಡ್‌ನ ಮೇರುನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಕೊನೆಯ 'ಜೇಮ್ಸ್' (James) ಚಿತ್ರ ಮಾರ್ಚ್‌ 17ಕ್ಕೆ ರಿಲೀಸ್ ಹಿನ್ನಲೆಯಲ್ಲಿ ಚಲನಚಿತ್ರವನ್ನು ಹೊಸಪೇಟೆಯಲ್ಲಿ (Hosapete) ಅದ್ದೂರಿಯಾಗಿ ರಿಲೀಸ್ ಆಗಬೇಕೆಂದು ಅಭಿಮಾನಿಗಳು ನಿರ್ಮಾಪಕ ಕಿಶೋರ್ ಪತ್ತಿಕೊಂಡ (Kishore Pathikonda) ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಹಂಪಿ ರಸ್ತೆಯಲ್ಲಿರುವ ಬಾಲ ಚಿತ್ರಮಂದಿರದ ಮುಂದೆ ಜಮಾಯಿಸಿದ ಅಭಿಮಾನಿಗಳು ಅದರ ಮಾಲೀಕ ಹಾಗೂ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರಿಗೆ ಮನವಿ ಮಾಡಿಕೊಂಡರು. 

ಈ ಹಿಂದೆ 'ಜೇಮ್ಸ್' ಚಿತ್ರದ ಪ್ರೀ-ರಿಲೀಸ್ (Pre-Release) ಕಾರ್ಯಕ್ರಮವನ್ನು ಇಲ್ಲಿಯೇ ಮಾಡುತ್ತೇವೆ ಎಂದಿದ್ದರು. ಆದರೆ ಈಗದು ಶಕ್ತಿಧಾಮದಲ್ಲಿ ಮಾಡಲಾಗುತ್ತಿದೆ. ಅದೂ ಸಂತೋಷದ ವಿಚಾರವೇ, ಆದರೆ ಇಲ್ಲಿಯೂ ಸಹ ಪ್ರೀ-ರಿಲೀಸ್ ಮಾಡಬೇಕು ಎಂದು‌ ಮನವಿ ಮಾಡಿಕೊಂಡರು. ಇನ್ನು ಅಪ್ಪು ಅವರ ಕೊನೆಯ ಸಿನಿಮಾ ಆಗಿರೋ ಕಾರಣ ನಮಗೆ ದೊಡ್ಡ ಕಟೌಟ್‌ಗಳನ್ನು (Cutout) ಮಾಡಿಕೊಡಿ. ಹೊಸಪೇಟೆಯಲ್ಲಿನ  ಟಾಕೀಸ್‌ಗಳಲ್ಲಿ ಸಣ್ಣಪುಟ್ಟ ಕಟೌಟ್ ಇವೆ, ಅವುಗಳನ್ನು ತೆರವು ಮಾಡಿ ದೊಡ್ಡ ಕಟೌಟ್‌ಗಳು ಹಾಕಿ. ರಿಲೀಸ್ ದಿನ ಮಹಿಳೆಯರಿಗಾಗಿ ಒಂದು ಪ್ರತ್ಯೇಕ ಟಾಕೀಸ್ ಮೀಸಲೀಡಬೇಕು. 

