Asianet Suvarna News Asianet Suvarna News

ಬಾಂಡ್‌ ರವಿ ಆದ ಉಡಾಳ್ ಬಾಬು ಪ್ರಮೋದ್‌: ಚಿತ್ರದ ಫಸ್ಟ್‌ಲುಕ್‌ ರಿಲೀಸ್

ನಟ ಪ್ರಮೋದ್‌ ಅವರ ಖಾತೆಗೆ ಮತ್ತೊಂದು ಹೊಸ ಸಿನಿಮಾ ಜಮೆ ಆಗಿದೆ. ಯುಗಾದಿ ಹಬ್ಬದ ಅಂಗವಾಗಿ ಸೆಟ್ಟೇರಿ, ಘೋಷಣೆ ಆಗಿರುವ ಅವರ ಈ ಹೊಸ ಚಿತ್ರದ ಹೆಸರು ‘ಬಾಂಡ್‌ ರವಿ’ ಎಂಬುದು.

Premier padmini fame actor pramod to starrer in bond ravi film gvd
Author
Bangalore, First Published Apr 4, 2022, 3:30 AM IST

'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ನಟ ಪ್ರಮೋದ್ (Pramod) 'ಮತ್ತೆ ಉದ್ಭವ', 'ಪ್ರೀಮಿಯರ್‌ ಪದ್ಮಿನಿ' ಚಿತ್ರಗಳಲ್ಲಿ ಚುರುಕಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಗೊಂಡ 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಉಡಾಳ್ ಬಾಬು ಪಾತ್ರದಲ್ಲಿ ಇವರ ಅಭಿನಯ ಕಂಡು ಸಿನಿ ಪ್ರೇಕ್ಷಕರು ಕೊಂಡಾಡಿದ್ದರು. ಇದೀಗ ನಟ ಪ್ರಮೋದ್‌ ಅವರ ಖಾತೆಗೆ ಮತ್ತೊಂದು ಹೊಸ ಸಿನಿಮಾ ಜಮೆ ಆಗಿದೆ. ಯುಗಾದಿ ಹಬ್ಬದ (Ugadi Festival) ಅಂಗವಾಗಿ ಸೆಟ್ಟೇರಿ, ಘೋಷಣೆ ಆಗಿರುವ ಅವರ ಈ ಹೊಸ ಚಿತ್ರದ ಹೆಸರು ‘ಬಾಂಡ್‌ ರವಿ’ (Bond Ravi) ಎಂಬುದು.

‘ಪ್ರಿಮಿಯರ್‌ ಪದ್ಮಿನಿ’ ಚಿತ್ರದ ನಂತರ ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಳ್ಳುತ್ತ ಸದ್ಯ ಕನ್ನಡ ಬಹು ಬೇಡಿಕೆಯ ನವತಾರೆಯಾಗಿರುವ ಪ್ರಮೋದ್‌ ಅವರ ‘ಬಾಂಡ್‌ ರವಿ’ ಚಿತ್ರದ ಫಸ್ಟ್‌ ಲುಕ್‌ ಹಾಗೂ ಟೈಟಲ್‌ ಬಿಡುಗಡೆ ಆಗಿದೆ. ಪ್ರಜ್ವಲ್‌ ಎಸ್‌ ಪಿ (Prajwal SP) ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರಾದ ಎಸ್‌ ಮಹೇಂದರ್‌, ಪ್ರಶಾಂತ್‌ ರಾಜ್‌ ಹಾಗೂ ಕಾಂತಾ ಕನ್ನಹಳ್ಳಿ ಜತೆ ಅಸಿಸ್ಟೆಂಟ್‌, ಅಸೋಸಿಯೇಟ್‌ ಹಾಗೂ ಕೋ ಡೈರೆಕ್ಟರ್‌ ಆಗಿ ಕೆಲಸ ಮಾಡಿರುವ ಪ್ರಜ್ವಲ್‌ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಕಮರ್ಷಿಯಲ್‌ ಹಾಗೂ ಎಮೋಷನಲ್ ಥ್ರಿಲ್ಲರ್‌ ಜಾನರ್‌ ಚಿತ್ರವಿದು. ನರಸಿಂಹಮೂರ್ತಿ ನಿರ್ಮಾಪಕರು. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್‌, ಶೋಭರಾಜ್‌ ಮುಖ್ಯ ಪಾತ್ರಧಾರಿಗಳು. ಕೆ ಎಸ್‌ ಚಂದ್ರಶೇಖರ್‌ ಕ್ಯಾಮೆರಾ, ಸುನಿಲ್ ದೇವರಾಜ್‌ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.

