Asianet Suvarna News Asianet Suvarna News

5 ವರ್ಷದ ಹಿಂದೆ ಕೆಜಿಎಫ್....ಇಂದು ವಿಶ್ವಾದ್ಯಂತ ಸಲಾರ್ ರಿಲೀಸ್

ಅಭಿಮಾನಿಗಳ ನೆಚ್ಚಿನ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ರಿಲೀಸ್...ಪ್ರಭಾಸ್‌ನ ಹೊಸ ಅವತಾರದಲ್ಲಿ ನೋಡಲು ರೆಡಿನಾ?

Prashanth Neel Prithviraj Sukumaran Prabhas Salaar release word wide vcs
Author
First Published Dec 22, 2023, 10:42 AM IST

ಪ್ರಶಾಂತ್‌ ನೀಲ್ ನಿರ್ದೇಶನದ, ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ನಿರ್ಮಾಣದ, ಪ್ರಭಾಸ್ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ಸಲಾರ್‌’ ಇಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ವಿಶ್ವಾದ್ಯಂತ ಸುಮಾರು ಏಳುಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆರೆ ಕಾಣುತ್ತಿರುವ ಈ ಸಿನಿಮಾ, ಭಾರತದಲ್ಲಿಯೇ 6000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

‘ಡಂಕಿ’ ಜೊತೆಗಿನ ಥಿಯೇಟರ್ ಸಮಸ್ಯೆಯಿಂದಾಗಿ ಹೊಂಬಾಳೆ ಫಿಲಂಸ್ ದಕ್ಷಿಣ ಭಾರತದ ಪಿವಿಆರ್‌ ಐನಾಕ್ಸ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿತ್ತು. ಆದರೆ ಆ ಸಮಸ್ಯೆ ಬಗೆಹರಿದಿದ್ದು, ಪಿವಿಆರ್‌- ಐನಾಕ್ಸ್‌ನಲ್ಲಿ ಟಿಕೆಟ್ ಬುಕಿಂಗ್‌ ಮಾಡಬಹುದಾಗಿದೆ. ಆದರೆ ಈ ಕುರಿತು ಹೊಂಬಾಳೆ ಅಧಿಕೃತ ಪ್ರಕಟಣೆ ನೀಡಿಲ್ಲ.

ಪ್ರಭಾಸ್‌ ಜೊತೆ ಕೆಲಸ ಮಾಡೋ ಪ್ರತಿಯೊಬ್ಬರೂ ಈ ಘಟನೆ ಎದುರಿಸಲೇ ಬೇಕು; ರಾಜಮೌಳಿ ಎದುರು ಸತ್ಯ ಬಿಚ್ಚಿಟ್ಟ ಪೃಥ್ವಿರಾಜ್

ಈ ಚಿತ್ರ 2 ಗಂಟೆ 55 ನಿಮಿಷಗಳ ಅವಧಿಯದ್ದಾಗಿದೆ. ಸುಮಾರು 400 ಕೋಟಿ ರು. ವೆಚ್ಚದಲ್ಲಿ ತಯಾರಾಗಿದೆ ಎನ್ನಲಾಗಿದೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಕನ್ನಡದ ನಟರಾದ ಪ್ರಮೋದ್, ರಾಮ್‌ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಐದು ವರ್ಷದ ಹಿಂದೆ ಡಿ.20ರಂದು ಕೆಜಿಎಫ್ ಬಿಡುಗಡೆ

‘ಸಲಾರ್‌’ ಬಿಡುಗಡೆ ಮೂಲಕ ಹೊಂಬಾಳೆ ಫಿಲಂಸ್ ಕೆಜಿಎಫ್‌ ಬಿಡುಗಡೆ ಆ್ಯನಿವರ್ಸರಿಯನ್ನೂ ಆಚರಿಸುತ್ತಿದೆ. 2018ರ ಡಿ.20ರಂದು ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿ ಹೊಂಬಾಳೆ ಸಂಸ್ಥೆಯನ್ನು ದೇಶಕ್ಕೆ ಪರಿಚಯಿಸಿತ್ತು. ಸಲಾರ್ ಈಗ ಪ್ಯಾನ್ ಇಂಡಿಯಾ ಹಂತದಲ್ಲಿ ಹೊಂಬಾಳೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಲಕ್ಷಣ ಇದೆ.

 

Follow Us:
Download App:
  • android
  • ios