Asianet Suvarna News Asianet Suvarna News

ಪ್ರಮೋದ್‌ ನಟನೆಯ ಬಾಂಡ್‌ ರವಿ ಚಿತ್ರದ ಟೀಸರ್‌ ಬಿಡುಗಡೆ

ನಟ ಪ್ರಮೋದ್‌ ಅಭಿನಯದ ‘ಬಾಂಡ್‌ ರವಿ’ ಚಿತ್ರದ ಟೀಸರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಇದು ಪ್ರೀಮಿಯರ್‌ ಪದ್ಮಿನಿ ಹುಡುಗ, ರತ್ನನ್‌ ಪ್ರಪಂಚದ ಉಡಾಳ್‌ ಬಾಬುವಿನ ಹೊಸ ಅವತಾರ ಎನ್ನುತ್ತಿದ್ದಾರೆ.

Pramod Kajal Kunder starrer Bond Ravi teaser out gvd
Author
First Published Sep 28, 2022, 7:09 AM IST

ನಟ ಪ್ರಮೋದ್‌ ಅಭಿನಯದ ‘ಬಾಂಡ್‌ ರವಿ’ ಚಿತ್ರದ ಟೀಸರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಇದು ಪ್ರೀಮಿಯರ್‌ ಪದ್ಮಿನಿ ಹುಡುಗ, ರತ್ನನ್‌ ಪ್ರಪಂಚದ ಉಡಾಳ್‌ ಬಾಬುವಿನ ಹೊಸ ಅವತಾರ ಎನ್ನುತ್ತಿದ್ದಾರೆ. ‘ನಾನು ಈ ಚಿತ್ರವನ್ನು ಇಷ್ಟಪಟ್ಟು ಮಾಡಿದ್ದೇನೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಬಲವಾದ ನಂಬಿಕೆ ಕೂಡ ನನಗಿದೆ. ಅಷ್ಟು ಒಳ್ಳೆಯ ಕಥೆ ಸಿನಿಮಾದಲ್ಲಿದೆ. ನಾನು ಕೂಡ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೇನೆ ಎಂಬ ಭರವಸೆ ಇಟ್ಟುಕೊಂಡಿದ್ದೇನೆ. ನನ್ನ ಇಲ್ಲಿಯವರೆಗೂ ಬೆಳೆಸಿದಂತೆ ಮುಂದೆ ಕೂಡ ಪ್ರೋತ್ಸಾಹ ನೀಡಿ’ ಎಂದು ಪ್ರಮೋದ್‌ ಮನವಿ ಮಾಡಿಕೊಂಡರು.

ಈ ಚಿತ್ರದ ನಿರ್ದೇಶಕ ಪ್ರಜ್ವಲ್‌ ಮಾತನಾಡಿ, ‘ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಪ್ರಮೋದ್‌ ಅವರು ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ನವೆಂಬರ್‌ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ’ ಎಂದರು. ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದಾರೆ. ‘ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಮಟ್ಟಿಗೆ ಅಭಿನಯಿಸಿದ್ದೇನೆ’ ಎಂಬುದು ಕಾಜಲ್‌ ಕುಂದರ್‌ ಮಾತು.  ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ ನನಗೂ ಈ ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ. ಮುಂಗಾರು ಮಳೆ ಕೂಡ ಹೀಗೆ ಆರಂಭವಾಗಿದ್ದು, ಅದು ದೊಡ್ಡ ಹಿಟ್ ಆಯ್ತು ಈ ಸಿನಿಮಾ ಕೂಡ ಹಿಟ್ ಆಗುತ್ತೆ. ಪ್ರಮೋದ್ ಮತ್ತು ಕಾಜಲ್ ಕುಂದರ್ ಇಬ್ಬರು ಅಮೋಘವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬಾಂಡ್‌ ರವಿ ಆದ ಉಡಾಳ್ ಬಾಬು ಪ್ರಮೋದ್‌: ಚಿತ್ರದ ಫಸ್ಟ್‌ಲುಕ್‌ ರಿಲೀಸ್

ಚಿತ್ರದ ನಿರ್ದೇಶಕ ಪ್ರಜ್ಚಲ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಸಿನಿಮಾ ಚೆನ್ನಾಗಿ ಮೂಡಿ ಮುಂದಿದೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಪ್ರಮೋದ್ ಅವರು ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಅವ್ರು ವ್ಯಕ್ತಿಯಾಗಿ, ನಟನಾಗಿ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ನವೆಂಬರ್ ನಲ್ಲಿ ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡಿದ್ದೇವೆ. ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂದು ತಮ್ಮ ಸಿನಿಮಾ ಬಗ್ಗೆ ಮನದಾಳದ ಮಾತುಗಳನ್ನ ಹಂಚಿಕೊಂಡರು.  ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ, ಮಂಗಳೂರು ಭಾಗಗಳಲ್ಲಿ ಬಾಂಡ್ ರವಿ ಚಿತ್ರೀಕರಣ ನಡೆಸಲಾಗಿದೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್, ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.

ವೃತ್ತಿ ಜೀವನದಲ್ಲಿ ತುಂಬಾನೇ ಸಂತೋಷವಾಗಿರುವೆ: ಕಾಜಲ್ ಕುಂದರ್

ಇದೊಂದು ಆ್ಯಕ್ಷನ್‌ ಹಾಗೂ ಪ್ರೇಮ ಕತೆಯ ಸಿನಿಮಾ. ನರಸಿಂಹಮೂರ್ತಿ ಚಿತ್ರ ನಿರ್ಮಾಪಕರು. ಮಲ್ಲಿಕಾರ್ಜುನ್‌ ಕಾಶಿ ಹಾಗೂ ಝೇವಿಯರ್‌ ಫರ್ನಾಂಡಿಸ್‌ ಸಹ ನಿರ್ಮಾಪಕರು. ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯಾಗಿ ಪ್ರಮೋದ್‌ ನಟಿಸಿದ್ದಾರೆ. ಅಪ್ಪು ಅವರ ಅಭಿಮಾನಿ ಪಾತ್ರದಲ್ಲಿ ನಟಿಸಿರುವುದು ನನ್ನ ಭಾಗ್ಯ. ಈ ಕಾರಣಕ್ಕೆ ನನಗೆ ಈ ಚಿತ್ರದ ಪಾತ್ರ ಮತ್ತು ಕತೆ ತುಂಬಾ ವಿಶೇಷ’ ಎನ್ನುತ್ತಾರೆ ಪ್ರಮೋದ್‌. ಪ್ರಜ್ವಲ್‌ ಎಸ್‌ ಪಿ ಚಿತ್ರದ ನಿರ್ದೇಶಕರು. ನರಸಿಂಹಮೂರ್ತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿಕಾಳೆ, ಧರ್ಮ, ವಿಜಯ್‌ ಚೆಂಡೂರ್‌, ಶೋಭರಾಜ್‌, ಗೋವಿಂದೇಗೌಡ,ಪವನ್‌, ಮಿಮಿಕ್ರಿ ಗೋಪಿ, ಗುರುರಾಜ್‌ ಹೊಸಕೋಟೆ ನಟಿಸಿದ್ದಾರೆ.
 

Follow Us:
Download App:
  • android
  • ios