ಬಿಗ್‌ಬಾಸ್ ೧೧ರಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ರಜತ್ ಕಿಶನ್ ಫಿನಾಲೆ ತಲುಪಿದ್ದಾರೆ. ರಜತ್‌ರ ಜನಪ್ರಿಯತೆ ಹೆಚ್ಚುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತೆಯೊಂದಿಗಿನ ಫೋಟೋವನ್ನು ದುರುದ್ದೇಶಪೂರಿತವಾಗಿ ಹಬ್ಬಿಸಿ, ಅವರ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ನಡೆದಿದೆ. ಪತ್ನಿ ಅಕ್ಷಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ರಜತ್‌ರ ಸ್ನೇಹಿತ ವಿನಯ್ ಗೌಡ ಇದನ್ನು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಇದೀಗ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟ ಒಂದೆರಡು ವಾರಕ್ಕೆ ಎಲಿಮಿನೇಟ್ ಆಗಿ ಹೋಗುತ್ತಾರೆ. ಇದೇ ಮೊದಲು ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಹಾಗೆ ಉಳಿದುಕೊಂಡು ಫಿನಾಲೆ ವಾರಕ್ಕೆ ಕಾಲಿಟ್ಟಿರುವು. ರಜತ್ ಕಿಶನ್ ಫುಲ್ ಪ್ಯಾಕ್ ಎಂಟರ್ಟೈಮೆಂಟ್ ಎನ್ನಬಹುದು. ರಜತ್ ಬಂದ ಮೇಲೆ ನೋಡುಗರ ಸಂಖ್ಯೆ ಹೆಚ್ಚಾಗಿದೆ ಅಲ್ಲದೆ ಆಗಾಗ ಕೊಡುವ ಪಂಚ್ ಮತ್ತು ಕಾಮಿಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ರಜತ್ ಹೆಸರು ಪದೇ ಪದೇ ಕೇಳಿ ಬರುತ್ತಿದ್ದರಂತೆ ಕೆಲ ಕೆಡಿಗೇಡಿಗಳು ಗಿಮಿಕ್ ಶುರು ಮಾಡಿಕೊಂಡಿದ್ದಾರೆ. ಅದಕ್ಕೆ ತಲೆ ಕೆಡಿಸಿಕೊಂಡ ಪತ್ನಿ ಅಕ್ಷಿತಾ ಪೊಲೀಸರ ಸಹಾಯ ಪಡೆದಿದ್ದಾರೆ.
ರಜತ್ ಸ್ನೇಹಿತೆ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಹೆಂಡತಿ ಇದ್ದರೂ ಗರ್ಲ್‌ಫ್ರೆಂಡ್ ಇಟ್ಟುಕೊಂಡಿದ್ದಾನೆ ಕ್ಯಾರೆಕ್ಟರ್ ಸರಿ ಇಲ್ಲ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಈಗಾಗಲೆ ಪೊಲೀಸರಿಗೆ ದೂರು ನೀಡಿ ಟ್ರೋಲ್ ಪೇಜ್‌ಗಳಿಂದ ಡಿಲೀಟ್ ಮಾಡಿಸಲಾಗಿದೆ. ಈ ವಿಚಾರ ದೊಡ್ಡದಾಗುತ್ತಿದ್ದಂತೆ ಗೆಳೆಯ ವಿನಯ್ ಗೌಡ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು ನಾನು ಮರಾಠಿ ಆದರೆ ಕನ್ನಡ ತುಂಬಾ ಚೆನ್ನಾಗಿ ಬರುತ್ತೆ; ಯಮುನಾ ಶ್ರೀನಿಧಿಗೆ ತಿರುಗೇಟು ಕೊಟ್ಟ ಗೌತಮಿ
