ರೇಣುಕಾಸ್ವಾಮಿ ಕೇಸ್​​ನಲ್ಲಿ ಸಿಲುಕಿ ಜೈಲಿನಿಂದ ಹೊರಬಂದಿರುವ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ ಅವರು ನಿಗೂಢವಾಗಿ ಪೋಸ್ಟ್​ ಮಾಡಿದ್ದಾರೆ. ಈಗ ನಡೀತಿರೋದೆಲ್ಲಾ ನಾಟಕನಾ? 

ದರ್ಶನ್​ ಮತ್ತು ಪವಿತ್ರಾ ಗೌಡ ಹೊರಗಡೆ ಕೂಲ್ ಇರುವಂತೆ ಕಾಣುತ್ತಿದ್ದರೂ ಒಳಗೇನೋ ನಡೆಯುವಂತಿದೆ ಎನ್ನುವ ರೀತಿಯಲ್ಲಿಯೇ ಎಲ್ಲಾ ನಡೆಯುತ್ತಿದೆ. ರೇಣುಕಾಸ್ವಾಮಿ ಕೇಸ್​ನಲ್ಲಿ ಇಬ್ಬರಿಗೂ ಜಾಮೀನು ಸಿಕ್ಕು ಹೊರಕ್ಕೆ ಬಂದ ಮೇಲೆ ಸಂಪರ್ಕವೇ ಇಲ್ಲದಂತೆ ಜನರಿಗೆ ತೋರಿಸುತ್ತಿದ್ದರೂ, ಇದು ಅಷ್ಟು ಸುಲಭಕ್ಕೆ ಬಿಟ್ಟುಹೋಗುವ ಸಂಬಂಧವೇ ಎಂದು ಹಲವರು ಪ್ರಶ್ನೆ ಮಾಡಿದ್ದೂ ಇದೆ. ದರ್ಶನ್​ ಮತ್ತು ವಿಜಯಲಕ್ಷ್ಮಿ ಅವರು ಎಷ್ಟೇ ಒಟ್ಟಾಗಿ ಹೋಗಿ ಬರುತ್ತಿದ್ದರೂ, ಚೆನ್ನಾಗಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ, ಯಾರ ಮನಸ್ಸಿನಲ್ಲಿ ಏನಿದೆ ಎನ್ನುವುದು ಆ ದೇವರೇ ಬಲ್ಲ. ಅದರಲ್ಲಿಯೂ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು, ಹೆಣ್ಣಿನ ಮನಸ್ಸನ್ನಲ್ಲ ಎನ್ನುವ ಗಾದೆ ಮಾತೇ ಇದೆಯಲ್ಲವೆ? ಅದೇ ರೀತಿ, ಇದೀಗ ಪವಿತ್ರಾ ಗೌಡ ಅವರ ಸೈಲೆನ್ಸ್​ ಹಿಂದೆ ಏನಿದೆ ಎಂದು ಹಲವರು ಕಾತರದಿಂದ ಕಾಯುತ್ತಿರುವ ನಡುವೆಯೇ ಇದೀಗ ನಿಗೂಢ ಪೋಸ್ಟ್​ ಒಂದನ್ನು ಮಾಡುವ ಮೂಲಕ ಪವಿತ್ರಾ ಎಲ್ಲರ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಪವಿತ್ರಾ ಗೌಡ ಕೋರ್ಟ್​ನಿಂದ ಹೊರಗೆ ಬರುವಾಗ ಲಿಫ್ಟ್‌ನಲ್ಲಿ ದರ್ಶನ್ ಫೋನ್ ಪಡೆದುಕೊಂಡಿದ್ದರು ಎನ್ನಲಾಗಿತ್ತು. ಮಾತ್ರವಲ್ಲದೇ ಅವರ ಕೈ ಕೂಡ ಹಿಡಿದುಕೊಂಡಿದ್ದರು ಎಂದು ಹೇಳಲಾಗಿತ್ತು. ಇದರ ನಡುವೆಯೇ ಈ ಪೋಸ್ಟ್​ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಪವಿತ್ರಾ ಅವರು ಮೊದಲಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​. ಅವರು ಬ್ಯೂಟಿಕ್‌ಗೆ ಸಂಬಂಧಿಸಿದಮತೆ ಪೋಸ್ಟ್‌ ಮಾಡುವ ಜೊತೆಗೆ, ತಮ್ಮ ವಿಭಿನ್ನ ಭಂಗಿಯ ಫೋಟೋಗಳನ್ನೂ ಶೇರ್​ ಮಾಡುತ್ತಲೇ ಇರುತ್ತಾರೆ. ಈಗಲೂ ಹೀಗೆಯೇ ಒಂದು ಶೇರ್​ ಮಾಡಿದ್ದು, ಅದೀಗ ವೈರಲ್​ ಆಗಿದೆ.

