ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಅಪ್ಪು ಸಹೋದರಿಯರು. ಎರಡು ನಕ್ಷತ್ರ ಸಿನಿಮಾದ ಬಗ್ಗೆ ಲಕ್ಷ್ಮಿ-ಪೂರ್ಣಿಮಾ ಮಾತು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ರಿಯಾಲಿಟಿ ಶೋನಲ್ಲಿ ಅಪ್ಪು ಸೆಲೆಬ್ರೇಷನ್ ಮಾಡಲಾಗಿತ್ತು. ಸೃಜನ್ ಲೋಕೇಶ್, ತಾರಾ ಅನಿರಾಧ ಮತ್ತು ಅನುಪ್ರಭಾಕರ್ ತೀರ್ಪುಗಾರಿಕೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದ್ದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹೋದರಿಯರಾದ ಲಕ್ಷ್ಮಿ ಮತ್ತು ಪೂರ್ಣಿಮಾ ಅವರು ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ಅಪ್ಪು ಜರ್ನಿ ಮತ್ತು ಅತಿ ಹೆಚ್ಚು ನೆನಪು ಇರುವ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ.
'ಅಪ್ಪು ಹುಟ್ಟಿದ್ದಾಗ ನಾವು ಮೊದಲು ನೋಡಿದ್ದು ತೊಟ್ಟಿಲಿನಲ್ಲಿ. ಅದೇ ಮೊದಲು ನಾವು ಚಿಕ್ಕ ಮಗುವನ್ನು ನೋಡಿದ್ದು ನಮ್ಮ ಕೈಯಲ್ಲಿ ಎತ್ತಿಕೊಳ್ಳಲು ಆಗುತ್ತಿರಲಿಲ್ಲ ಆದರೆ ಅಜ್ಜಿ ನಮ್ಮ ತೊಡೆ ಮೇಲೆ ಮಲಗಿಸಿ ತೋರಿಸಿದ್ದರು. ಅವನ ಚಿಕ್ಕ ಧ್ವನಿ ಅಳುತ್ತಿದ್ದ ಕ್ಷಣ ಎಲ್ಲವೂ ನೆನಪಿದೆ' ಎಂದು ಎರಡನೇ ಅಕ್ಕ ಪೂರ್ಣಿಮಾ ಅಪ್ಪು ಬಗ್ಗೆ ಹೇಳುತ್ತಾರೆ.
'ಪೂರ್ಣಿಮಾಗೆ ಅಪ್ಪು ಕಪ್ಪು ಹುಟ್ಟಿದ್ದ ಅಂತ ಬೇಸರ ಇತ್ತು. ನಮ್ಮ ಅಜ್ಜಿ ಹತ್ರ ಹೋಗಿ ಅವ್ವ ಅವ್ವ ನನ್ನ ಪಾಪು ಕಪ್ಪಗಿದೆ ನನ್ನ ತಮ್ಮ ಕಪ್ಪಗಿದ್ದಾನೆ ಅಂತಿದ್ದಳು. ಆಗ ಅಮ್ಮ ಹೇಳಿದ್ದರು ರಾಮ ಕೃಷ್ಣ ಇಬ್ಬರೂ ಕಪ್ಪು ಅದಿಕ್ಕೆ ಅವನು ಕಪ್ಪು ಹುಟ್ಟಿದ್ದಾನೆ ಅವನು ದೇವರು. ಕಪ್ಪು ಕಸ್ತೂರಿ ಬಿಳಿ ಕಿಸ್ಬಾಯಿ ಅಂತ ಹೇಳುತ್ತಿದ್ದರು.' ಎಂದು ದೊಡ್ಡ ಅಕ್ಕ ಲಕ್ಷ್ಮಿ ಮಾತನಾಡಿದ್ದಾರೆ.
