ನಟ ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ತಮ್ಮ ಸಂಬಂಧವನ್ನು ಸರಳ ವಿವಾಹದ ಮೂಲಕ ಅಧಿಕೃತಗೊಳಿಸಿದ್ದಾರೆ. ನರೇಶ್‌ 65ನೇ ಹುಟ್ಟುಹಬ್ಬದಂದು ಪವಿತ್ರಾ ಉಡುಗೊರೆಯಾಗಿ ಶರ್ಟ್ ನೀಡಿದರು. ನರೇಶ್ ತಾಯಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿದರು. ಪವಿತ್ರಾ, ನರೇಶ್‌ರ ಚೈತನ್ಯ ಮತ್ತು ಕೆಲಸದ ಬಗೆಗಿನ ಮೆಚ್ಚುಗೆಯ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಅಪರ್ಥೈಸಲ್ಪಟ್ಟು ಟ್ರೋಲ್‌ಗೆ ಗುರಿಯಾಗಿವೆ.

ಕಳೆದ ಎರಡು ಮೂರು ವರ್ಷಗಳಿಂದ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್‌ ಸುದ್ದಿಯಲ್ಲಿ ಇರುವುದು ಅವರಿಬ್ಬರ ಸ್ನೇಹ, ಪ್ರೀತಿ ಮತ್ತು ಲಿವ್‌ಇನ್‌ ರಿಲೇಷನ್‌ಶಿಪ್‌ಗೆ. ಕೊನೆ ಕೊನೆಯಲ್ಲಿ ಇವರಿಬ್ಬರ ವೈಯಕ್ತಿ ಜೀವನ ದೊಡ್ಡ ಚರ್ಚೆ ಆಗಿದ್ದೆ ನರೇಶ್ ಮಾಜಿ ಪತ್ನಿ ಮಾಧ್ಯಮಗಳ ಎದುರು ಬಂದಾಗ. ಹೀಗಾಗಿ ಯಾವ ತಲೆ ಬಿಸಿ ಬೇಡ ಎಂದು ಇಬ್ಬರು ಸರಳವಾಗಿ ಮದುವೆ ಮಾಡಿಕೊಂಡು ಎಲ್ಲೆಡೆ ಅಧಿಕೃತ ಘೋಷಣೆ ಮಾಡಿಬಿಟ್ಟರು ಅದು ಸಿನಿಮಾ ಮೂಲಕ. ಹೀಗಾಗಿ ಯಾರಿಗೂ ಯಾವುದೇ ಕ್ಲಾರಿಟಿ ಇಲ್ಲ. ಈಗಲೂ ಇಲ್ಲ ಹಾಗಲ್ಲ ಎಂದು ಗಾಸಿಪ್‌ಗಳು ಕೇಳಿ ಬರುತ್ತಲೇ ಇರುತ್ತದೆ. 

ಜನವರಿ 20ರಂದು ನರೇಶ್ 65ರ ವಸಂತಕ್ಕೆ ಕಾಲಿಡುತ್ತಾರೆ.ಈ ವರ್ಷ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡು. ಈ ಆಚರಣೆಯಲ್ಲಿ ಪವಿತ್ರಾ ಗೌಡ ಕೂಡ ಭಾಗಿಯಾಗಿದ್ದರು. ಇಲ್ಲಿಗೆ ಒಟ್ಟಿಗೆ ಇದ್ದಾರೆ ಅನ್ನೋದು ಕನ್ಫರ್ಮ್‌ ಅಯ್ತು. ಹುಟ್ಟುಹಬ್ಬದಂದು ಪತಿಗೆ ಶರ್ಟ್‌ ಗಿಫ್ಟ್‌ ಮಾಡಿದ್ದಾರೆ ಹಾಗೆಯೇ ನರೇಶ್ ಆಯ್ಕೆ ಮಾಡಿರುವ ಸೀರೆಯನ್ನು ಧರಿಸಿದ್ದೀನಿ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ನರೇಶ್‌ ಕೂಡ ವೇದಿಕೆ ಮೇಲೆ ತಮ್ಮ ಸಿನಿಮಾ ಕರಿಯರ್, ವೈಯಕ್ತಿಕ ಜೀವನ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ತಮ್ಮ ತಾಯಿ ವಿಜಯ ನಿರ್ಮಲಾ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದಿದ್ದಾರೆ. ನರೇಶ್ ಮಾತು ಮುಗಿಸುತ್ತಿದ್ದಂತೆ ಪವಿತ್ರಾ ಮತ್ತೊಮ್ಮೆ ಮಾತನಾಡಿದ್ದಾರೆ. ಪವಿತ್ರಾ ಲೋಕೇಶ್‌ ವೇದಿಕೆ ಮೇಲೆ ಹೇಳಿರುವುದು ಇಷ್ಟೇ ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತುಗಳನ್ನು ಕಟ್ ಮಾಡಿ ಸಣ್ಣ ಸಣ್ಣ ವಿಡಿಯೋ ರೀತಿಯಲ್ಲಿ ಸಖತ್ ವೈರಲ್ ಮಾಡುತ್ತಿದ್ದಾರೆ.

