ರೇಣುಕಾಸ್ವಾಮಿ ಪ್ರಕರಣದ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ದರ್ಶನ್ ಪರ ವಕೀಲರು ಸಾಕ್ಷ್ಯಾಧಾರ ಕೊರತೆ ವಾದಿಸಿದರು. ಪವಿತ್ರಾ ಗೌಡ ದರ್ಶನ್ ಪತ್ನಿಯಲ್ಲ, ಗೆಳತಿ ಎಂದು ಸರ್ಕಾರ ತಿಳಿಸಿತು. ವಿಚಾರಣೆ ಮೇ 14ಕ್ಕೆ ಮುಂದೂಡಲ್ಪಟ್ಟಿದೆ. ದರ್ಶನ್ ಆಪರೇಷನ್ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್‌ನಲ್ಲಿ ಒಂದು ಗಂಟೆ ಸುದೀರ್ಘ ವಿಚಾರಣೆ ನಡೆಯಿತು. ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ವಿಶೇಷ ಮೇಲ್ಮನವಿ ಇದಾಗಿದ್ದು, ಇದರ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ. ಇಂದು ನಡೆದ ವಿಚಾರಣೆ ಸಂದರ್ಭದಲ್ಲಿ, ದರ್ಶನ್ ಪರ ವಕೀಲ ಅಭಿಷೇಕ್ ಸಿಂಗ್ವಿ ಹಾಗೂ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಇತರರು ವಾದ ಮಂಡಿಸಿದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸರ್ಕಾರದ ಪರ ವಕೀಲರಿಗೆ, ವಿಚಾರಣೆ ವೇಳೆ ಪವಿತ್ರಾ ಗೌಡ ದರ್ಶನ್ ಅವರ ಪತ್ನಿಯೇ ಎಂದು ಪ್ರಶ್ನಿಸಿದರು. ಅದಕ್ಕೆ ವಕೀಲರು, ಅಲ್ಲಾ ಅವರು ಮಿಸ್ಟ್ರೆಸ್ ಎಂದು ಹೇಳಿದ್ದಾರೆ.
ಆಗ ನ್ಯಾಯಮೂರ್ತಿಗಳು ಹಾಗಿದ್ದರೆ ದರ್ಶನ್ ಅವರಿಗೆ ಮದುವೆಯಾಗಿಯೇ ಎನ್ನುವ ಪ್ರಶ್ನೆಗೆ ವಕೀಲರು ಹೌದು. ಅವರು ಕನ್ನಡದ ಖ್ಯಾತ ನಟರು ಕೂಡ ಎಂದು ವಿವರಣೆ ನೀಡಿದ್ದಾರೆ. ಇದೇ ವೇಳೆ ವಾದ ಮಂಡಿಸಿದ ದರ್ಶನ್ ಪರ ವಕೀಲ ಸಿಂಗ್ವಿ ಅವರು ದರ್ಶನ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಇಲ್ಲ. ಯಾವ ಜಾಗದಲ್ಲಿ ಈ ಘಟನೆ ನಡೆದಿದೆ ಎಂಬುದಕ್ಕೆ ಸರಿಯಾದ ಸಾಕ್ಷ್ಯಾಧಾರಗಳೂ ಇಲ್ಲ. ಘಟನೆ ನಡೆದ ಸಂದರ್ಭದಲ್ಲಿನ ಮೂರು ಸೆಕೆಂಡ್ ವಿಡಿಯೋ ಇದೆ ಎನ್ನಲಾಗುತ್ತಿದೆ. ಆದರೆ ಅದರಲ್ಲಿ ಎಲ್ಲಿಯೂ ದರ್ಶನ್ ಕಾಣಿಸಿಕೊಂಡಿಲ್ಲ ಎಂದು ವಾದಿಸಿದರು. ಹಾಗೂ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅವರು ಕಳುಹಿಸುತ್ತಿದ್ದ ಮೆಸೇಜ್ಗಳ ಬಗ್ಗೆಯೂ ಈ ಸಂದರ್ಭದಲ್ಲಿ ಅವರು ಪ್ರಸ್ತಾಪಿಸಿದರು.
ಇದೇನಿದು ರಿಯಾಲಿಟಿ ಷೋನೋ ಅಥ್ವಾ ಪೋ*..? ಅಣ್ಣಯ್ಯ ಸೀರಿಯಲ್ ಪಾರುಗೆ ಇದೆಂಥ ಅವಸ್ಥೆ?
ವಾದ, ಪ್ರತಿವಾದ ಆಲಿಸಿರುವ ಸುಪ್ರಿಂಕೋರ್ಟ್ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿದೆ. ಆದ್ದರಿಂದ ಅಲ್ಲಿಯವರೆಎ ದರ್ಶನ್ ಹಾಗೂ ಇತರ ಆರೋಪಿಗಳಿಗೆ ರಿಲೀಫ್ ಸಿಕ್ಕಂತಾಗಿದೆ. ಇದರ ವಿಚಾರಣೆಯನ್ನು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮಹದೇವನ್ ಅವರನ್ನೊಳಗೊಂಡ ಪೀಠ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಾಗಲೇ ನಟ ದರ್ಶನ್ ಮತ್ತು ಇತರರಿಗೆ ಸಿಕ್ಕಿರುವ ಜಾಮೀನು ರದ್ದುಗೊಳಿಸಲು ಮತ್ತಷ್ಟು ಪೂರಕ ದಾಖಲೆಗಳನ್ನು ಬೆಂಗಳೂರು ಪೊಲೀಸರು ಕಳೆದ ಶುಕ್ರವಾರ ಸಲ್ಲಿಸಿದ್ದಾರೆ.
ತೀವ್ರ ಬೆನ್ನುನೋವು ಸಮಸ್ಯೆಯೊಡ್ಡಿ ಆಪರೇಷನ್ ಅಗತ್ಯ ಇದೆ. ಹಾಗಾಗಿ ನಟ ದರ್ಶನ್ ಗೆ ಜಾಮೀನು ಅಗತ್ಯ ಇದೆ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲಾಗಿತ್ತು. ಆದರೆ ಜಾಮೀನು ಸಿಕ್ಕ ಬಳಿಕ ನಟ ದರ್ಶನ್ ಆಪರೇಷನ್ ಗೆ ಒಳಗಾಗಲೇ ಇಲ್ಲ. ಈ ವಿಚಾರವನ್ನು ಬೆಂಗಳೂರು ಪೊಲೀಸರು ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ನ್ಯಾಯಾಲಯಕ್ಕೆ ಹಾಜರಾಗದೇ ಸಾಕ್ಷ್ಯದಾರರೊಬ್ಬರ ಜೊತೆ ಕೂತು ದರ್ಶನ್ ಸಿನಿಮಾ ನೋಡಿದ್ದ ವಿಡಿಯೋ ವೈರಲ್ ಅಗಿತ್ತು. ಆರೋಪಿಯ ನಡವಳಿಕೆಯಲ್ಲಿ ವ್ಯತ್ಯಾಸಗಳು ಇವೆ. ಹಾಗಾಗಿ ಆರೋಪಿ ಜಾಮೀನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ್ದಾರೆ.
ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಹೆಸ್ರಲ್ಲಿ ಡಬಲ್ ಮೀನಿಂಗ್! ಅಸಮಾಧಾನ ಹೊರಹಾಕಿದ ರವಿಚಂದ್ರನ್ ಹೇಳಿದ್ದೇನು?
