ನಟ ನವೀನ್ ಶಂಕರ್ 60 ದಿನಗಳಲ್ಲಿ 15 ಕೆ.ಜಿ. ತೂಕ ಇಳಿಸಿಕೊಂಡು, 50 ಕೆ.ಜಿ. ತಲುಪಿದ್ದಾರೆ. ಚಿತ್ರದ ಪಾತ್ರಕ್ಕಾಗಿ ಕಠಿಣ ಆಹಾರಕ್ರಮ ಮತ್ತು ವ್ಯಾಯಾಮ ಪಾಲಿಸಿದರು. ನೀರು ಕುಡಿಯದೇ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾದರು. ವೈದ್ಯರ ಬುದ್ಧಿಮಾತು ಮತ್ತು ಟ್ರೈನರ್‌ನ ಮಾರ್ಗದರ್ಶನದ ಅಗತ್ಯತೆ ತಿಳಿಸಿದರು.

ಕನ್ನಡ ಚಿತ್ರರಂಗದ ಅದ್ಭುತ ನಟ ನವೀನ್‌ ಶಂಕರ್‌ ಸಿಕ್ಕಾಪಟ್ಟೆ ಸಣ್ಣಗಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೇವಲ 60 ದಿನಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 65 ಕೆಜಿ ಇದ್ದ ನವೀನ್‌ ಈಗ 50 ಕೆಜಿ ಆಗಿದ್ದಾರೆ. ಈ ಸಮಯದಲ್ಲಿ ಜನರು, ಆಹಾರ ಮತ್ತು ಸಂಪರ್ಕದಿಂದ ದೂರು ಉಳಿದುಬಿಟ್ಟಿದ್ದರು. ಆದರೆ ಈ ಜರ್ನಿಯಲ್ಲಿ ಎದುರಿಸಿದ ಕಷ್ಟಗಳನ್ನು ನವೀನ್ ಹಂಚಿಕೊಂಡಿದ್ದಾರೆ.

'ನನ್ನ ಪಾತ್ರದ ಸೈಕಲಾಜಿಕಲ್‌ ಕ್ಯಾರೆಕ್ಟರ್‌ ಪ್ರವೇಶ ಮಾಡಲು ಪ್ರಯತ್ನ ಮಾಡಿದ್ದೀನಿ- ಒಮ್ಮೆ ಆತ ಕಾಡಿಗೆ ಹೋಗುತ್ತಾರೆ ಅಲ್ಲಿ ತನ್ನ ಜೀವನದಲ್ಲಿ ಸಂಪೂರ್ಣ ಆಸಕ್ತಿ ಕಳೆದುಕೊಳ್ಳುತ್ತಾನೆ. ಕೊನೆ ಸ್ಟೇಜ್‌ನಲ್ಲಿ ವಾಟರ್ ಔಟ್ ಸಮಯ ಎಂದು ಕರೆಯುತ್ತಾರೆ ಆಗ ಸುಮಾರು 12 ಗಂಟೆಗಳ ಕಾಲ ನೀರು ಸೇವಿಸುವುದಿಲ್ಲ. ಇಲ್ಲಿ ನಾನು ಮಾಡಿ ತಪ್ಪು ಏನೆಂದೆ ಹೆಚ್ಚು ಶ್ರಮ ಹಾಕಿ 24 ಗಂಟೆಗಳ ಕಾಲ ನೀರು ಕುಡಿಯದೆ ಇದ್ದೆ. ಈ ಸಮಯದಲ್ಲಿ ಬಿಡದಿಯಲ್ಲಿ ರೂಮ್ ಮಾಡಿಕೊಂಡಿದ್ದೆ. ಆಗ ಎಲ್ಲರಿಂದ ಸಂಪರ್ಕ ಕಳೆದುಕೊಂಡಿದ್ದ ಫೋನ್ ಆಫ್‌ ಮಾಡಿದ್ದೆ. ಅಂದು ಬೆಳಗ್ಗೆ ಬಾತ್‌ರೂಮ್‌ನಲ್ಲಿ ಸಿಕ್ಕಾಪಟ್ಟೆ ಬೆವರಲು ಶುರು ಮಾಡಿದ್ದೆ ಎಷ್ಟರ ಮಟ್ಟಕ್ಕೆ ನೋವು ಶುರುವಾಯ್ತು ಅಂದರೆ ನನ್ನ ಕಥೆ ಮುಗಿಯಿತ್ತು ಅಂದುಕೊಂಡಿದ್ದೆ. ಒಂದು ಹೆಜ್ಜೆ ಇಡಲು ಸಾಧ್ಯವಾಗುತ್ತಿರಲಿಲ್ಲ ಹೀಗಾಗಿ ಹೋಟೆಲ್ ರಿಸೆಪ್ಶನ್ ಅಥವಾ ಸ್ನೇಹಿತರನ್ನು ಸಂಪರ್ಕ ಮಾಡಲು ಆಗಲಿಲ್ಲ. ನಾನು ಓದಿಕೊಂಡಿರುವ ಪ್ರಕಾರ, ಸ್ವಲ್ಪ ಚಾಕೋಲೇಟ್, ಸ್ವಲ್ಪ ನೀರು, ಸ್ವಲ್ಪ ಉಪ್ಪು ಸೇವಿಸಿದೆ. ಆಸ್ಪತ್ರೆ ತಲುಪುವಷ್ಟರಲ್ಲಿ ಚೇತರಿಸಿಕೊಂಡೆ. ವೈದ್ಯರು ಸರಿಯಾಗಿ ಬೈದು ನನ್ನ ಡಯಟ್‌ಗೆ ಬ್ರೇಕ್ ಹಾಕಿದ್ದರು' ಎಂದು ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ನವೀನ್ ಮಾತನಾಡಿದ್ದಾರೆ. 