'ನಮ್ಮ ಚೆನ್ನೈ ಮನೆ ಎದುರು ಗ್ಯಾರೇಜ್ ಇತ್ತು ಅಲ್ಲಿ ಸಣ್ಣ ಪುಟ್ಟ ಮಕ್ಕಳು ತುಂಬಾ ಓಡಾಡುತ್ತಿದ್ದರು ಅಲ್ಲಿದ್ದ ಚಿಕ್ಕ ಚಿಕ್ಕ ಮನೆಗಳು ಕೆಲಸ ಮಾಡುವವರ ಮಕ್ಕಳಿದ್ದರು ಅವರ ಜೊತೆ ಅಪ್ಪು ಹೋಗಿ ಆಟವಾಡುತ್ತಿದ್ದ. ಅಪ್ಪುಗೆ ಫ್ರೆಂಡ್ಸ್ ಅಂದ್ರೆ ತುಂಬಾನೇ ಇಷ್ಟ ಅವರ ಆಟವಾಡಿ ಮನೆಗೆ ಕರೆದುಕೊಂಡು ಬರುತ್ತಿದ್ದ ಚಾಕೊಲೇಟ್ ಅದು ಇದು ಅಂತ ನಮ್ಮ ಮನೆಯಲ್ಲಿ ಏನಾದರೂ ಇದ್ದೇ ಇರೋದು ಅದನ್ನು ಅವರಿಗೆ ಕೊಟ್ಟು ಇವನೂ ಎಂಜಾಯ್ ಮಾಡುತ್ತಿದ್ದ. ಅಪ್ಪು ಯಾವಾಗಲೂ ರೋಡಲ್ಲೇ ಆಟವಾಡುತ್ತಿದ್ದ. ಚೆನ್ನೈನಿಂದ ಬೆಂಗಳೂರಿನಲ್ಲಿರುವ ಅಕ್ಕನ ಮನೆಗೂ ಬಂದಾಗಲೂ ಇದನ್ನೇ ಮಾಡುತ್ತಿದ್ದ. ಆಟ ಅಂದ್ರೆ ತುಂಬಾ ಇಷ್ಟ ಹೀಗಾಗಿ ನಾನ್ ಸ್ಟಾಪ್ ಆಟವಾಡುತ್ತಿದ್ದ' ಎಂದು ಪೂರ್ಣಿಮಾ ಹೇಳಿದ್ದಾರೆ.
Puneeth Rajkumar ಕೈಗೆ ಹಣ ಕೊಡುತ್ತಿರಲಿಲ್ಲ; ಸ್ಟ್ರಿಕ್ಟ್ ತಾಯಿ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್!
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ಸಹೋದರಿಯರಿಬ್ಬರು ಒಂದೇ ಬಣ್ಣದ ಸೀರಿ ಧರಿಸಿದ್ದರು ಇದರ ಹಿಂದೆ ಏನಾದರೂ ಇದ್ದೇಶ ಇದ್ಯಾ ಎಂದು ತಾರ ಅನುರಾಧ ಪ್ರಶ್ನೆ ಮಾಡಿದ್ದಾ 'ಈ ಎರಡು ನೀಲಿ ಸೀರೆಗಳನ್ನು ಅಪ್ಪು ಅಕ್ಕಂದಿರಿಗೆ ಗಿಫ್ಟ್ ಕೊಟ್ಟಿದ್ದಾರೆ ಅದಿಕ್ಕೆ ಇದನ್ನು ಧರಿಸಿ ಇಲ್ಲಿದೆ ಬಂದಿದ್ದಾರೆ' ಎಂದು ಹೇಳಿದ್ದರು.