60 ದಿನಗಳಲ್ಲಿ 15 ಕೆಜಿ ಇಳಿಸಿಕೊಂಡ ನಟ ನವೀನ್‌ಗೆ ಲಘು ಹೃದಯಘಾತ; ನಿಜಕ್ಕೂ ಏನ್ ಆಯ್ತು?

'ನಾನು ನೋಡಿದಂತೆ ನರೇಶ್‌ ಬಹಳ ಬ್ಯುಸಿ ಇರುತ್ತಾರೆ. ಇವತ್ತಿಗೂ ಹೊಸ ನಿರ್ದೇಶಕರ ಚಿತ್ರಗಳಲ್ಲಿ ನಟಿಸಲು ತುಡಿಯುತ್ತಾರೆ. 10 ಜನರ ಎನರ್ಜಿ ನರೇಶ್‌ಗೆ ಇದೆ. ಆ ಎನರ್ಜಿಯನ್ನು ನಾವೆಲ್ಲಾ ತಡೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಿಬ್ಬಂದಿ ನಾನು ಎಲ್ಲರೂ ಸುಸ್ತಾಗಿ ಬಿಡುತ್ತೀವಿ. ಇನ್ನುಳಿದ ಕೆಲಸ ನೀನೇ ಮಾಡ್ಕೋ ಎನ್ನುತ್ತೀವಿ. ಅವ್ರು ಮಾತ್ರ ಸುಸ್ತಾಗಲ್ಲ. ಅಷ್ಟು ಜೋಶ್ ಡೆಡಿಕೇಷನ್‌ನಿಂದ ಕೆಲಸ ಮಾಡುತ್ತಾರೆ' ಎಂದು ಪವಿತ್ರಾ ಹೇಳಿದ್ದಾರೆ. ಆದರೆ ಇದರಲ್ಲಿ ಯಾವುದೇ ತಪ್ಪರ್ಥ ಇಲ್ಲ. ಆದರೆ ಕೆಲವು ಕಿಡಿಗೇಡಿಗಳು ಪವಿತ್ರಾ ಮತ್ತು ನರೇಶ್ ಬೆಡ್‌ರೂಮ್‌ ರಹಸ್ಯ ಬಯಲು ಆಗಿದೆ, 65 ವರ್ಷ ನರೇಶ್‌ ಎನರ್ಜಿ ಹೇಗಿದೆ ನೋಡಿ ಎಂದು ಕೀಳು ಮಟ್ಟದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. 

ಮದುವೆ ಆಗಿರುವ ಬಿಗ್ ಬಾಸ್ ರಜತ್ ಕಿಶನ್‌ಗೆ ಗರ್ಲ್‌ಫ್ರೆಂಡ್ ಇದ್ದಾಳಾ? ಗೆಳೆಯ ವಿನಯ್ ಗೌಡ ಹೇಳಿಕೆ ವೈರಲ್