Asianet Suvarna News Asianet Suvarna News

Gajanana and Gang Song: 'ನಾನ್ ಒಳ್ಳೆಯವ್ನೇ' ಹಾಡಿಗೆ ದನಿಯಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್

ಫೆಬ್ರವರಿ 4ರಂದು‌ ರಾಜ್ಯಾದ್ಯಂತ ಚಿತ್ರಮಂದಿರಗಳ ಬೆಳ್ಳಿ ತೆರೆಮೇಲೆ ಗಜಾನನ ಗ್ಯಾಂಗ್ ಮಿಂಚೋದಕ್ಕೆ ಸಜ್ಜಾಗಿದೆ. ಈ ನಡುವೆ ಚಿತ್ರತಂಡ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಡಿರುವ ಸ್ಪೆಷಲ್‌ ಹಾಡೊಂದನ್ನು ರಿಲೀಸ್ ಮಾಡಿದೆ. 

Puneet Rajkumar Sings a Song Nan Olleyavne for a Kannada Movie Gajanana and Gang gvd
Author
Bangalore, First Published Jan 17, 2022, 8:50 PM IST

'ನಮ್ ಗಣಿ ಬಿಕಾಂ ಪಾಸ್' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ನಾಯಕ ಮತ್ತು ನಿರ್ದೇಶಕನಾಗಿ ಎಂಟ್ರಿ ಕೊಟ್ಟಿದ ನಟ ಅಭಿಷೇಕ್ ಶೆಟ್ಟಿ (Abhishek Shetty) ಆಕ್ಷನ್ ಕಟ್ ಹೇಳಿರುವ 'ಗಜಾನನ ಅಂಡ್ ಗ್ಯಾಂಗ್' (Gajanana and Gang) ಚಿತ್ರದ ಟ್ರೇಲರ್ (Trailer) ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದೆ. ಫೆಬ್ರವರಿ 4ರಂದು‌ ರಾಜ್ಯಾದ್ಯಂತ ಚಿತ್ರಮಂದಿರಗಳ ಬೆಳ್ಳಿ ತೆರೆಮೇಲೆ ಗಜಾನನ ಗ್ಯಾಂಗ್ ಮಿಂಚೋದಕ್ಕೆ ಸಜ್ಜಾಗಿದೆ. ಈ ನಡುವೆ ಚಿತ್ರತಂಡ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹಾಡಿರುವ ಸ್ಪೆಷಲ್‌ ಹಾಡೊಂದನ್ನು ರಿಲೀಸ್ ಮಾಡಿದೆ. 

ಹೌದು!  'ಗಜಾನನ ಅಂಡ್ ಗ್ಯಾಂಗ್' ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದನಿಯಾಗಿದ್ದಾರೆ. 'ನಾನ್ ಒಳ್ಳೆಯವ್ನೇ, ಆದ್ರೆ ನನ್ ಟೈಮೇ ಸರಿಯಿಲ್ಲ' (Naan Olleyavne) ಎಂಬ ಸಾಹಿತ್ಯವಿರುವ ಈ ಹಾಡು ಕಾಲೇಜಿನ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿದೆ. ಪುನೀತ್ ರಾಜ್​ಕುಮಾರ್ ದನಿಯಲ್ಲಿ ಮೂಡಿ ಬಂದಿರುವ ಹಾಡಿಗೆ ನಿರ್ದೇಶಕ ಅಭಿಷೇಕ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಪ್ರದ್ಯುತನ್ (Praddyottan) ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಪಕ್ಕಾ ಹಾಸ್ಯ ಪ್ರಧಾನ ಮತ್ತು ಯುವಪೀಳಿಗೆ ಸುತ್ತ ಗಿರಕಿ ಹೊಡೆಯುವ ಕಥೆ ಈ ಚಿತ್ರದಲ್ಲಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೇಲರನ್ನು ನಟಿ ಮೇಘನಾ ರಾಜ್​ (Meghana Raj) ಅವರು ಲಾಂಚ್​ ಮಾಡಿದ್ದರು.

Gajanana and Gang: ಅದಿತಿ ಪ್ರಭುದೇವ-ಶ್ರೀ ಮಹದೇವ್ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್​!