'ರಜತ್‌ಗೆ ತುಂಬಾ ಜನ ಸ್ನೇಹಿತರು ಇದ್ದಾರೆ. ನನಗೂ ತುಂಬಾ ಸ್ನೇಹಿತರಿದ್ದಾರೆ. ನಮ್ಮಿಬ್ಬರಿಗೂ ಕಾಮನ್ ಫ್ರೆಂಡ್ ಜಾಸ್ತ ಇದ್ದಾರೆ. ಅಷ್ಟೂ ಜನರಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಫ್ರೆಂಡ್ಸ್ ಇದ್ದಾರೆ, ಸುಮ್ಮನೆ ಆಗಾಗ ಮಾತನಾಡುವಂತ ಸ್ನೇಹಿತರು ಇದ್ದಾರೆ. ಆದರೆ ಫ್ರೆಂಡ್‌ಶಿಪ್‌ನ ಇಟ್ಕೊಂಡು ಗರ್ಲ್‌ಫ್ರೆಂಡ್ ಆಂಡ್ ಬಾಯ್‌ಫ್ರೆಂಡ್ ಅಂತ ರಿಲೇಷನ್‌ಶಿಪ್ ಬೆಳೆಸುತ್ತಾರೆ ಅಲ್ವಾ ಇದೆಲ್ಲಾ ಯಾಕೆ ಹೇಳಿ? ಸೋಷಿಯಲ್ ಮೀಡಿಯಾ ಹೇಗಾಗಿ ಅಂದ್ರೆ ಒಬ್ಬರ ಕಾಲೆಳೆದು ಅವರನ್ನು ತುಳಿದರೆ ಮಾತ್ರ ಮೇಲೆ ಬರಲು ಆಗುವುದು ಅಂತ. ಎಲ್ಲೋ ಕುಳಿತುಕೊಂಡು ಇಂಟರ್‌ನೆಟ್‌ನಲ್ಲಿ ಸಿಕ್ಕಿದ್ದ ಫೋಟೋಗಳು ಮತ್ತು ಕಾಮೆಂಟ್‌ಗಳನ್ನು ಹಾಕಿಕೊಂಡು ಮಾಡುವುದು ನಿಜಕ್ಕೂ ನಾನ್‌ಸೆನ್ಸ್. ರಿಯಾಲಿಟಿ ಚೆಕ್ ಏನಿದೆ ಅದು ನೋಡಬೇಕು...ರಜತ್‌ಗೆ ಒಂದೊಳ್ಳೆ ಫ್ಯಾಮಿಲಿ ಇದೆ ಇಬ್ಬರು ಮಕ್ಕಳಿದ್ದಾರೆ...ಕಾಮೆಂಟ್ ಮಾಡುತ್ತಿರುವ ರೀತಿ ನಾನಂತು ನೋಡಿಲ್ಲ. ಆದರೆ ಸಿಕ್ಕಾಪಟ್ಟೆ ಸ್ನೇಹಿತರು ಇದ್ದಾರೆ ನೂರಾರು ಜನರು ಅಲ್ಲ ಸಾವಿರಾರೂ ಜನರು ಇದ್ದಾರೆ. ಅದನ್ನು ಇಟ್ಕೊಂಡು ಗರ್ಲ್‌ಫ್ರೆಂಡ್ ಇದ್ದಾಳೆ ಅಂತ ಕಾಮೆಂಟ್ ಮಾಡುವುದು ತಪ್ಪು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ವಿನಯ್ ಮಾತನಾಡಿದ್ದಾರೆ.
ಈ ಕಾರಣಕ್ಕೆ ಪದೇ ಪದೇ ಕೊರಗಜ್ಜನ ಮೊರೆ ಹೋಗುತ್ತಿದ್ರು ಚೈತ್ರಾ ಕುಂದಾಪುರ; ಸತ್ಯ ಲೀಕ್ ಆಗೇಬಿಡ್ತು
'ಸೋಷಿಯಲ್ ಮೀಡಿಯಾದಲ್ಲಿ ಪೇಯಿಟ್ ಪ್ರಮೋಷನ್‌ಗಳು ಸಿಕ್ಕಾಪಟ್ಟೆ ನಡೆಯುತ್ತದೆ. ನನ್ನ ಸೀಸನ್‌ನಲ್ಲೂ ಈ ರೀತಿ ಆಗುತ್ತಿತ್ತು ಎಂದು ಹೊರಗಡೆ ಬಂದ ಮೇಲೆ ತಿಳಿಯಿತ್ತು. ಪೇಯಿಂಟ್ ಪ್ರಮೋಷನ್‌ನಿಂದ ಯಾರನ್ನ ಬೇಕಿದ್ದರೂ ಉದ್ದಾರ ಮಾಡಬಹುದು ಯಾರನ್ನ ಬೇಕಿದ್ದರೂ ಹಾಳು ಮಾಡಬಹುದು. ಇದು ಮಾಡುವುದು ಸರಿ ಅಲ್ಲ. ರಜತ್‌ಗೆ ಮದುವೆ ಆಗಿದೆ ಒಂದೊಳ್ಳೆ ಫ್ಯಾಮಿಲಿ ಅವರು ಒಬ್ಬೊರನ್ನೊಬ್ಬರು ಎಷ್ಟು ಪ್ರೀತಿ ಮಾಡುತ್ತಾರೆ ಅಂತ ನನಗೆ ಗೊತ್ತಿದೆ. ಸ್ನೇಹಿತರು ತುಂಬಾ ಜನ ಇದ್ದಾರೆ ಆದರೆ ಗರ್ಲ್‌ಫ್ರೆಂಡ್ ಅಂತ ಯಾರೂ ಇಲ್ಲ' ಎಂದು ವಿನಯ್ ಹೇಳಿದ್ದಾರೆ.
ಬಿಗ್ ಬಾಸ್ ಫಿನಾಲೆ ನನ್ನ ಕೊನೆಯ ನಿರೂಪಣೆ, 11 ಸೀಸನ್‌ಗಳು ಎಂಜಾಯ್ ಮಾಡಿದ್ದೀನಿ: ಸುದೀಪ್ ಪೋಸ್ಟ್ ವೈರಲ್
