ಪ್ರಭಾಸ್ ಜೊತೆ ಕೆಲಸ ಮಾಡೋ ಪ್ರತಿಯೊಬ್ಬರೂ ಈ ಘಟನೆ ಎದುರಿಸಲೇ ಬೇಕು; ರಾಜಮೌಳಿ ಎದುರು ಸತ್ಯ ಬಿಚ್ಚಿಟ್ಟ ಪೃಥ್ವಿರಾಜ್
ಪ್ರಭಾಸ್ ಜೊತೆ ಕೆಲಸ ಮಾಡುವವರು ಡಯಟ್ ಮಾಡೋಕೆ ಆಗಲ್ಲ. ನೀವು ಸೆಟ್‌ನಲ್ಲಿ ಚೆನ್ನಾಗಿ ತಿಂದಿಲ್ಲ ಅಂದ್ರೆ ಆ ಘಟನೆ ಅರ್ಥನೇ ಆಗಲ್ಲ ಅಂತಾರೆ ಪೃಥ್ವಿ..
ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಸಲಾರ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾದ ಬಗ್ಗೆ ಸುಳಿವು ಕೊಡದೆ ಪ್ರಚಾರದಲ್ಲಿ ಭಾಗಿಯಾಗುತ್ತಿರುವ ಪ್ರಶಾಂತ್, ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಸಂದರ್ಶನವನ್ನು ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮಾಡಿದ್ದಾರೆ. ಎಲ್ಲರೂ ಕೇಳುವಂತೆ ಸಾಮಾನ್ಯ ಪ್ರಶ್ನೆ ಕೇಳಿದರೆ ಅದೇ ಉತ್ತರ ಬರುತ್ತದೆ...ಹೀಗಾಗಿ ಇಂಟ್ರೆಸ್ಟಿಂಗ್ ಇರಬೇಕು ಎಂದು ಸಲುಗೆ ಮೇಲೆ ರಾಜಮೌಳಿ ಪ್ರಶ್ನೆ ಹಾಕುತ್ತಾರೆ. ತೆಲುಗು ಜನಪ್ರಿ ಟಿವಿ ಸಂದರ್ಶನವೊಂದರಲ್ಲಿ ಈ ನಾಲ್ಕು ಸೆಲೆಬ್ರಿಟಿಗಳು ಕುಳಿತು ಚರ್ಚೆ ಮಾಡಿದ್ದಾರೆ.
What is the worst thing working with Prabhas? (ಪ್ರಭಾಸ್ ಜೊತೆ ಕೆಲಸ ಮಾಡುವ ಎದುರಿಸುವ ಕೆಟ್ಟ ವಿಷಯ ಯಾವುದು?) ಎಂದು ಎಸ್‌ಎಸ್ ರಾಜಮೌಳಿ ಪ್ರಶ್ನಿಸಿದ್ದಾರೆ. ಒಂದು ನಿಮಿಷವೂ ಯೋಚನೆ ಮಾಡದೆ ಡಯಟ್ ಮಾಡಲು ಆಗುವುದಿಲ್ಲ ಎಂದು ಪೃಥ್ವಿರಾಜ್ ಸುಕುಮಾರನ್ ಹೇಳುತ್ತಾರೆ. ಅಲ್ಲದೆ ಸೆಟ್‌ನಲ್ಲಿ ನಡೆದ ಘಟನೆವೊಂದನ್ನು ವಿವರಿಸಿದ್ದಾರೆ.
