Asianet Suvarna News Asianet Suvarna News

Lets Break Up: ಶ್ರೀ ಮಹದೇವ್‌-ರಚನಾ ಇಂದರ್‌ ಜೋಡಿಯ ಚಿತ್ರಕ್ಕೆ ಮುಹೂರ್ತ

'ಇರುವುದೆಲ್ಲವ ಬಿಟ್ಟು' ಸಿನಿಮಾದ ಶ್ರೀ ಮಹದೇವ್‌ ಹಾಗೂ 'ಲವ್ ಮಾಕ್ಟೇಲ್' ನಟಿ ರಚನಾ ಇಂದರ್‌ ಅಭಿನಯದ 'ಲೆಟ್ಸ್‌ ಬ್ರೇಕಪ್‌'  ಚಿತ್ರದ ಮುಹೂರ್ತ ಇತ್ತೀಚೆಗೆ ಶ್ರೀ ಅಂಗಾಳ ಪರಮೇಶ್ವರಿ ಸನ್ನಿಧಿಯಲ್ಲಿ ನೆರವೇರಿದೆ. 

Shri Mahadev Rachana Inder Starrer Lets Break Up movie Muhurta gvd
Author
Bangalore, First Published Dec 20, 2021, 10:31 PM IST
  • Facebook
  • Twitter
  • Whatsapp

'ಇರುವುದೆಲ್ಲವ ಬಿಟ್ಟು' ಸಿನಿಮಾದ ಶ್ರೀ ಮಹದೇವ್‌ (Shri Mahadev) ಹಾಗೂ 'ಲವ್ ಮಾಕ್ಟೇಲ್' ನಟಿ ರಚನಾ ಇಂದರ್‌ (Rachana Inder) ಅಭಿನಯದ 'ಲೆಟ್ಸ್‌ ಬ್ರೇಕಪ್‌' (Lets Break Up) ಚಿತ್ರದ ಮುಹೂರ್ತ (Muhurta) ಇತ್ತೀಚೆಗೆ ನೆರವೇರಿದೆ. ಈಗಾಗಲೇ ಫಸ್ಟ್‌ಲುಕ್‌ (FirstLook) ಪೋಸ್ಟರ್‌ನಿಂದಲೇ ಗಮನ ಸೆಳೆದಿರುವ 'ಲೆಟ್ಸ್‌ ಬ್ರೇಕಪ್‌' ಚಿತ್ರದ ಮುಹೂರ್ತ ಶ್ರೀ ಅಂಗಾಳ ಪರಮೇಶ್ವರಿ ಸನ್ನಿಧಿಯಲ್ಲಿ ನಡೆದಿದ್ದು, ಜನವರಿ ಒಂದರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸ್ವರೂಪ್‌ (Swaroop) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸ್ವರೂಪ್‌ ಅವರದೆ. ಮಿರುನಳಿನಿ (Mirunalini) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದೊಂದು ರೊಮ್ಯಾಂಟಿಕ್‌ ಡ್ರಾಮಾ ಚಿತ್ರವಾಗಿದ್ದು, 'ಈ ಲವ್‌ ಸ್ಟೋರಿಯಲ್ಲಿ ನಾನು ಕಾಲೇಜ್‌ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಬಹಳ ಸೈಲೆಂಟ್‌ ಆಗಿರುವ ಈ ಕಾಲದ ಹುಡುಗಿ ಪಾತ್ರ. ಪಾತ್ರಕ್ಕೆ ಭಿನ್ನ ಶೇಡ್‌ಗಳೇನಿಲ್ಲ. ನಾನು ಸ್ಟೋರಿ ಕೇಳಿ ಇಷ್ಟವಾಗಿ ಚಿತ್ರ ಒಪ್ಪಿಕೊಂಡೆ ಎಂದು ನಾಯಕಿ ರಚನಾ ಹೇಳಿದರು. 'ಲೆಟ್ಸ್‌ ಬ್ರೇಕಪ್‌' ಒಂದು ಕಾಡುವಂತಹ ಪ್ರೇಮಕಥೆ. ನನಗೆ ಪರ್ಫಾರ್ಮೆನ್ಸ್‌ ಮಾಡಲು ಒಳ್ಳೆಯ ಪಾತ್ರವಿದು. ಪ್ರೀತಿಗಿರುವ ಶಕ್ತಿ ಎಂತಹದ್ದು ಎಂಬುದನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನವಾಗುತ್ತಿದೆ. ಹೊಸ ರೀತಿಯಲ್ಲಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ನಟ ಶ್ರೀ ಮಹದೇವ್ ಹೇಳಿದ್ದಾರೆ.

