ಚಂದನವನದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಪ್ರೀತಿಯ ಚಿಂಟು ಅಣ್ಣನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಗತಿ ಶೆಟ್ಟಿ ರಕ್ಷಿತ್ ಜೊತೆಗಿನ ಫೋಟೊ ಹಂಚಿಕೊಂಡು, ತಮ್ಮ ಸಂಬಂಧದ ಕುರಿತಾಗಿ ಭಾವನಾತ್ಮಕವಾಗಿ ಬರೆದು ವಿಶ್ ಮಾಡಿದ್ದಾರೆ. 

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ

ಕನ್ನಡ ಚಿತ್ರರಂಗದಲ್ಲಿ ಅದ್ಭುತ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗಿನ ಫೋಟೊ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ರಕ್ಷಿತ್ ಶೆಟ್ಟಿಯಲ್ಲಿ ಅಣ್ಣನನ್ನು ಕಾಣುವ ಪ್ರಗತಿ, ಪ್ರೀತಿಯಿಂದ ಚಿಂಟು ಅಣ್ಣ ಎಂದೇ ಕರೆಯುತ್ತಾರೆ. ಹಾಗಾಗಿ ಪ್ರೀತಿಯ ಚಿಂಟು ಅಣ್ಣನಿಗೆ ಪ್ರಗತಿ ಮುದ್ದಾದ ಶುಭಾಶಯ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಗತಿ ಶೆಟ್ಟಿ ಭಾವನಾತ್ಮಕ ಪೋಸ್ಟ್

“ಕೆಲವು ಬಂಧಗಳು ಪದಗಳಿಗೆ ಮೀರಿದ ಸಂಬಂಧಗಳಾಗಿರುತ್ತವೆ , ಮತ್ತು ನೀವು ಯಾವಾಗಲೂ ಆ ವ್ಯಕ್ತಿಯಾಗಿದ್ದೀರಿ. ಸಹೋದರ, ರಕ್ಷಕ ಮತ್ತು ನಿಜವಾದ ಸ್ಫೂರ್ತಿ ನೀವು. ನಿಮ್ಮ ಉತ್ಸಾಹ, ಸೃಜನಶೀಲತೆ ಮತ್ತು ಸಮರ್ಪಣೆ ಯಾವಾಗಲೂ ನಿಮ್ಮನ್ನು ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲಿಸಿದೆ. ಯಶಸ್ಸು ಮತ್ತು ಸಾಧನೆಗಳನ್ನು ಮೀರಿ, ನಿಮ್ಮ ನಮ್ರತೆ, ಶಕ್ತಿ ಮತ್ತು ದಯೆ ನಿಮ್ಮನ್ನು ನಿಜವಾಗಿಯೂ ವಿಶೇಷವಾಗಿಸುತ್ತದೆ. ಈ ವರ್ಷ ನಿಮಗೆ ಹೆಚ್ಚಿನ ಯಶಸ್ಸು, ಸುಂದರ ನೆನಪುಗಳು ಮತ್ತು ನಗಲು ಅಂತ್ಯವಿಲ್ಲದ ಕಾರಣಗಳನ್ನು ತರಲಿ. Happy Birthday Chintu Anna @rakshitshetty ಈ ಹೊಸ ವರ್ಷ ನಿಮಗಷ್ಟೇ ಅಲ್ಲ, ನಿಮ್ಮ ಎಲ್ಲಾ ಕನಸುಗಳಿಗೂ ದೊಡ್ಡ ಯಶಸ್ಸು ತರಲಿ. ಹುಟ್ಟುಹಬ್ಬದ ಶುಭಾಶಯಗಳು ಚಿಂಟು ಅಣ್ಣ” ಎಂದು ಪ್ರಗತಿ ಶೆಟ್ಟಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಪ್ರಗತಿ ಶೆಟ್ಟಿ ರಕ್ಷಿತ್ ಶೆಟ್ಟಿಗೆ ತಮ್ಮ ಜೀವನದಲ್ಲಿ ಅಣ್ಣನ ಸ್ಥಾನ ಕೊಟ್ಟಿದ್ದಾರೆ. ಪ್ರತಿ ವರ್ಷ ರಕ್ಷಾಬಂಧನದಂದು ರಕ್ಷಿತ್ ಶೆಟ್ಟಿಗೆ ರಾಖಿ ಕಟ್ಟೋದನ್ನು ಮರೆಯೋದಿಲ್ಲ ಪ್ರಗತಿ. ಜೊತೆಗೆ ಅಣ್ಣನ ಕುರಿತಾದ ಮಧುರವಾದ ಮಾಹಿತಿಯನ್ನು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ?

ರಕ್ಷಿತ್ ಶೆಟ್ಟಿ ಕೆಲವು ವರ್ಷಗಳಿಂದ ಕಾಣೆಯಾಗಿದ್ದಾರೆ. ಅಂದ್ರೆ ಅವರು ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಎರಡು ಸಿನಿಮಾಗಳ ಮೂಲಕ ಶೀಘ್ರದಲ್ಲೆ ಬರುವುದಾಗಿ ಹೇಳಿದ ರಕ್ಷಿತ್ ಶೆಟ್ಟಿ ಇವತ್ತಿಗೂ ಕೂಡ ಯಾವುದೇ ಅಪ್ ಡೇಟ್ ಕೊಟ್ಟಿಲ್ಲ. ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಕುತೂಹಲದಲ್ಲಿದ್ದಾರೆ ಅಭಿಮಾನಿಗಳು. ಆ ಕಾರಣಕ್ಕಾದ್ರೂ ಇವತ್ತಿನ ವಿಶೇಷ ದಿನ ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾ ಕುರಿತು ಅಪ್ ಡೇಟ್ ಕೊಡ್ತಾರ ಕಾದು ನೋಡಬೇಕು.

View post on Instagram