Puneeth Rajkumar ಕೈಗೆ ಹಣ ಕೊಡುತ್ತಿರಲಿಲ್ಲ; ಸ್ಟ್ರಿಕ್ಟ್‌ ತಾಯಿ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್!

ಅಮ್ಮ ಎಷ್ಟು ಸ್ಟ್ರಿಕ್ಟ್ ಎಂದು ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಪ್ಪು ವಿಡಿಯೋ ಈಗ ವೈರಲ್...

Puneeth Rajkumar talks about mother Dr Parvathamma Rajkumar in weekend with ramesh show vcs

ಕನ್ನಡ ಕಿರುತೆರೆ ಜನಪ್ರಿಯ ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದ ಮೊದಲ ಸೀಸನ್‌ನ ಮೊದಲ ಅತಿಥಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Dr Puneeth Rajkumar) ಅಗಮಿಸಿದ್ದರು. ಅಪ್ಪು ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ, ಅಪ್ಪು ಹಳೆ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ತಾಯಿ ಡಾ.ಪಾರ್ವತಮ್ಮ ರಾಜ್‌ಕುಮಾರ್ ಎಷ್ಟು ಸ್ಟ್ರಿಕ್ಟ್ ಆಗಿದ್ದರು, ಮಗನ ಮೇಲೆ ಎಷ್ಟು ನಂಬಿಕೆ ಇತ್ತು? ಹೇಗೆ ಕೆಲಸ ಬ್ಯಾಲೆನ್ಸ್‌ ಮಾಡುತ್ತಿದ್ದರು ಎಂದು ಅಪ್ಪು ಹಂಚಿಕೊಂಡಿದ್ದಾರೆ. 

ರಾಜ್ಯದಾದ್ಯಂತ ಅಭಿಮಾನಿಗಳಿಂದ ಅಪ್ಪು ಪುಣ್ಯಸ್ಮರಣೆ, ಪ್ರತೀ ಜಿಲ್ಲೆಯಲ್ಲೂ ಅನ್ನ ಸಂತರ್ಪಣೆ

'ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ತಮ್ಮ ತಾಯಿ ಬಗ್ಗೆ ತುಂಬಾ ಖುಷಿ ಪಟ್ಟು ಇಷ್ಟ ಪಟ್ಟು ಮಾತನಾಡುತ್ತಾರೆ. ಚಿಕ್ಕವಯಸ್ಸಿನಲ್ಲಿ ನನ್ನ ತಾಯಿಗೆ ನಾನು ದೊಡ್ಡ ಟಾರ್ಚರ್. ನನ್ನ ತಾಯಿಗೆ ಮೊದಲೇ ಟೆನ್ಶನ್ ಹೆಚ್ಚಿಗೆ ಇತ್ತು ಮೊದಲು ಅಪ್ಪಾಜಿ, ಎರಡು ಆಫೀಸ್‌ ಮೂರು ಮನೆ ...ಈ ಮೂರು ಜೊತೆ ನಾನು. ನಾನು ಸಿಕ್ಕಾಪಟ್ಟೆ ತರ್ಲೆ ಹಠ ಮಾಡುವುದು ಜಾಸ್ತಿ. ಇದು ಬೇಕು ಅಂದ್ರೆ ಬೇಕು. ಶೂಟಿಂಗ್‌ಗೆ ಕರ್ಕೊಂಡು ಹೋದ್ಮೇಲೆ ನಾನು ಶೂಟಿಂಗ್ ಮಾಡ್ತೀನಿ ಅಂತ ಹೇಳಿದ್ನಾ ಯಾಕ್ ಕರ್ಕೊಂಡು ಬಂದಿದ್ದು? ಶೂಟಿಂಗ್ ಮಾಡ್ಬೇಕು ಅಂದ್ರೆ ನಾನು ಏನ್ ಕೇಳ್ತೀನಿ ಅದು ಕೊಡ್ಬೇಕು ಇಲ್ಲ ಅಂದ್ರೆ ಮಾಡಲ್ಲ. ಈ ಊಟ ಇಲ್ಲಿಂದನೇ ತಿನ್ನಬೇಕು ಅಲ್ಲಿಂದನೇ ಬರಬೇಕು ದಿನ ಬಿರಿಯಾನಿನೇ ಬೇಕು. ಒಂದು ವಯಸ್ಸು ಆದ್ಮೇಲೆ ಅಮ್ಮ ದುಡ್ಡು ಕೊಡುತ್ತಿರಲಿಲ್ಲ ತುಂಬಾ ಸ್ಟ್ರಿಕ್ಟ್ ಅಗಿರುತ್ತಿದ್ದರು ಆದರೆ ನನ್ನ ಜೀವನದ ಪ್ರತಿಯೊಂದು ಹಂತವನ್ನು ಅದ್ಭುತವಾಗಿ ನಿಭಾಯಿಸಿದ್ದರು. ಇದೆಲ್ಲಾ ಆದಮೇಲೆ ಬ್ಯುಸಿನೆಸ್ ಶುರು ಮಾಡಿದೆ ಏನೋ ಮಾಡಲು ಹೋಗಿ ಏನೋ ಮಾಡಿ ದುಡ್ಡು ಹಾಳು ಮಾಡಿದೆ...ನನ್ನ ತಾಯಿಗೆ ನನ್ನ ಮೇಲೆ ನಂಬಿಕೆ ಇತ್ತು ಪ್ರತಿ ಕ್ಷಣನೂ ನನ್ನನ್ನು ಸಪೋರ್ಟ್ ಮಾಡಿದ್ದಾರೆ. ತಪ್ಪು ಮಾಡಲಿ ಸರಿ ಮಾಡಲಿ ಪ್ರತಿಯೊಂದಕ್ಕೂ ಪ್ರೋತ್ಸಾಹ ನೀಡುವುದು ತಾಯಿ ಮಾತ್ರ' ಎಂದು ಪುನೀತ್ ಮಾತನಾಡಿದ್ದಾರೆ.