ಮದುವೆ ಆಗಿರುವ ಬಿಗ್ ಬಾಸ್ ರಜತ್ ಕಿಶನ್‌ಗೆ ಗರ್ಲ್‌ಫ್ರೆಂಡ್ ಇದ್ದಾಳಾ? ಗೆಳೆಯ ವಿನಯ್ ಗೌಡ ಹೇಳಿಕೆ ವೈರಲ್

'ಕಲಾವಿದರು ಬಾಡಿ ಟ್ರಾನ್‌ಫಾರ್ಮೇಷನ್ ಮಾಡುವಾಗ ಡಯಟೀಶಿಯನ್, ಟ್ರೈನರ್ ಮತ್ತು ಡಾಕ್ಟರ್ ಮೂವರು ಸಂಪರ್ಕದಲ್ಲಿ ಇರುತ್ತಾರೆ. ನನ್ನ ಟ್ರೈನರ್ ಗಣೇಶ್‌ ನನ್ನ ಬಾಡಿಯನ್ನು ಅನಲೈಸ್ ಮಾಡಿ ಡಯಟ್ ನೀಡಿದ್ದರು. ಇಡೀ ಸಮಯ ಡಯಟ್‌ ಚೆಕ್ ಮಾಡುತ್ತಿದ್ದರು ಆದರೆ ಮೂರು ದಿನಗಳ ಕಾಲ ಯಾರ ಸಂಪರ್ಕದಲ್ಲೂ ಇರಲಿಲ್ಲ ಆಗ ಮಾಡಲಿಲ್ಲ. ಆದರೆ ನಾನು ಮಾಡುತ್ತಿದ್ದಿದ್ದು ಸರಿ ಅಲ್ಲ. ಮುಂದಿನ ಸಲ ನಾನು ಬಾಡಿ ಟ್ರಾನ್ಸ್‌ಫಾರ್ಮ್‌ ಮಾಡುವಾಗ ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದೀನಿ' ಎಂದು ನವೀನ್ ಹೇಳಿದ್ದಾರೆ. 

ಹೌದು ನಾನು ಮರಾಠಿ ಆದರೆ ಕನ್ನಡ ತುಂಬಾ ಚೆನ್ನಾಗಿ ಬರುತ್ತೆ; ಯಮುನಾ ಶ್ರೀನಿಧಿಗೆ ತಿರುಗೇಟು ಕೊಟ್ಟ ಗೌತಮಿ