ಬಿಡುಗಡೆಯಾದ ಟ್ರೇಲರ್‌ನಲ್ಲಿ 'ಗಜಾನನ ಅಂಡ್ ಗ್ಯಾಂಗ್'ನ ಕಾಲೇಜ್ ಕಥೆಯಿದೆ. ಕಾಲೇಜಿನ ಹಿರೋ, ಹಿರೋಯಿನ್, ಗೆಳೆಯರು ಹಾಗೂ ವಿಲನ್‌ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹಾಸ್ಯಮಿಶ್ರಿತ ಸಂಭಾಷಣೆಗಳು ನೋಡುಗರಿಗೆ ಕಚಗುಳಿಯನ್ನಿಡುತ್ತದೆ. ಹಾಗೆ ಸೆಂಟಿಮೆಂಟ್ ದೃಶ್ಯಗಳು ಮನಕಲುಕುತ್ತವೆ. ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದರಲ್ಲೊಂದು ಫ್ರೆಂಡ್​ಶಿಪ್​ ಕಥೆಯಿದೆ. ನೀನು ಯಾವತ್ತು ಇವರ ಸಹವಾಸ ಬಿಡುತ್ತೀಯೋ ಅವತ್ತು ಉದ್ಧಾರ ಆಗುತ್ತೀಯ ಎಂದು ಒಂದು ದೃಶ್ಯದಲ್ಲಿ ಹಾಗೆ ಮತ್ತೊಂದು ಸೀನ್‌ನಲ್ಲಿ 'ಎಂತಹ ಪರಿಸ್ಥಿತಿಯಲ್ಲೂ ಏನೇ ಆದರೂ ನಿನ್ನ ಫ್ರೆಂಡ್ಸ್​ ಬಿಟ್ಟುಕೊಡಬೇಡ' ಎಂಬ ಡೈಲಾಗ್ ಶ್ರೀಗೆ ಅದಿತಿ​ ಹೇಳುವುದು ಸಸ್ಪೆನ್ಸ್ ಆಗಿ ಟ್ರೇಲರ್‌ನಲ್ಲಿ ಮೂಡಿಬಂದಿದೆ.
 


ಸದ್ಯ 'ಗಜಾನನ ಅಂಡ್ ಗ್ಯಾಂಗ್' ಚಿತ್ರತಂಡ ಚಿತ್ರದ ಪ್ರಚಾರವನ್ನು ವಿಶೇಷವಾಗಿ ನಡೆಸುತ್ತಿದೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ನಮ್ಮ ನಿರ್ದೇಶನ ತಂಡ ನಾಪತ್ತೆ, ಫೆಬ್ರವರಿ 4 ಕ್ಕೆ ಚಿತ್ರ ರಿಲೀಸ್‌ಗೆ ತಯಾರಿದೆ. ಆದರೆ ನಮ್ಮ ನಿರ್ದೇಶನ ತಂಡದವರು ಕಾರಣಾಂತರಗಳಿಂದ ಕಾಣೆಯಾಗಿದ್ದಾರೆ' ಎಂದು ಬರೆದುಕೊಂಡು ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಇನ್ನು ಚಿತ್ರದ ಟೈಟಲ್ ನೋಡಿದಾಕ್ಷಣ ಕಾಮಿಡಿ ಶೈಲಿಯ ಸಿನಿಮಾ ಅನಿಸಿದರೂ, ಯಾವುದೇ ಶೈಲಿಗೆ ಸೀಮಿತವಾಗದ ಸಿನಿಮಾ ಇದು. ಎಲ್ಲ ಅಂಶಗಳನ್ನೂ ಸೇರಿಸಿ, ಎಲ್ಲ ವರ್ಗದವರಿಗೂ ಕನೆಕ್ಟ್ ಆಗುವ ಕಥೆ ಈ ಚಿತ್ರದಲ್ಲಿದೆ ಎಂದು ಚಿತ್ರದ ನಿರ್ದೇಶಕ ಅಭಿಷೇಕ್ ಶೆಟ್ಟಿ ಹೇಳಿದ್ದು, ಚಿತ್ರದ ಪ್ರಮುಖ ಘಟ್ಟದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Lets Break Up: ಶ್ರೀ ಮಹದೇವ್‌-ರಚನಾ ಇಂದರ್‌ ಜೋಡಿಯ ಚಿತ್ರಕ್ಕೆ ಮುಹೂರ್ತ

ಇಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇರುತ್ತದೆ. ಕ್ಯೂಟ್, ಚಾಕಲೇಟ್ ಹೀರೋ, ಲವ್ವರ್ ಬಾಯ್ ಇಮೇಜ್‌ಗಿಂತ ವಿಭಿನ್ನವಾದ ಪಾತ್ರವಿದು. ನಾನಲ್ಲದಿರುವ ಪಾತ್ರವಿದು, ಎರಡು ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ನಾನು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಗಜ ಎಂಬುದು ನನ್ನ ಪಾತ್ರದ ಹೆಸರು ಎಂದು ಶ್ರೀ ಮಹದೇವ್ ಹೇಳಿದ್ದಾರೆ. ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಮಿಡಲ್ ​ಕ್ಲಾಸ್ ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬೃಂದಾವನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಯುಎಸ್ ನಾಗೇಶ್ ಕುಮಾರ್ (Nagesh Kumar US) ನಿರ್ಮಾಪಕರಾಗಿ 'ಗಜಾನನ ಅಂಡ್ ಗ್ಯಾಂಗ್' ಚಿತ್ರಕ್ಕೆ ಹಣ ಹೂಡುತ್ತಿದ್ದು, ಚಿತ್ರದ ಹಾಡುಗಳಿಗೆ ಪ್ರದ್ಯುತನ್ (Praddyottan) ಸಂಗೀತ ಸಂಯೋಜಿಸಿದ್ದಾರೆ. ಉದಯ ಲೀಲ ಕ್ಯಾಮರಾ ಕೈಚಳಕ, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.
 

Follow Us:
Download App:
  • android
  • ios