ಡಾ. ರಾಜ್‌ಕುಮಾರ್ ನಾಟಕ ಕಂಪನಿಯಲ್ಲಿದ್ದಾಗ ಪಾರ್ವತಮ್ಮನವರನ್ನು ವಿವಾಹವಾದರು. ಒಂದುವರೆ ವರ್ಷದಲ್ಲಿ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. 1800 ಸಂಭಾವನೆಯಲ್ಲಿ ₹900 ಮದುವೆ ಸಾಲ ತೀರಿಸಿದ್ದರು. ಈ ಮಾಹಿತಿಯನ್ನು ಪಾರ್ವತಮ್ಮನವರೇ ಹಂಚಿಕೊಂಡಿದ್ದರು.

ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್ ತಮ್ಮ ಸಿನಿಮಾ ಜರ್ನಿ ಶುರು ಮಾಡುವ ಮುನ್ನವೇ ಮದುವೆಯಾಗಿದ್ದರು. ಡಾ.ಪಾರ್ವತಮ್ಮ ರಾಜ್‌ಕುಮಾರ್‌ರವರನ್ನು ಮದುವೆ ಮಾಡಿಕೊಂಡ ಅಣ್ಣಾವ್ರು ನಾಟಕ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ಬಾಳಿಗೆ ಮಹಾಲಕ್ಷ್ಮಿಯಂತೆ ಕಾಲಿಟ್ಟ ಪಾರ್ವತಮ್ಮನವರಿಂದ ಒಂದುವರೆ ವರ್ಷದೊಳಗೆ ಅಣ್ಣಾವ್ರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬರುತ್ತದೆ. ಸಿನಿಮಾದಿಂದ ಬಂದ ಸಂಭಾವನೆಯಿಂದ ತಮ್ಮ ಸಾಲ ತೀರಿಸಿದ ಘಟನೆ ಇಲ್ಲಿದೆ...... 

'ಪಾರ್ವತಿ ಕಲ್ಯಾಣ ಆದಾಗ ಮುತ್ತುರಾಜ್‌ರವರ ಜೀವನದಲ್ಲಿ ಮಹತ್ವದ ಬೆಳವಣಿಗೆ ಆಗುತ್ತದೆ. ಅವರು ಚಾಮರಾಜನಗರದಿಂದ ಗಾಜನೂರಿಗೆ ಹೋಗುವ ಸಮಯದಲ್ಲಿ ಅವರ ತಂದೆ ಮಿತ್ರರಾದ ಎಚ್‌ಎಲ್‌ಎನ್‌ ಸಿಂಹ ಅವರು ಮುತ್ತುರಾಜ್‌ ಅವರನ್ನು ನೋಡುತ್ತಾರೆ. ಸದೃಢ ದೇಹ, ಉದ್ದ ಕೂದಲು ಸ್ಮಾರ್ ಆಗಿರುತ್ತಾರೆ. ಅವರನ್ನು ಮಾತನಾಡಿಸುತ್ತಾರೆ. ಹೇಗಪ್ಪ.... ನಿಮ್ಮ ತಂದೆ ಹೋಗಿಬಿಟ್ಟರು ಅಂತ ಕೇಳ್ಪಟ್ಟೆ ಅಂತ ಸಾಂತ್ವಾನ ಹೇಳುತ್ತಾರೆ ಅದಾದ ಮೇಲೆ ಜೀವನಕ್ಕೆ ಮುಂದೆ ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾಗ ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಎಂದು ಹೇಳುತ್ತಾರಂತೆ' ಈ ಘಟನೆಯನ್ನು ಹಿರಿಯ ಪತ್ರಕರ್ತ ಹಾಗೂ ಲೇಖಕ ಮಂಜುನಾಥ್‌ ಚೌಹಾಣ್‌ರವರು ಕನ್ನಡ ಖಾಸಗಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಕೂದಲು ಬಣ್ಣ ಬದಲಾಯಿಸಿದ ಹಿರಿಯ ನಟ ರಾಮ್‌ಕುಮಾರ್ ಪುತ್ರಿ ಧನ್ಯಾ; ಫೋಟೋ ವೈರಲ್!

