ಕಿಚ್ಚ ಸುದೀಪ್​ ಅವರ 52ನೇ ಹುಟ್ಟುಹಬ್ಬದ ಪ್ರಯುಕ್ತ, ಪತ್ನಿ ಪ್ರಿಯಾ ಸುದೀಪ್​ ಅವರು ಅಂಗ ಮತ್ತು ಅಂಗಾಂಶ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಕಿಚ್ಚ ಸುದೀಪ್ ಕೇರ್ ಫೌಂಡೇಶನ್‌ ಮೂಲಕ ಈ ದಾನ ನಡೆದಿದ್ದು, ಇತರರಿಗೂ ಅಂಗಾಂಗ ದಾನ ಮಾಡುವಂತೆ ಪ್ರೇರೇಪಿಸಿದ್ದಾರೆ.

ಸದ್ಯ ಸುದೀಪ್​ ಅವರು Bigg Boss 12 ಖುಷಿಯಲ್ಲಿದ್ದಾರೆ. ಈಚೆಗಷ್ಟೇ ಅವರು 52ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದರು. ಬಹುತೇಕ ಸಮಯದಲ್ಲಿ ಸುದೀಪ್​ ಅವರು ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸುತ್ತಾರೆ. ರಕ್ತದಾನ, ಅನ್ನದಾನ, ಬಡವರ ಶಿಕ್ಷಣಕ್ಕೆ ನೆರವು... ಹೀಗೆ ಕೆಲವು ಕಾರ್ಯಗಳನ್ನು ಮಾಡುತ್ತಾರೆ. ಇದೀಗ, ಅವರ ಪತ್ನಿ ಪ್ರಿಯಾ ಸುದೀಪ್​ (Priya Sudeep)ಅವರು ಅಂಗ ಮತ್ತು ಅಂಗಾಂಶ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಕಿಚ್ಚ ಸುದೀಪ್ ಕೇರ್ ಫೌಂಡೇಶನ್‌ ಮೂಲಕ ಪ್ರಿಯಾ ಅವರು ಅಂಗ ಮತ್ತು ಅಂಗಾಂಶಗಳನ್ನು ದಾನ ಮಾಡಿದ್ದಾರೆ. ತಮ್ಮ ದಾನದ ಕುರಿತು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಇತರರಿಗೂ ಇದೇ ರೀತಿ ಮಾಡುವಂತೆ ಪ್ರೇರೇಪಿಸಿದ್ದಾರೆ. ಸಾಮಾನ್ಯವಾಗಿ ಚಿತ್ರತಾರೆಯರು ಲಾಂಗು, ಒಳ್ಳೆಯ ಕೆಲಸ ಮಾಡಿದರೆ ಅವರನ್ನು ಅನುಸರಿಸುವವರೂ ಇದ್ದಾರೆ. ಅದಕ್ಕಾಗಿಯೇ ಈಗ ಪ್ರಿಯಾ ಅವರು ಅಭಿಮಾನಿಗಳಲ್ಲಿ ಒಳ್ಳೆಯ ಕೆಲಸಕ್ಕೆ ಮಾದರಿಯಾಗಿದ್ದಾರೆ.

ಸುಲಭವಾಗಿರುವ ಪ್ರಕ್ರಿಯೆ:

ಅಂಗಾಂಗ ದಾನ ಪ್ರಕ್ರಿಯೆ ಬಹಳ ಸುಲಭವಾಗಿದೆ. ನಿಮ್ಮ ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ ಎಂದರೆ ಅದಕ್ಕಿಂತ ದೊಡ್ಡ ಕೆಲಸ ಬೇರೊಂದಿಲ್ಲ. ನಮ್ಮ ಕಿಚ್ಚ ಸುದೀಪ್‌ ಕೇರ್‌ ಫೌಂಡೇಷನ್‌ (Kiccha Sudeep Care Foundation) ಮೂಲಕ ನಾನು ಅಂಗಾಂಗ ದಾನಕ್ಕೆ ನೋಂದಣಿ ಮಾಡಿದ್ದೇನೆ. ನೀವು ಮಾಡಿ ಎಂದು ಪ್ರಿಯಾ ಸುದೀಪ್​ ವಿಡಿಯೋದಲ್ಲಿ ಹೇಳಿದ್ದಾರೆ. ಅಂಗಾಂಗ ದಾನ ಮಾಡಲು ನಮ್ಮ ಜವಾಬ್ದಾರಿ ಏನೆಂದರೆ, ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಗ ಇದಕ್ಕೊಂದು ಅರ್ಥ ಬರುತ್ತದೆ ಎಂದಿದ್ದಾರೆ. 'ಪ್ರತೀ ವರ್ಷ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ, ಅವರ ಅಭಿಮಾನಿಗಳಾಗಲಿ, ಸ್ನೇಹಿತರಾಗಲಿ, ಯಾವುದೇ ತರಹದ ಒಂದು ಒಳ್ಳೆ ಕಾರ್ಯಗಳನ್ನ ನಡೆಸುತ್ತಾ ಬಂದಿದ್ದಾರೆ. ಅದು ರಕ್ತದಾನ, ಅನ್ನದಾನ, ಬಡ ಮಕ್ಕಳಿಗೆ ಸಹಾಯ ಆಗಲಿ, ಹೀಗೆ ಯಾವುದೇ ಒಂದು ರೀತಿಯಲ್ಲಿ ಅವರದ್ದೇ ಆದ ಒಂದು ಸಣ್ಣ ಕಾಣಿಕೆ ನಮ್ಮ ಸಮಾಜಕ್ಕೆ ಮಾಡ್ತಾ ಇದ್ದಾರೆ. ಈ ವರ್ಷ ಅವರ ಹುಟ್ಟುಹಬ್ಬಕ್ಕೆ, ನಾನು ಆರ್ಗನ್‌ (ಅಂಗ) ಮತ್ತು ಟಿಶ್ಯೂ (ಅಂಗಾಂಶ) ಡೊನೇಷನ್‌ ಮಾಡಿದ್ದೇನೆ' ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬಕ್ಕೆ Sudeep ಹೊಸ ಹೇರ್​ಸ್ಟೈಲ್​: ಇದರ ಗುಟ್ಟೇನು? ಬಿಗ್​ಬಾಸ್​ಗೆ ಸಂಬಂಧಿಸಿದ್ದಾ? ನಟನ ಬಾಯಲ್ಲೇ ಕೇಳಿ..