James 2022: ಪುನೀತ್ ನಟನೆಯ 'ಜೇಮ್ಸ್' ಮತ್ತಷ್ಟು ಅಪ್‌ಡೇಟ್ಸ್

ಪುನೀತ್ ರಾಜ್‍ಕುಮಾರ್ ಅವರು ಹೊಸಪೇಟೆಯ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು. ಅವರ ಕೊನೆಯ ಚಿತ್ರ 'ಜೇಮ್ಸ್'ನಲ್ಲೂ ಹೊಸಪೇಟೆಯನ್ನು ಮೆರೆಸಿದ್ದಾರೆ. ಪುರುಷರಿಗಿಂತ, ಮಹಿಳೆಯರ ಫ್ಯಾನ್ಸ್ ಸಂಖ್ಯೆ ಹೆಚ್ಚಳ ಇದ್ದಾರೆ ಹೀಗಾಗಿ ಮಹಿಳೆಯರಿಗಾಗಿ ಪ್ರತ್ಯೇಕ ಸಿನಿಮಾ ಮಂದಿರ ಮೀಸಲಿಡುವಂತೆ ಅಭಿಮಾನಿಗಳು ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರಿಗೆ ಒತ್ತಾಯಿಸಿದರು. ಸದ್ಯ 'ಜೇಮ್ಸ್' ಚಿತ್ರಕ್ಕೆ ಸೆನ್ಸಾರ್​ನಲ್ಲಿ ಯಾವುದೇ ಕಟ್​ ಇಲ್ಲದೆ ಯು/ಎ ಪ್ರಮಾಣಪತ್ರ (UA Censor Certificate) ಸಿಕ್ಕಿದೆ. ಇದರ ಜತೆಗೆ ಸಿನಿಮಾದಲ್ಲಿ ಯಾವುದೇ ದೃಶ್ಯವನ್ನು ಕಟ್​ ಮಾಡಲು ಸೆನ್ಸಾರ್ ಮಂಡಳಿ ಸೂಚನೆ ನೀಡಿಲ್ಲ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ. 

Puneeth Rajkumar Fans Plea to Producer Kishore Pathikonda for Pre Release the Film James in the Hosapete gvd

ಇತ್ತೀಚೆಗೆ ಬಿಡುಗಡೆಯಾದ 'ಜೇಮ್ಸ್​' ಸಿನಿಮಾದ ಟೀಸರ್​ನಲ್ಲಿ (Teaser) ಪುನೀತ್ ಮಾಸ್ ಆ್ಯಂಡ್ ಕ್ಲಾಸ್ ಹೀರೋ ಆಗಿ ಅಬ್ಬರಿಸಿದ್ದರು‌. ಇದಾದ ಬಳಿಕ 'ಟ್ರೇಡ್​ಮಾರ್ಕ್'​ (Trademark) ಸಾಂಗ್​ ರಿಲೀಸ್​ ಮಾಡಲಾಯಿತು. ಇದನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದರು. ಈ ಹಾಡು ಯೂಟ್ಯೂಬ್​ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ವಿಶೇಷವಾಗಿ 'ಜೇಮ್ಸ್'​ ಸಿನಿಮಾದಲ್ಲಿ ಪುನೀತ್​ ಪಾತ್ರಕ್ಕೆ ಅವರ ಸಹೋದರ ಶಿವರಾಜ್​ಕುಮಾರ್ (Shivarajkumar) ಡಬ್​ ಮಾಡಿದ್ದಾರೆ. ಸದ್ಯ ಆಯಾಯ ಪ್ರದೇಶಗಳ ಪುನೀತ್ ಅಭಿಮಾನಿಗಳು (Fans) ಮಾ.17ರಂದು ದೊಡ್ಡ ಮಟ್ಟದಲ್ಲಿ 'ಜೇಮ್ಸ್' ಚಿತ್ರವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. 

James 2022: ಪುನೀತ್ ರಾಜ್‍ಕುಮಾರ್ ಪವರ್‌ಪ್ಯಾಕ್ಡ್ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್

ಇನ್ನು 'ಜೇಮ್ಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್‌ನ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಇದರ ಜೊತೆಗೆ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಶರತ್ ಕುಮಾರ್, ಶ್ರೀಕಾಂತ್,‌ ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಸೇರಿದಂತೆ ದೊಡ್ಡ ತಾರಬಳಗ ಈ ಚಿತ್ರಕ್ಕಿದ್ದು, ಸ್ವಾಮಿ ಜೆ ಗೌಡ ಕ್ಯಾಮರಾ ಕೈಚಳಕ, ಚರಣ್ ರಾಜ್ ಸಂಗೀತ ಸಂಯೋಜನೆಯಿದೆ. ಚೇತನ್ ಕುಮಾರ್ (Chetan Kumar) 'ಜೇಮ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios