KGFಗೂ ಮೊದಲು ಅಪ್ಪು ಸಿನಿಮಾ ಮಾಡ್ಬೇಕಿತ್ತು Prashanth Neel, ಅದು ಮಿಸ್ ಆಗಿ ಕೆಜಿಎಫ್ ಮಾಡ್ಬೇಕಾಯ್ತು!
ಪ್ರಶಾಂತ್ ನೀಲ್ ಕೆಜಿಎಫ್‌ಗೂ (KGF Director Prashanth Neel) ಮೊದಲೇ ಅಪ್ಪು ಅವರನ್ನಿಟ್ಟುಕೊಂಡು ಒಂದು ಫ್ಯಾಮಿಲಿ ಡ್ರಾಮಾ ಮಾಡಲು ಹೊರಟಿದ್ದರು ಅನ್ನೋ ವಿಚಾರ ಪ್ರಶಾಂತ್ ನೀಲ್ ಅವರು ಇತ್ತೀಚೆಗೆ ನೀಡಿದ್ದ ಸಂದರ್ಶನದ ಮೂಲಕ ರಿವೀಲ್ ಆಗಿದೆ.
ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿಕೆ ಇಡೀ ಚಿತ್ರರಂಗವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಸಿನಿಮಾಗಳು ಸಕ್ಸಸ್ ಫುಲ್ ಆಗಿ ಓಡ್ತಿದ್ದರೂ, ಮೊದಲಿನಂತೇ ಚಿತ್ರರಂಗದಲ್ಲಿ ಚಟುವಟಿಕೆಗಳು ನಡೆಯುತ್ತಿದ್ದರೂ ಆಳದಲ್ಲಿ ಅಪ್ಪು ಕಳೆದುಕೊಂಡ ನೋವು ಇನ್ನೂ ಜೀವಂತವಿದೆ. ಬೂದಿ ಮುಚ್ಚಿದ ಕೆಂಡದ ಹಾಗಿರುವ ಈ ಫೀಲ್ ಆಗಾಗ ಹೊರಬರುತ್ತದೆ. ಒಂದು ಕಡೆ ಅಪ್ಪು ಅವರ ಮಾಸ್ ಸಿನಿಮಾಗಳು ಜನಪ್ರಿಯತೆ ಪಡೆದರೂ ಅವರು ಭಿನ್ನ ಬಗೆಯ ಕತೆಗಾಗಿ ಹಪಹಪಿಸುತ್ತಿದ್ದರು. ಅಮೋಘವರ್ಷ ನಿರ್ದೇಶನದ 'ಗಂಧದ ಗುಡಿ' (Gandhada gudi) ಅಂಥಾ ಸಿನಿಮಾಗಳಲ್ಲೊಂದು. ಪ್ರಶಾಂತ್ ನೀಲ್ ಕೆಜಿಎಫ್ (KGF)ಗೂ ಮೊದಲೇ ಅಪ್ಪು ಅವರನ್ನಿಟ್ಟುಕೊಂಡು ಒಂದು ಫ್ಯಾಮಿಲಿ ಡ್ರಾಮಾ ಮಾಡಲು ಹೊರಟಿದ್ದರು ಅನ್ನೋ ವಿಚಾರ ಪ್ರಶಾಂತ್ ನೀಲ್ ಅವರು ಇತ್ತೀಚೆಗೆ ನೀಡಿದ್ದ ಸಂದರ್ಶನದ ಮೂಲಕ ರಿವೀಲ್ ಆಗಿದೆ.
ಪ್ರಶಾಂತ್ ನೀಲ್ ಅವರ ಪ್ರತಿಭೆ ಎಂಥಾದ್ದು, ನಿಂತ ನೀರಿನ ಹಾಗಿದ ಕನ್ನಡ ಇಂಡಸ್ಟ್ರಿಗೆ ಅವರು ನೀಡಿದ ಪವರ್ ಸ್ಟ್ರೋಕ್ ಎಂಥಾದ್ದು ಅನ್ನೋದಕ್ಕೆ ಅವರ ಉಗ್ರಂ, ಕೆಜಿಎಫ್ ಸಿನಿಮಾಗಳೇ ಸಾಕ್ಷಿ. ಆದರೆ ಅವರೂ ಪವರ್ ಸ್ಟಾರ್ ಪುನೀತ್ ಅವರಿಗೆ ಒಂದು ಸಿನಿಮಾ ನಿರ್ದೇಶಿಸಬೇಕು ಅನ್ನೋ ಕನಸು ಕಂಡಿದ್ದರು. ಆ ಸಿನಿಮಾದ ಸ್ಕ್ರಿಪ್ಟ್ (cinema script) ಅವರ ತಲೆಯಲ್ಲಿತ್ತು. ಅದರ ಶೀರ್ಷಿಕೆಯನ್ನೂ ಫೈನಲ್ ಮಾಡಿದ್ದರು. ಆದರೆ ಆ ಕ್ಷಣಕ್ಕೆ ಆ ಸಿನಿಮಾ ಮಾಡೋದು ಸಾಧ್ಯವಾಗದ ಕಾರಣ ಕೆಜಿಎಫ್ ಸಿನಿಮಾ ಮಾಡೋದಕ್ಕೆ ಮುಂದಾಗ್ತಾರೆ. ಕೆಜಿಎಫ್ ಸಿನಿಮಾದ ಕಥೆ 2006ರಿಂದಲೇ ಅವರ ತಲೆಯಲ್ಲಿತ್ತಂತೆ. ಆದರೆ ಅದು ಸ್ಕ್ರಿಪ್ಟ್ ರೂಪಕ್ಕೆ ಇಳಿದದ್ದು 2014ರಲ್ಲಿ. ಒಂದು ಐಡಿಯಾವಾಗಿ ತಲೆಯಲ್ಲಿದ್ದು, ಕಾಲ ಕಾಲಕ್ಕೆ ಆ ಐಡಿಯಾ ಬೆಳೆಯುತ್ತಾ ಬಂದು, ಆ ಬಳಿಕ ಸಿನಿಮಾ ರೂಪ ತಾಳುವಾಗ ಅದಕ್ಕೊಂದು ಆಳವಿತ್ತು, ವಿಸ್ತಾರ ಇತ್ತು. 2014ರಲ್ಲಿ ಅವರು ಈ ಸಿನಿಮಾದ ಕತೆ ಹೇಳಿದ್ದು ಇಬ್ಬರಿಗೆ ಒಬ್ಬರು ನಿರ್ಮಾಪಕ ವಿಜಯ್ ಕಿರಗಂದೂರು (Vijay kiragandhur). ಇನ್ನೊಬ್ಬರು ಮುಂದೆ ಕೆಜಿಎಫ್ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ (Rocking Star) ಅಂತಲೇ ಫೇಮಸ್ ಆದ ಯಶ್ (Yash). ಹಾಗೆ ನೋಡಿದರೆ ಈ ಸಿನಿಮಾದಲ್ಲಿ ಯಶ್ ಅವರ ರೋಲ್ ಬರೀ ಪಾತ್ರನಿರ್ವಹಣೆಗಷ್ಟೇ ಸೀಮಿತ ಆಗಿಲ್ಲ. ಅವರು ಸ್ಕ್ರಿಪ್ಟಿಂಗ್‌ನಲ್ಲೂ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಾಥ್ ನೀಡಿದ್ದಾರೆ, ಡೈಲಾಗ್ (Dialogue) ಸೃಷ್ಟಿಯಲ್ಲೂ ಸಹಕಾರ ನೀಡಿದ್ದಾರೆ.
ಇದನ್ನೂ ಓದಿ: ಸೂಪರ್ ಹಿಟ್ RRR ಅನ್ನು ಸೋಲಿಸುತ್ತಾ Yash ಅಭಿನಯದ KGF Chapter 2?
'ನಾನು ಆ ಸೀನ್ ಬಗೆಗಿನ ಐಡಿಯಾ (Idea)ಗಳನ್ನ ಯಶ್ ಮುಂದೆ ಹರವಿಡುತ್ತಿದ್ದೆ. ಆಮೇಲೆ ಅವರ ಎಕ್ಸ್ ಪ್ರೆಶನ್ (Expression) ನೋಡುತ್ತಿದ್ದೆ. ಯಶ್ ಮುಖದಲ್ಲೊಂದು ಮಿಂಚು, ಮುಗುಳ್ನಗೆ ಕಾಣಿಸಿಕೊಂಡರೆ, ಅಬ್ಬಾ ಸೀನ್ ಕರೆಕ್ಟ್ ಇದೆ ಅಂತ ನಿರಾಳ. ಇಲ್ಲಾಂದರೆ ಸೀನ್ ಹೇಗೆ ಡೆವಲಪ್ ಮಾಡಬಹುದು ಅಂತ ಅವರೂ ನಾನೂ ಚರ್ಚೆ ಮಾಡುತ್ತಿದ್ದೆವು' ಎಂದು ನೀಲ್ ಹೇಳುತ್ತಾರೆ. ಇಷ್ಟೆಲ್ಲ ಆದ ಮೇಲೆ ಇದೀಗ ಕೆಜಿಎಫ್ ಮುಗಿದು, ಅದರ ಮುಂದುವರಿಕೆಯಾಗಿ ಇನ್ನೆರಡೇ ಎರಡು ದಿನದಲ್ಲಿ ಕೆಜಿಎಫ್ 2 ಹೊರಬರಲಿದೆ. ಇಂಥಾ ಟೈಮಲ್ಲಿ ಪ್ರಶಾಂತ್ ನೀಲ್ ತಮ್ಮ ಮಾತಿನ ನಡುವೆ, 'ನಾನು ಪುನೀತ್ ಸಿನಿಮಾ ಮಾಡ್ಬೇಕು ಅಂತ ರೆಡಿ ಆಗ್ತಿದ್ದೆ. ಅದು ಆ ಹೊತ್ತಿಗೆ ಸಾಧ್ಯವಾಗದ ಕಾರಣ ಕೆಜಿಎಫ್ (KGF) ಸಿನಿಮಾ ಮಾಡಲು ಹೊರಡಬೇಕಾಯಿತು' ಅಂದಿದ್ದಾರೆ.
ಇದನ್ನೂ ಓದಿ: KGF 2: ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ RRR ದಾಖಲೆ ಮುರಿದ ಯಶ್ ಸಿನಿಮಾ
ಪ್ರಶಾಂತ್ ನೀಲ್ ಪುನೀತ್ ರಾಜ್‌ಕುಮಾರ್ ಅವರಿಗೆ ಮಾಡಬೇಕಿದ್ದ ಸಿನಿಮಾದ ಶೀರ್ಷಿಕೆ 'ಆಹ್ವಾನ' (Ahvana). ಅದು ಫ್ಯಾಮಿಲಿ ಡ್ರಾಮಾ (Family Drama) . ಪ್ರಶಾಂತ್ ಈ ಸ್ಕ್ರಿಪ್ಟ್ ರೆಡಿ ಮಾಡ್ಕೊಂಡು ಅಪ್ಪು ಅವರ ಬಳಿ ಹೋಗುವಾಗ ಅಪ್ಪು ಬೇರೆ ಸಿನಿಮಾ ಒಪ್ಪಿಕೊಂಡಿದ್ದರು. ಹೀಗಾಗಿ ಅವರ ಡೇಟ್ಸ್ ಸಿಗಲಿಲ್ಲ. ಸೋ, ಸಿನಿಮಾ ಮುಂದಕ್ಕೆ ಹೋಯ್ತು. ದುರಾದೃಷ್ಟವಶಾತ್ ಮುಂದೆ ಆ ಫ್ಯಾಮಿಲಿ ಡ್ರಾಮ ಹೊರಬರುವ ಅವಕಾಶದಿಂದಲೇ ವಂಚಿತವಾಯಿತು.