ಪವಿತ್ರ ಅವರು ತಮ್ಮ ಇನ್​ಸ್ಟಾ ಸ್ಟೋರೀಸ್​ನಲ್ಲಿ ಸಮಯ ಹಾಗೂ ತಾಳ್ಮೆ ಕೀಲಿಕೈ. ಎಲ್ಲಾ ಪ್ರಶ್ನೆಗಳಿಗೆ ನಿಶ್ಯಬ್ದವೇ ಒಳ್ಳೆ ಉತ್ತರ. ಎಲ್ಲಾ ಪರಿಸ್ಥಿತಿಯಲ್ಲಿ ನಗು ಉತ್ತಮ ಪ್ರತಿಕ್ರಿಯೆ. ಆದರೆ ಇದಕ್ಕಿಂತಲೂ ಹೆಚ್ಚು ಗಮನ ಸೆಳೆದಿರುವುದು ಎಲ್ಲವನ್ನೂ ಕಳೆದುಕೊಂಡ ಹಾಗೆ ಸ್ವಲ್ಪ ದಿನ ನಟಿಸಿ ನೋಡು ನಿನ್ನವರು ಯಾರು ಎಂದು ತಿಳಿಯುತ್ತದೆ. ತಾಳ್ಮೆ is important ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಜೈಲಿನಿಂದ ಹೊರಕ್ಕೆ ಬಂದ ಮೇಲೆ ಮಾಡ್ತಿರೋದು ನಟನೆಯಾ? ಸ್ವಲ್ಪ ದಿನ ಸುಮ್ಮನೇ ಇದ್ದು ಕೊನೆಗೆ ಮಾಡುವುದು ಏನು? ಎಷ್ಟು ದಿನ ತಾಳ್ಮೆಯಿಂದ ಕಾಯತ್ತಾರೆ, ಆ ಬಳಿಕ ಏನಾಗುತ್ತದೆ ಎನ್ನುವ ಪ್ರಶ್ನೆಗಳೆಲ್ಲಾ ಈ ಪೋಸ್ಟ್​ನಿಂದ ಕೇಳಿಬರುತ್ತಿದೆ.

ಇತ್ತೀಚೆಗಷ್ಟೇ ಪವಿತ್ರಾ ಗೌಡ, ದರ್ಶನ್ ಸೇರಿ 16 ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಮುಖಾಮುಖಿಯಾಗಿದ್ದರು. ಇಬ್ಬರು ನ್ಯಾಯಾಲಯದಲ್ಲಿ ಭೇಟಿಯಾಗಿದ್ದರು. ಕೋರ್ಟ್​ನಲ್ಲಿ ದರ್ಶನ್ ಭೇಟಿಯಾಗಿ ಒಂದು ದಿನದ ಬಳಿಕ ಪವಿತ್ರಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಾಲ, ತಾಳ್ಮೆ, ಮೌನದ ಬಗ್ಗೆ ಪೋಸ್ಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.