ಎರಡು ನಕ್ಷತ್ರ ಸಿನಿಮಾ:
'ಎರಡು ಕನಸು ಆಕ್ಟ್‌ನ ಎರಡು ಅವಳಿ ಮಕ್ಕಳು ಮಾಡಿರುವುದನ್ನು ನೋಡಿ ತುಂಬಾನೇ ಖುಷಿ ಆಯ್ತು. ಇದನ್ನು ನೋಡಿದ್ದಾಗ ಅಪ್ಪು ನೆನಪಾಗುತ್ತಾನೆ. ಎರಡು ಸಿನಿಮಾಗೆ ಲೋಹಿತ್ ಕೂದಲು ಬೆಳಸಬೇಕಿತ್ತು ಪ್ರಹ್ಲಾದ ಆದ್ಮೇಲೆ ಎರಡು ಕನಸುಗಳು. ಆ ಕೂದಲಿನಿಂದ ಅಪ್ಪುಗೆ ಹಿಂಸೆ ಆಗುತ್ತಿತ್ತು ಉದ್ದ ಕೂದಲನ್ನು ಯಾವಾಗಲೂ ಸರಿ ಮಾಡಬೇಕಿತ್ತು ಹೇರ್ ಸ್ಟೈಲ್ ಮಾಡುವವರು ಬಂದ್ರೆ ಸಾಕು ಅಯ್ಯೋ ಇವ್ರು ಬಂದ್ರು ಸಖತ್ ಬೋರ್ ಎನ್ನುತ್ತಿದ್ದ. ಸುಮಾರು 7-8 ತಿಂಗಳು ಅದೇ ಹೇರ್ ಸ್ಟೈಲ್‌ನಲ್ಲಿದ್ದ' ಎಂದು ಅಕ್ಕ ಲಕ್ಷ್ಮಿ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ರಾಜ್‌ಕುಮಾರ್ ಬ್ಯಾನರ್ ಅಡಿ ಕನ್ನಡ ಚಿತ್ರರಂಗಕ್ಕೆ ಈ ನಟಿಯರನ್ನು ಪರಿಚಯಿಸಿದ್ದು ಪಾರ್ವತಮ್ಮ!
'ಎರಡು ನಕ್ಷತ್ರ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಾನೇ ಜೊತೆಗಿರುತ್ತಿದ್ದೆ. ಒಳಾಂಗಣ ಚಿತ್ರೀಕರನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಪ್ರತಿ ಸಲನೂ ಅಪ್ಪು ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರಬೇಕಿತ್ತು ಅದೇ ಜಾಗದಲ್ಲಿ ನಿಲ್ಲಬೇಕಿತ್ತು ಅದೇ ಆಂಗಲ್‌ನಲ್ಲಿ ಮುಂದಿನ ಶೂಟ್ ಆಗಬೇಕಿತ್ತು ಆಗ ನಡೆಯುತ್ತಿದ್ದ ಚಿತ್ರೀಕರಣದ ದಿನಗಳನ್ನು ನೆನಪು ಮಾಡಿಕೊಂಡರೆ ಅನಿಸುತ್ತದೆ ಅಪ್ಪುಗೆ ಅಷ್ಟೊಂದು ತಾಳ್ಮೆ ಇತ್ತಾ? ಆ ವಯಸ್ಸಿಗೆ? ಈಗ ಮಕ್ಕಳು ಮಾಡುವುದನ್ನು ನೋಡಲು ಆಶ್ಚರ್ಯವಾಗುತ್ತದೆ. ಅಪ್ಪು ಜೊತೆ ಸೆಟ್‌ನಲ್ಲಿ ನಾವು ಮತ್ತು ಹೊನ್ನವಳ್ಳಿ ಕೃಷ್ಣ ಇರುತ್ತಿದ್ದರು ಅವರು ಇರಲೇ ಬೇಕು ಅವರು ಹೇಳಿಕೊಟ್ಟರೆ ಮಾತ್ರ ಅಪ್ಪು ಮಾಡುತ್ತಿದ್ದ. ಕೃಷ್ಣ ಅವರು ಅಪ್ಪುಗೆ ರೈಟ್ ಹ್ಯಾಂಡ್ ನನ್ನ ಜೀವನದಲ್ಲಿ ಅವರನ್ನು ಮರೆಯುವುದಕ್ಕೆ ಆಗೋಲ್ಲ' ಎಂದು ಪೂರ್ಣಿಮಾ ಹೇಳಿದ್ದಾರೆ.