ಫೇಸ್‌ಬುಕ್ ಒಳ್ಳೆಯದಲ್ಲ ಅಂತಾನೆ ಮಗ; ಸ್ನೇಹಿತ್‌ನನ್ನು ಆ ಪದಗಳಿಂದ ಟ್ರೋಲ್ ಮಾಡಿದ್ದಕ್ಕೆ ತಾಯಿ ಬೇಸರ
'ನನ್ನ ಫ್ಯಾಮಿಲಿ ಒಂದು ದಿನ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿದರು. ಆಗ 9 ವರ್ಷದ ನನ್ನ ಮಗಳು ಬಂದಿದ್ದಳು. ತಿನ್ನಲು ಏನು ಇಷ್ಟ ಎಂದು ಪ್ರಭಾಸ್ ನನ್ನ ಮಗಳನ್ನು ಕೇಳಿದ್ದರು. ಚಿಕ್ಕ ಹುಡುಗಿ ಆಗಿರುವ ಕಾರಣ ಒಂದಿಷ್ಟು ಆಹಾರದ ಹೆಸರುಗಳನ್ನು ಹೇಳಿದ್ದಾಳೆ. ಅಂದು ರಾತ್ರಿ ನಾವು ರೂಮಿಗೆ ಹೋಗುವಷ್ಟರಲ್ಲಿ ಅಷ್ಟೂ ಆಹಾರಗಳು ರೆಡಿಯಾಗಿ ಟೇಬಲ್ ಮೇಲೆ ಇಟ್ಟಿದ್ದರು. ಅಂದು ನಮ್ಮ ರೂಮ್ ಪಕ್ಕ ಮತ್ತೊಂದು ರೂಮ್ ಬುಕ್ ಮಾಡಿ ಅಲ್ಲಿನ ಟೇಬಲ್ ಮೇಲೆ ಆಹಾರಗಳನ್ನು ಇಡಬೇಕಾಗಿತ್ತು. ಮರುದಿನ ಭೇಟಿ ಮಾಡಿ ಪ್ರಭಾಸ್ ಸರ್ ಹೆಂಡತಿ ಮಗಳು ಮತ್ತು ನಾನು ಮಾತ್ರ ಬಂದಿರುವುದು ನೀವು ನಮ್ಮ ಅಂಕಲ್ ಆಂಟಿ ಎಲ್ಲಾ ಬಂದಿದ್ದಾರೆ ಅನ್ನೋ ರೀತಿಯಲ್ಲಿ ಊಟ ಕಳುಹಿಸಿದ್ದೀರಿ ಎಂದು ಹೇಳಿದೆ. ನಾವು ಚೆನ್ನಾಗಿ ತಿನ್ನಬೇಕು ಅನ್ನೋ ಪ್ರಭಾಸ್ ಪಾಲಿಸಿ ಆದರೆ ಪ್ರಭಾಸ್ ಮಾತ್ರ ತಿನ್ನುವುದಿಲ್ಲ' ಎಂದು ಪೃಥ್ವಿರಾಜ್ ಮಾತನಾಡಿದ್ದಾರೆ.
ಅಬ್ಬಬ್ಬಾ! ಬಿಗ್ ಬಾಸ್ ಫಿನಾಲೆಯಲ್ಲಿ 1 ಲಕ್ಷ ರೂ. ಬಟ್ಟೆ ಧರಿಸಿದ ನಾಗಾರ್ಜುನ; ಫೋಟೋ ನೋಡಿ ನೆಟ್ಟಿಗರು ಶಾಕ್
'ಪ್ರಭಾಸ್ ಜೊತೆ ಇರುವಾಗ ನಮಗೆ ಇದು ಇಷ್ಟ ಅಥವಾ ಹೀಗೆ ಮಾಡುವುದು ಮಿಸ್ ಮಾಡಿಕೊಳ್ಳುತ್ತೀನಿ ಎಂದು ಹೇಳಬಾರದು. ನನಗೆ ಕಾರುಗಳು ಇಷ್ಟ ಡ್ರೈವಿಂಗ್ ಅಂದ್ರೆ ತುಂಬಾ ಕ್ರೇಜ್ ಇದೆ..ಹೀಗೆ ಒಂದು ದಿನ ಶೂಟಿಂಗ್ ಮಾಡುವಾಗ ಅಯ್ಯೋ ನಾನು ಮನೆಗೆ ಹೋಗಿ ನನ್ನ ಕಾರುಗಳನ್ನು ಓಡಿಸಿ ತುಂಬಾ ದಿನಗಳು ಆಯ್ತು ಎಂದು ಹೇಳುತ್ತಿದ್ದೆ. ತಕ್ಷಣವೇ ಅಲ್ಲಿದ್ದ ಪ್ರಭಾಸ್ ತಲೆ ಕೆಡಿಸಿಕೊಳ್ಳಬೇಡ ನನ್ನ ಲ್ಯಾಂಬರ್ಗಿನಿ ಕಾರನ್ನು ಇಲ್ಲಿ ಬಿಡುತ್ತೀನಿ ನೀನು ಸ್ವಲ್ಪ ದಿನ ಓಡಿಸಿಕೊಂಡು ಎಂಜಾಯ್ ಮಾಡು ಅಂದ್ರು. ನಾನು ಒಂದು ನಿಮಿಷ ಶಾಕ್ ಆಗಿಬಿಟ್ಟಿ...ನಿಮ್ಮ ತಲೆ ಕೆಟ್ಟಿದೆ ಅಂತ ಹೇಳಿ ಸುಮ್ಮನಾದೆ' ಎಂದು ಪೃಥ್ವಿರಾಜ್ ಹೇಳಿದ್ದಾರೆ.