'ಆಗ ಎಚ್‌ಎಲ್‌ಎನ್‌ ಸಿಂಹ ಅವರು ಬೇಡರ ಕಣ್ಣಪ್ಪ ಸಿನಿಮಾದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಈ ಸಿನಿಮಾ ಬಗ್ಗೆ ಮಾತುಕತೆ ನಡೆಯುತ್ತಿದೆ ಒಂದು ವೇಳೆ ಒಪ್ಪಿದರೆ ಚೆನ್ನೈಗೆ ಬಂದು ಆಡಿಷನ್ ಕೊಡಬೇಕಾಗುತ್ತದೆ ಎನ್ನುತ್ತಾರೆ. ನಿರೀಕ್ಷೆ ಮಾಡಿದಂತೆ ಪತ್ರ ಕಳುಹಿಸುತ್ತಾರೆ, ಆಡಿಷನ್‌ಗೆ ಬರುವಂತೆ ಹೇಳುತ್ತಾರೆ. ಅಣ್ಣಾವ್ರು ಹೋಗಿ ಆಡಿಷನ್ ಕೊಟ್ಟು ಬಂದು ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕೆಲಸ ಮುಂದುವರೆಸುತ್ತಾರೆ...ಮತ್ತೆ ಕರೆ ಬರುತ್ತೋ ಇಲ್ವೋ ಎಂದು ಗೊತ್ತಿರಲಿಲ್ಲ ಆಗ ಮತ್ತೊಂದು ಪತ್ರ ಬರುತ್ತದೆ. ಅದನ್ನು ನೋಡಿ ಸಾಲಗಾರರು ಕಳುಹಿಸಿರುವ ಪತ್ರ ಅಂದುಕೊಳ್ಳುತ್ತಾರೆ' ಎಂದು ಮಂಜುನಾಥ್‌ ಹೇಳಿದ್ದಾರೆ.

ದೇವರಿದ್ದಾನೆ ಅವನೇ ನೋಡಿಕೊಳ್ಳುತ್ತಾರೆ; ಪವಿತ್ರ ಗೌಡ ಜಾಮೀನು ಸಿಕ್ಕ ಬೆನ್ನಲ್ಲೇ ಮಗಳ ಪೋಸ್ಟ್‌

'ಪತ್ರವನ್ನು ಪಾರ್ವತಮ್ಮನವರು ಮುತ್ತುರಾಜ್‌ಗೆ ತೋರಿಸುತ್ತಾರೆ. ಈ ಮಾತನ್ನು ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಅಮ್ಮ ನನಗೆ ಹೇಳಿದ ಮಾತು. ನೋಡು ಪಾರ್ವತಿ ಯಾವುದೋ ಸಾಲದ ವಸೂಲಿ ಲೆಟರ್ ಇರಬೇಕು. ತೆಗೆದುಕೊಂಡು ಓದು ನನಗೆ ಓದುವುದಕ್ಕೆ ಇಷ್ಟವಿಲ್ಲ ಎಂದು ಅಣ್ಣಾವ್ರು ಹೇಳುತ್ತಾರೆ. ಮದುವೆಗೆಂದು ಸಾಲ ಮಾಡಿದ್ದೆ ಅದನ್ನು ವಸೂಲಿ ಮಾಡಲು ಲೆಟರ್ ಇರಬೇಕು ಎನ್ನುತ್ತಾರೆ. ಅಮ್ಮ ಓದಿದಾಗ ಇದು ಸ್ಕ್ರೀನ್ ಟೆಸ್ಟ್‌ನಲ್ಲಿ ಪಾಸಾಗಿರುವ ಸುದ್ದಿ ಎಂದು ಹೇಳುತ್ತಾರೆ' ಎಂದಿದ್ದಾರೆ ಮಂಜುನಾಥ್.

ಗಂಡ ಹೆಸರು ಯಶ್ ಬದಲು ನವೀನ್‌ ಎಂದು ಕರೆದಿದ್ದಕ್ಕೆ ಗರಂ ಆದ ರಾಧಿಕಾ ಪಂಡಿತ್;ವಿಡಿಯೋ ವೈರಲ್

ಸ್ಕ್ರೀನ್ ಟೆಸ್ಟ್‌ ನಡೆದ ನಂತರ ಅಣ್ಣಾವ್ರು ಬೇಡರ ಕಣ್ಣಪ್ಪ ಸಿನಿಮಾದಲ್ಲಿ ನಟಿಸುತ್ತಾರೆ. ಈ ಚಿತ್ರಕ್ಕೆ 1800 ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ ಅದರಲ್ಲಿ ಮದುವೆಗೆ ಎಂದು ಮಾಡಿದ್ದ ಸಾಲದಲ್ಲಿ 900 ರೂಪಾಯಿಗಳನ್ನು ತೀರಿಸುತ್ತಾರೆ. ಈ ಘಟನೆಯನ್ನು ಡಾ. ಪಾರ್ವತಮ್ಮ ರಾಜ್‌ಕುಮಾರ್ ಮಂಜುನಾಥ್‌ ಔಹಾಣ್‌ ಬಳಿ ಹಂಚಿಕೊಂಡಿದ್ದರಂತೆ.