ವೃತ್ತಿ ಜೀವನದಲ್ಲಿ ತುಂಬಾನೇ ಸಂತೋಷವಾಗಿರುವೆ: ಕಾಜಲ್ ಕುಂದರ್
ಬಾಂಡ್ ರವಿ ಮತ್ತು ಪೆಪ್ಪಿ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಕಾಜಲ್ ಕುಂದರ್ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ.
ಮಾಯಾ ಕನ್ನಡಿ (Maya Kannadi) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ಕಾಜಲ್ ಕುಂದರ್ (Kaajal Kunder) ಇದೀಗ ಬೇಡಿಕೆಯಲ್ಲಿರುವ ನಟಿ.
ಕಾಜಲ್ ಕುಂದರ್ ಇದೀಗ ಪ್ರಮೋದ್ ಶೆಟ್ಟಿ (Pramod Shetty) ಜೊತೆ ಬಾಂಡ್ ರವಿ (Bond Ravi) ಸಿನಿಮಾ ಸಹಿ ಮಾಡಿದ್ದಾರೆ ಹಾಗೆ ವಿನಯ್ ರಾಜ್‌ಕುಮಾರ್ (Vinay Rajkumar) ಜೊತೆ ಪೆಪ್ಪಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
'ಪಕ್ಕದ ಮನೆ ಹುಡುಗಿ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿರುವೆ ಎಲ್ಲರಿಗೂ ಪಾತ್ರ ಕನೆಕ್ಟ್ ಆಗುತ್ತದೆ. ಇಷ್ಟೆ ನಾನು ಮಾಹಿತಿ ರಿವೀಲ್ ಮಾಡುವುದು. ಪಾತ್ರದ ಬಗ್ಗೆ ಹೇಳಿದರೆ ಕಥೆ ಬಗ್ಗೆ ಐಡಿಯಾ ಬರುತ್ತೆ' ಎಂದು ಕಾಜಲ್ ಹೇಳಿದ್ದಾರೆ.
'ಪ್ರಮೋದ್ ಅವರ ಬೇರೆ ಸಿನಿಮಾಗಳನ್ನು ನೋಡಿದ್ದೀನಿ. ಅದ್ಭುತ ಕಲಾವಿದ ಮತ್ತು ಚೆನ್ನಾಗಿ ತಂಡದ ಜೊತೆ ಕೆಲಸ ಮಾಡುತ್ತಾರೆ. ಬಾಂಡ್ ರವಿ ಸಿನಿಮಾ ಕೊಡಚಾದ್ರಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ' ಎಂದಿದ್ದಾರೆ ನಟಿ.
'ಕನ್ನಡ ಚಿತ್ರರಂಗದಲ್ಲಿ ನನಗೆ ಒಳ್ಳೆಯ ಆಫರ್‌ಗಳು ಬರುತ್ತಿದೆ. ನನ್ನ ಶ್ರಮಕ್ಕೆ ಬೆಲೆ ಸಿಕ್ಕಿದೆ. ನನ್ನ ಜರ್ನಿ ಇನ್ನೂ ಇದೆ ನಾನು ಸಂತೋಷವಾಗಿರುವೆ' ಎಂದು ಜರ್ನಿ ಬಗ್ಗೆ ಹೇಳಿದ್ದಾರೆ.
'ಬೇರೆ ಬೇರೆ ಭಾಷೆಯಲ್ಲಿ ನಟಿಸುತ್ತಿರುವ ಕಾರಣ ನನಗೆ ಅವರ ಕಲ್ಚರ್ ಮತ್ತು ಕೆಲಸದ ಬಗ್ಗೆ ಖುಷಿ ಇದೆ. ದೊಡ್ಡ ಚಾಲೆಂಜ್ ಅಂದ್ರೆ ಭಾಷೆಗೆ ಹೊಂದಿಕೊಳ್ಳುವುದು' ಎಂದು ಕಾಜಲ್ ಮಾತನಾಡಿದ್ದಾರೆ.