KGF 2: ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ RRR ದಾಖಲೆ ಮುರಿದ ಯಶ್ ಸಿನಿಮಾ
ಕೆಜಿಎಫ್-2 ಬಿಡುಗಡೆಗೂ ಮೊದಲೇ ಸಾಕಷ್ಟು ದಾಖಲೆಯನ್ನು ನಿರ್ಮಿಸಿದೆ. ಇದೀಗ ಅಡ್ವಾನ್ಸ್ ಬುಕ್ಕಿಂಗ್ ವಿಚಾರದಲ್ಲೂ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಹಿಂದಿ ವಿಭಾಗದಲ್ಲಿ ಕೆಜಿಎಫ್-2 20 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡುವ ಮೂಲಕ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾದ ದಾಖಲೆಯನ್ನು ಧೂಳಿಪಟ ಮಾಡಿದೆೆ.
KGF 2 ಎಂಟ್ರಿಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಎಲ್ಲಾ ಕಡೆ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ (Advance Ticket Booking Open). ಮೊದಲು ವಿದೇಶದಲ್ಲಿ ಮತ್ತು ಉತ್ತರ ಭಾರತ, ತಮಿಳುನಾಡು ಸೇರಿದಂತೆ ಕೆಲವು ಭಾಗಗಳಲ್ಲಿ ಮಾತ್ರ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಪ್ರಾರಂಭ ಮಾಡಲಾಗಿತ್ತು. ಬುಕ್ಕಿಂಗ್ ಪ್ರಾರಂಭ ಮಾಡುತ್ತಿದ್ದಂತೆ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಹಿಂದಿ ವಿಭಾಗದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಏಪ್ರಿಲ್ 10ರಿಂದ ಕರ್ನಾಟಕದಲ್ಲೂ ಕೆಜಿಎಫ್2 ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಬಹುತೇಕ ಶೋಗಳು ಸೋಲ್ಡ್ ಔಟ್ (Show Sold Out) ಆಗಿದೆ.
ಕೆಜಿಎಫ್-2 ಬಿಡುಗಡೆಗೂ ಮೊದಲೇ ಸಾಕಷ್ಟು ದಾಖಲೆಯನ್ನು ನಿರ್ಮಿಸಿದೆ. ಇದೀಗ ಅಡ್ವಾನ್ಸ್ ಬುಕ್ಕಿಂಗ್ ವಿಚಾರದಲ್ಲೂ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಅಂದಹಾಗೆ ಹಿಂದಿ ವಿಭಾಗದಲ್ಲಿ ಕೆಜಿಎಫ್-2 20 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಇದು ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾದ ದಾಖಲೆಯನ್ನು ಧೂಳಿಪಟ ಮಾಡಿದೆೆ. ಹಿಂದಿಯಲ್ಲಿ ಈಗಾಗಲೇ 11 ಕೋಟಿ ಮೌಲ್ಯದ ಟಿಕೆಟ್ ಮಾರಾಟವಾಗಿದೆ. ಆರ್ ಆರ್ ಆರ್ ಹಿಂದಿ ಆವೃತ್ತಿ ಕೇವಲ 5 ಕೋಟಿ ಗಳಿಸುವಲ್ಲಿ ಯಶಸ್ವಿಯಾಗತ್ತು. ಆದರೆ ಕೆಜಿಎಫ್-2 ಅದಕ್ಕಿಂತ ಹೆಚ್ಚು ಪಟ್ಟು ಗಳಿಕೆ ಮಾಡಿದ. ಉತ್ತರದ ಭಾರತದಲ್ಲಿ ಎಲ್ಲಾ ಭಾಷೆಯಲ್ಲಿ ಇದುವರೆಗೂ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ.