ಸುಲಭವಾಗಿರುವ ಪ್ರಕ್ರಿಯೆ

ಅಂಗ ದಾನ ಎಂದರೆ ಹೆದರುವವರು ತುಂಬಾ ಮಂದಿ ಇದ್ದಾರೆ. ಅದಕ್ಕಾಗಿಯೇ ಪ್ರಿಯಾ ಅವರು ಇದರ ವಿಧಾನವನ್ನೂ ತಿಳಿಸಿದ್ದಾರೆ. 'ಇದರ ಪ್ರಕ್ರಿಯೆ ಬಹಳ ಸುಲಭವಾಗಿದೆ. ನಿಮ್ಮ ಒಂದು ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತೆ ಅಂತಂದರೆ, ಅದಕ್ಕಿಂತ ದೊಡ್ಡ ಕೆಲಸ ಇನ್ನೊಂದಿಲ್ಲ. ನಮ್ಮ ಕಿಚ್ಚ ಸುದೀಪ್‌ ಕೇರ್‌ ಫೌಂಡೇಶನ್‌ (KSCF) ಮೂಲಕ ನಾನು ಈ ನೋಂದಣಿ ಮಾಡಿದ್ದೇನೆ. ನೀವು ದಾನ ಮಾಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಈ ವರ್ಷ ಕಿಚ್ಚ ಸುದೀಪ್‌ ಅವರಿಗೆ ಇದು 52ನೇ ಹುಟ್ಟುಹಬ್ಬ ಆದ್ದರಿಂದ 52 ವರ್ಷ ತುಂಬಿದೆ. ಹೀಗಾಗಿ ನಮ್ಮ ಗುಂಪಿನಿಂದ 52 ಜನ ಪ್ರತಿಜ್ಞೆ ಮಾಡಿದ್ದಾರೆ' ಎಂದು ಹೇಳುವ ಮೂಲಕ ಹುರಿದುಂಬಿಸಿದ್ದಾರೆ.

ಆರೋಗ್ಯ ಕಾಪಾಡಿಕೊಳ್ಳಿ:

ಅಷ್ಟಕ್ಕೂ ಅಂಗಾಂಗ ದಾನ ಅಥವಾ ರಕ್ತದಾನ ಹೀಗೆ ಮಾಡುವ ಮುನ್ನ ದಾನಿಗಳು ಆರೋಗ್ಯವಂತರಾಗಿರಬೇಕು. ಇದನ್ನೇ ಪ್ರಿಯಾ ಅವರೂ ಹೇಳಿದ್ದಾರೆ. ಅಂಗಾಂಗ ದಾನ ಮಾಡಬೇಕು ಎಂದಾದರೆ ನಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ನಮ್ಮ ಸ್ವಾಸ್ಥ್ಯ ಮತ್ತು ನಮ್ಮ ಆರೋಗ್ಯವನ್ನ ಮೊದಲು ಕಾಪಾಡಿಕೊಳ್ಳಬೇಕು. ಹಾಗಾಗಿ ಮೊದಲು ನಿಮ್ಮನ್ನ ನೀವು ಚೆನ್ನಾಗಿ ನೋಡಿಕೊಳ್ಳಿ. ಆಗ ಇದಕ್ಕೆ ಒಂದು ಅರ್ಥ ಬರುತ್ತದೆ. ನಾವು ಯಾವಾಗ ಹೋಗ್ತೀವಿ ಅನ್ನೋದು ನಮಗೆ ಗೊತ್ತಿಲ್ಲ. ಜೀವನ ನಮ್ಮ ಕೈಯಲ್ಲಿ ಇಲ್ಲ. ಹಾಗಾಗಿ ಈ ರೀತಿಯ ದಾನ ಮಾಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vaishnavi Gowda in Bigg Boss: ಲವ್​ ಆಗ್ಬೇಕಾದ್ರೆ ಕಣ್ಣಲ್ದೇ ಬೇರೆ ಏನ್​ ನೋಡ್ಬೇಕು? ಸುದೀಪ್​ ಪ್ರಶ್ನೆಗೆ ನಟಿ ಕಕ್ಕಾಬಿಕ್ಕಿ!

View post on Instagram