Alankar Vidyarthi: ಪ್ರಮೋದ್ ಹೊಸ ಚಿತ್ರಕ್ಕೆ ಡಾಲಿ ಧನಂಜಯ್ ಕ್ಲ್ಯಾಪ್

ಪ್ರಮೋದ್‌ 'ಇಂಗ್ಲಿಷ್‌ ಮಂಜ' (English Manja) ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 2020ರಲ್ಲಿ ಸೆಟ್ಟೇರಿದ್ದ 'ಇಂಗ್ಲಿಷ್ ಮಂಜ' ಪಕ್ಕಾ ಆ್ಯಕ್ಷನ್, ರೌಡಿಸಂ ಹಿನ್ನೆಲೆಯುಳ್ಳ ಚಿತ್ರವಾಗಿದ್ದು, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಟೈಟಲ್ ಮೂಲಕವೇ ಒಂದು ಹಂತದ ಕುತೂಹಲವನ್ನು ಸಿನಿಮಂದಿಯಲ್ಲಿ ಮೂಡಿಸಿದ್ದ ಈ ಚಿತ್ರದ ಟೀಸರ್ ಬಿಡುಗಡೆಯಾದ ಮೇಲೆ ಆ ಕ್ಯೂರಿಯಾಸಿಟಿ ಲೆವೆಲ್ ಇನ್ನಷ್ಟು ಹೆಚ್ಚಿಸಿದೆ. 'ಕೋಲಾರ' ಚಿತ್ರವನ್ನು ನಿರ್ದೇಶಿಸಿದ್ದ ಆರ್ಯ.ಎಂ.ಮಹೇಶ್ (Arya M Mahesh) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಎರಡನೇ ಸಿನಿಮಾ. ವಿಶೇಷವಾಗಿ ಈ ಚಿತ್ರದಲ್ಲಿ 15 ಮಂದಿ ನಿರ್ದೇಶಕರು ನಟಿಸಿದ್ದಾರೆ. 

ರೌಡಿಸಂ ಹಿನ್ನೆಲೆಯ ಕಥೆಗೆ ಬೇಕಾದ ಎಲ್ಲಾ ಕಮರ್ಶಿಯಲ್ ಎಳೆಯೂ 'ಇಂಗ್ಲಿಷ್ ಮಂಜ' ಚಿತ್ರದಲ್ಲಿದ್ದು ಅದರೊಂದಿಗೆ ಬ್ಯೂಟಿಫುಲ್ ಲವ್‌ಸ್ಟೋರಿ ಚಿತ್ರದಲ್ಲಿದೆ. ಲಾಂಗ್ ಹಿಡಿದು ರಗಡ್ ಲುಕ್‍ನಲ್ಲಿ ಅಬ್ಬರಿಸಿರುವ ಪ್ರಮೋದ್ ಲವರ್ ಬಾಯ್ ಆಗಿಯೂ ಚಿತ್ರದಲ್ಲಿ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ತೇಜಸ್ವಿನಿ ಶರ್ಮಾ (Tejaswini Sharma) ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಸುನೀಲ್ ಪುರಾಣಿಕ್, ವಿ.ನಾಗೇಂದ್ರ ಪ್ರಸಾದ್, ವಿಕ್ಟರಿ ವಾಸು, ನಾಗೇಂದ್ರ ಅರಸ್ ಒಳಗೊಂಡ ಅನುಭವಿ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಡೇವಿಡ್.ಆರ್ (David R) ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿ.ಆರ್.ಹೇಮಂತ್ ಕುಮಾರ್ ಸಂಗೀತ ಸಂಯೋಜನೆ, ರಂಗಸ್ವಾಮಿ ಕ್ಯಾಮೆರಾ ಕೈಚಳಕ, ಕೆ.ಗಿರೀಶ್ ಕುಮಾರ್ ಸಂಕಲನ ಚಿತ್ರಕ್ಕಿದೆ.

Actor Pramod: ಪ್ರೀಮಿಯರ್ ಪದ್ಮಿನಿ ಹುಡುಗನ ಕೈಯಲ್ಲಿ 6 ಚಿತ್ರಗಳು

ಇನ್ನು ಪ್ರಮೋದ್ 'ಅಲಂಕಾರ್‌ ವಿದ್ಯಾರ್ಥಿ' (Alankar Vidyarthi) ಎಂಬ ಸಿನಿಮಾದಲ್ಲೂ ಕಾಲೇಜು ಹುಡುಗನಾಗಿ ನಟಿಸುತ್ತಿದ್ದಾರೆ. ಕೇಶವ್ ಎಸ್ ಇಂಡಲವಾಡಿ (Keshav S Indlavadi) ನಿರ್ದೇಶನದ ಚಿತ್ರವಿದು. ಇಲ್ಲಿಯವರೆಗೆ ನಾನು ಫುಲ್‌ ಕಾಮಿಡಿ ಇರುವ ಸಿನಿಮಾದಲ್ಲಿ ನಟಿಸಿರಲಿಲ್ಲ. ಈ ಕಾರಣಕ್ಕೆ ಈ ಚಿತ್ರ ಒಪ್ಪಿಕೊಂಡೆ. ಪೂರ್ಣ ಕಾಲೇಜು ಸ್ಟೋರಿ ಇರುವ ಚಿತ್ರದಲ್ಲಿ ಮಿಸ್ಟರಿ ಕೂಡ ಇದೆ. ಫ್ರೆಂಡ್‌ಶಿಪ್‌ನಲ್ಲಿರುವ ಫನ್‌, ಲವ್‌ ಎಲ್ಲಇವೆ' ಎಂದು ಪ್ರಮೋದ್ ಹೇಳಿದ್ದಾರೆ. 'ಅಲಂಕಾರ್‌ ವಿದ್ಯಾರ್ಥಿ' ಚಿತ್ರಕ್ಕೆ 'ಮಾರ್ಕ್ಸ್ ಕಮ್ಮಿ, ಮಾರ್ಕ್ಸ್ ಕಾರ್ಡ್‌ ಜಾಸ್ತಿ' ಎಂಬ ಟ್ಯಾಗ್‌ಲೈನ್ ಇದ್ದು, ಅರ್ಚನಾ ಕೊಟ್ಟಿಗೆ (Archana Kottige) ಪ್ರಮೋದ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. 
 

Follow Us:
Download App:
  • android
  • ios