KGF 2; ಅತೀ ದೊಡ್ಡ ಮೊಸಾಯಿಕ್ ಬುಕ್ ಪೋಟ್ರೇಟ್ ನಿರ್ಮಿಸಿ ದಾಖಲೆ ಬರೆದ ಯಶ್ ಫ್ಯಾನ್ಸ್
ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ. ಈಗಾಗಲೇ ಕೆಜಿಎಫ್-2 ಸಿನಿಮಾದ 20 ಕೋಟಿ ಮೌಲ್ಯದ ಟಿಕೆಟ್ ಮಾರಾಚವಾಗಿದೆ. ಹಿಂದಿ ಆವೃತ್ತಿಯಲ್ಲಿ 11.4 ಕೋಟಿ ರೂಪಾಯಿ ಗಳಿಕೆಯಾಗಿದೆ ಎಂದು ಹೇಳಿದ್ದಾರೆ. ಇದು ಅದ್ಭುತ ಕ್ರೇಜ್ ಎಂದು ಹೇಳಿದ್ದಾರೆ. ಮುಂಬೈ, ಪುಣೆ ಸೇರಿದಂತೆ ಕೆಲವು ಭಾಗಗಳಲ್ಲಿ ಬೆಳಗ್ಗೆ 6ಗಂಟೆಯಿಂದನೇ ಶೋ ಪ್ರಾರಂಭವಾಗಲಿದೆ. ಕೆಲವು ಕಡೆ ಟಿಕೆಟ್ ಧರ 1450 ರಿಂದ 1500 ವರೆಗೂ ಇದೆ. ದೆಹಲಿಯಲ್ಲಿ 1800 ರಿಂದ 2000 ವರೆಗೂ ಇದೆ ಎಂದು ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.
ಇನ್ನು ಕರ್ನಾಟಕದಲ್ಲೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ.ಏಪ್ರಿಲ್ 10ರಿಂದ KGF 2 ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಲಿದೆ ಎಂದು ಸಿನಿಮಾತಂಡ ಈ ಮೊದಲೇ ಅನೌನ್ಸ್ ಮಾಡಿತ್ತು. ಅಭಿಮಾನಿಗಳು ಸಹ ಕಾತರದಿಂದ ಕಾದು ಇಂದು ಬುಕ್ಕಿಂಗ್ ಓಪನ್ ಆಗುತ್ತಿದ್ದಂತೆ ಟಿಕೆಟ್ ಬುಕ್ ಮಾಡಿದ್ದಾರೆ. ಬೆಳ್ಳಂಬೆಳಗ್ಗೆಯ ಶೋಗಳು ಸಂಪೂರ್ಣ ಬುಕ್ ಆಗಿವೆ. ಇನ್ನು ಟಿಕೆಟ್ ಬೆಲೆ ಕೂಡ ಅಷ್ಟೆ ಜಾಸ್ತಿ ಆಗಿದೆ. ಕೆಲವು ಚಿತ್ರಮಂದಿರಗಳಲ್ಲಿ 700 ರೂಪಾಯಿ ದಾಟಿದ್ರೆ ಇನ್ನು ಕೆಲವು ಕಡೆ 500 ರೂಪಾಯಿ ಮತ್ತು 400 ರೂ. ಇದೆ.
'KGF 2' ಮೊದಲ ವಿಮರ್ಶೆ ಔಟ್; ಭಾರತೀಯ ಚಿತ್ರರಂಗದ ಕಿರೀಟ ಎಂದ ಸೆನ್ಸಾರ್ ಸದಸ್ಯ
ಏಪ್ರಿಲ್ 14ರಂದು ತೆರೆಗೆ ಬರುತ್ತಿರುವ ಕೆಜಿಎಫ್ 2 ಅನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಧೀರ ಎನ್ನುವ ಭಯಾನಕ ಪಾತ್ರ ನಿರ್ವಾಹಿಸಿರುವ ಸಂಜಯ್ ದತ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಎಲ್ಲಾ ಕುತೂಹಲಗಳಿಗೆ ಏಪ್ರಿಲ್ 14ರಂದು ತೆರೆ ಬೀಳಲಿದೆ.