Puneeth Rajkumar talks about mother Dr Parvathamma Rajkumar in weekend with ramesh show vcs

ಅಪ್ಪು ಬಗ್ಗೆ ತಾಯಿ ಮಾತು: 

'6.10ಕ್ಕೆ ಅಪ್ಪು ಹುಟ್ಟಿದ್ದು. ಹೊಟ್ಟೆ ನೋವು ಬಂದಾಗ ಅನಿಸುತ್ತಿತ್ತು ಗಂಡು ಮಗು ಹುಟ್ಟಬಹುದು ಏಕೆಂದರೆ ಆಗ ಸ್ಕ್ಯಾನಿಂಗ್ ಇರಲಿಲ್ಲ. ಬಸರಿಯಲ್ಲಿ ಹೇಳುತ್ತಾರೆ ಬಲಗೈ ಹಿಡಿದುಕೊಂಡು ಕೂತ್ಕೊಂಡ್ರೆ ಗಂಡು ಮಗು ಆಗುತ್ತೆ ಎಡಗೈ ಬಳಸಿದ್ದರೆ ಹೆಣ್ಣು ಮಗು ಆಗುತ್ತೆ ಅಂತ. ಅಪ್ಪು ಹೊಟ್ಟೆಯಲ್ಲಿ ಇದ್ದಾಗ ನಾನು ಬರೀ ಬಲಗೈ ಬಳಸುತ್ತಿದ್ದೆ. ನನ್ನ ಎರಡನೇ ಮಗಳು ಪೂರ್ಣಿಮಾ ಅಪ್ಪು ಕಪ್ಪು ಹುಟ್ಟಿದ್ದಾನೆ ಅಂತ ಕಂಪ್ಲೇಂಟ್ ಮಾಡುತ್ತಿದ್ದಳು ಸಮಾಧಾನ ಮಾಡಲು ಹೇಳುತ್ತಿದ್ದೆ ಕೃಷ್ಣ ರಾಮ ಎಲ್ಲಾ ಕಪ್ಪು ಅದಿಕ್ಕೆ ಅವನು ಕಪ್ಪು ಹುಟ್ಟಿರುವುದು ಅವನು ದೇವ್ರು ನೀನು ಏನು ತಿಳ್ಕೋ ಬೇಡ ಎನ್ನುತ್ತಿದ್ದೆ. ಅಪ್ಪಾಜಿ ಒಂದು ದಿನ ಹೇಳಿದ್ದರು ನಮ್ಮಲ್ಲಿ ಹೇಳುತ್ತಾರೆ ಕಪ್ಪು ಕಸ್ತೂರಿ ಕೆಂಪು ಕಿಸ್ಬಾಯಿ ಅಂತ ನನ್ನ ಮಗ ಕಪ್ಪು ಹುಟ್ಟಿರುವುದಕ್ಕೆ ನನಗೆ ಇಷ್ಟ ಎಂದು ಹೇಳುತ್ತಿದ್ದರು. ಅಪ್ಪು ದೊಡ್ಡವನು ಆಗೋವರೆಗೂ ಪೂರ್ಣಿಮಾ ಏನ್ ಏನೋ ಕ್ರೀಮ್ ತಂದು ಹಚ್ಚುತ್ತಿದ್ದಳು. ಅವಳು ಬಂದ್ರೆ ಹೆದರಿಕೊಳ್ಳುತ್ತಿದ್ದ ಏನೋ ಹಚ್ಚುತ್ತಾಳೆ ಅಂತ' ಎಂದು ಪಾರ್ವತಮ್ಮ ರಾಜ್‌ಕುಮಾರ್ ಹೇಳಿದ್ದರು.

Latest Videos
Follow Us:
Download App:
  • android
  • ios