Gajanana and Gang: ಡಿಸೆಂಬರ್ 22ರಂದು ಅದಿತಿ ಪ್ರಭುದೇವ-ಶ್ರೀ ಮಹದೇವ್ ಚಿತ್ರದ ಟ್ರೇಲರ್ ರಿಲೀಸ್

ಇದೊಂದು ಕಂಪ್ಲೀಟ್‌ ಲವ್‌ ಸ್ಟೋರಿ. ಈಗಿನ ಕಾಲದಲ್ಲಿ ಯುವ ಜನಾಂಗ ಎಷ್ಟು ವೇಗವಾಗಿ ಪ್ರೀತಿಯಲ್ಲಿ ಬೀಳುತ್ತಾರೆ, ನಂತರ ಎಷ್ಟು ವೇಗವಾಗಿ ಬ್ರೇಕಪ್‌ ಮಾಡಿಕೊಳ್ಳುತ್ತಾರೆ, ಅದರಿಂದ ಆಗುವ ತೊಂದರೆಗಳೇನು ಎಂಬುದೇ ಸಿನಿಮಾದ ಕಥೆ. ನಾಯಕ ಶ್ರೀಗೆ ಎಷ್ಟು ಮುಖ್ಯವಾದ ಪಾತ್ರ ಇದೆಯೋ ನಾಯಕಿಗೂ ಅಷ್ಟೇ ಮುಖ್ಯವಾದ ಪಾತ್ರವಿದೆ. ರಚನಾ ಮತ್ತು ಶ್ರೀ ನನ್ನ ಕಥೆಗೆ ಸೂಟ್‌ ಆಗುತ್ತಾರೆ ಎಂದು ನಿರ್ದೇಶಕ ಸ್ವರೂಪ್‌ ಹೇಳಿದ್ದಾರೆ. 'ಲೆಟ್ಸ್‌ ಬ್ರೇಕಪ್‌' ಚಿತ್ರಕ್ಕೆ ರಾಮಾ ರಾಮಾ ರೇ' ಖ್ಯಾತಿಯ ಲವಿತ್‌ ಸಿನಿಮಾಟೋಗ್ರಫಿ ಮಾಡುತ್ತಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ವಿನೀತ್‌ ರಾಜ್ ಮೆನನ್ ಸಂಗೀತ ಸಂಯೋಜನೆಯಿದೆ. ಹರೀಶ್ ಕೊಮ್ಮೆ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ಸತೀಶ್‌ ಅವರ ಕಲಾ ನಿರ್ದೇಶನ ಹಾಗೂ ನಂದಕುಮಾರ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. 

Shri Mahadev Rachana Inder Starrer Lets Break Up movie Muhurta gvd

ಇನ್ನು 'ಲೆಟ್ಸ್‌ ಬ್ರೇಕಪ್‌' ಒಂದು ಇಂಟೆನ್ಸ್‌ ಲವ್‌ ಸ್ಟೋರಿ. ಇಡೀ ಚಿತ್ರ ಲವ್‌ ಟ್ರ್ಯಾಕ್‌ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ. ನನಗೆ ಸಿನಿಮಾದಲ್ಲಿ ಎರಡು ಶೇಡ್‌ ಇದೆ. ಪ್ರೀತಿಯ ತೀವ್ರತೆ ಮತ್ತು ಅದರಿಂದ ಯುವ ಜೋಡಿ ಹೊರಬರುವಾಗಿನ ಕಷ್ಟಗಳು ಎಲ್ಲವೂ ಹೇಗಿರುತ್ತವೆ ಎಂಬುದನ್ನು ನಿರ್ದೇಶಕ ಸ್ವರೂಪ್‌ ಬಹಳ ಚೆನ್ನಾಗಿ ಬರೆದಿದ್ದಾರೆ. ನನಗಂತೂ ಬಹಳ ಒಳ್ಳೆಯ ಪಾತ್ರ ಸಿಕ್ಕಿದೆ ಎನ್ನಬಹುದು. ಹಿಂದೆಯೇ ಶೂಟಿಂಗ್‌ ಶುರು ಆಗಬೇಕಿತ್ತು. ಆದರೆ ಈ ಚಿತ್ರಕ್ಕೋಸ್ಕರ ನಾನು ಬಾಡಿ ಬಿಲ್ಡ್‌ ಮಾಡಬೇಕಿದ್ದ ಕಾರಣ ಸ್ವಲ್ಪ ವಿಳಂಬವಾಯ್ತು ಎಂದು ಶ್ರೀ ಮಹದೇವ್‌ ಹೇಳಿದರು. 

ಲವ್ 360 ಪಾತ್ರ ಸಖತ್ ಚಾಲೆಂಜಿಂಗ್ ಎಂದ ಲವ್‌ ಮಾಕ್ಟೇಲ್ ಚೆಲುವೆ

ಶ್ರೀ ಮಹಾದೇವ್ 'ಗಜಾನನ ಮತ್ತು ಗ್ಯಾಂಗ್' (Gajanana and Gang) ಚಿತ್ರದಲ್ಲಿ ನಟಿಸುತ್ತಿದ್ದು, ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿ ಕಾಣಸಿಕೊಳ್ಳುತ್ತಿದ್ದಾರೆ. 'ನಮ್ ಗಣಿ ಬಿಕಾಂ ಪಾಸ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪಾದರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ (Abhishek Shetty) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ತೆರೆ ಮೇಲೆ ಬರಲು ಸಜ್ಜಾಗಿದೆ. ಜೊತೆಗೆ  ಹೊಂದಿಸಿ ಬರೆಯಿರಿ (Hondisi Bareyiri) ಎಂಬ ಚಿತ್ರದಲ್ಲೂ ಶ್ರೀ ಮಹಾದೇವ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Follow Us:
Download App:
  • android
  • ios