ಈ ಇಬ್ಬರಿಗೂ ದರ್ಶನ್ ರಿಂದ ಅಂತರ ಕಾಯ್ದುಕೊಳ್ಳಲು ಲಾಯರ್ ಹೇಳಿದ್ದಾರೆ.. ಮುಖ್ಯವಾಗಿ ನಟಿ ಹಾಗೂ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರು ಇನ್ಮುಂದೆ ದರ್ಶನ್‌ ಅವರಿಂದ ದೂರ ಇರಬೇಕಾಗಿದೆ.. ಸೀಕ್ರೆಟ್ ರಿವೀಲ್ ಆಗಿದೆ..

ರೇಣುಕಾಸ್ವಾಮಿ ಕೊಲೆ (Renukaswamy Murder Case) ಆರೋಪದಲ್ಲಿ ನಟ ದರ್ಶನ್ (Darshan Thoogudeepa) ಪರಿಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂಬುದು ಎಲ್ಲರಿಗೂ ಗೊತ್ತು. ಇದೀಗ ಸದ್ಯ ಹೊಸ ಬೆಳವಣಿಗೆ ನಡೆದಿದೆ. ನಟ ದರ್ಶನ್‌ಗೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳನ್ನು ಇನ್ಮುಂದೆ ಪತ್ನಿ ವಿಜಯಲಕ್ಷ್ಮಿ ಹಾಗೂ ತಮ್ಮ ದಿನಕರ್ ತೂಗುದೀಪ ನೋಡಿಕೊಳ್ಳಲಿದ್ದಾರೆ. ಕಾರಣ, ಅದು ಲಾಯರ್ ಆದೇಶ ಹಾಗೂ ಉಪದೇಶ..

ಹೌದು, ಸದ್ಯ ನಟ ದರ್ಶನ್ ಕೇಸ್ ತನಿಖೆ ಪ್ರಗತಿಯಲ್ಲಿದೆ. ನಟ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಹಾಗು ಮ್ಯಾನೇಜರ್ ನಾಗರಾಜು ಅವರಿಗೆ ವಿಜಯಲಕ್ಷ್ಮೀ ಸದ್ಯ ಗೇಟ್ ಪಾಸ್ ಕೊಟ್ಟಿದ್ದಾರೆ. ಕೊಲೆ ಆರೋಪದಲ್ಲಿ ನಟ ದರ್ಶನ್ ಜೊತೆ ಜೈಲು ಸೇರಿದ್ದ ಡ್ರೈವರ್ ಲಕ್ಷ್ಮಣ್ ಹಾಗು ಮ್ಯಾನೇಜರ್ ನಾಗರಾಜ್, ಈ ಇಬ್ಬರನ್ನೂ ಸದ್ಯಕ್ಕೆ ದರ್ಶನ್ ಅವರಿಂದ ದೂರ ಇರಿಸಲಾಗಿದೆ. 

ನಟ ದರ್ಶನ್ ಸಾಮ್ರಾಜ್ಯ ಈಗ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ಕೈಯಲ್ಲಿ.. ಮುಂದೇನು ಕಥೆ?

ಈ ಇಬ್ಬರಿಗೂ ದರ್ಶನ್ ರಿಂದ ಅಂತರ ಕಾಯ್ದುಕೊಳ್ಳಲು ಲಾಯರ್ ಹೇಳಿದ್ದಾರೆ. ಈ ಕಾರಣದಿಂದ ನಟ ದರ್ಶನ್ ಸೇರಿದ ಎಲ್ಲಾ ಜವಾಬ್ಧಾರಿಗಳನ್ನು ಈಗ ವಿಜಯಲಕ್ಷ್ಮಿ ಹಾಗೂ ತಮ್ಮ ದಿನಕರ್ ನೋಡಿ ಕೊಳ್ಳುತ್ತಿದ್ದಾರೆ. ಸಿನಿಮಾ ಕೆಲಸಗಳು ಶುರುವಾದ ಮೇಲೆ ಮತ್ತೆ ಅವರೆಲ್ಲರೂ ದರ್ಶನ್‌ ಜೊತೆಗೆ ಬರುತ್ತಾರೆ ಎನ್ನಲಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಟಿ ಹಾಗೂ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರು ಇನ್ಮುಂದೆ ದರ್ಶನ್‌ ಅವರಿಂದ ದೂರ ಇರಬೇಕಾಗಿದೆ.

ವಿಜಯಲಕ್ಷ್ಮಿ ತಮ್ಮ ಪತಿ ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ರೇಣುಕಾ ಸ್ವಾಮಿ ಕೊಲೆಗೂ ಮುಂಚೆ ದರ್ಶನ್ ಸುತ್ತ ಇದ್ದ ಹಲವರಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ ವಿಜಯಲಕ್ಷ್ಮೀ. ಆರ್ ಆರ್ ನಗರದಲ್ಲಿರೋ ರೇಣುಕಾ ಕೊಲೆ ಆರೋಪಿ ವಿನಯ್ ಗೆ ಗೇಟ್ ಪಾಸ್ ಕೊಟ್ಟಿದ್ದಾರೆ ವಿಜಯಲಕ್ಷ್ಮಿ. ಕೊಲೆ ಅರೋಪಿ ದರ್ಶನ್ ಸುತ್ತ ಅಷ್ಟದಿಗ್ಬಂದನವನ್ನೆ ಹಾಕಿರೋ ವಿಜಯಲಕ್ಷ್ಮಿ ಮತ್ತು ದಿನಕರ್, ಸದ್ಯ ಎಲ್ಲವನ್ನೂ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. 

ರಶ್ಮಿಕಾ ಹೇಳಿಕೆಗೆ ಕರವೇ ನಾರಾಯಣ ಗೌಡ ತಿರುಗೇಟು.. ಕಿರಿಕ್ ಬೆಡಗಿಗೆ ಬ್ಯಾಡ್‌ ಟೈಂ ಅನ್ನೋದೂ ಸುಳ್ಳು..!

ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಂಬರ್ ಒನ್ ಆರೋಪಿ ಪವಿತ್ರಾ ಗೌಡ (Pavithra Gowda) ಆಗಿದ್ದಾರೆ. ನಂಬರ್ 2 ಆರೋಪಿ ದರ್ಶನ್. ಕಾರಣ, ಈ ಇಡೀ ಕೇಸ್ ನಡೆದಿದ್ದೇ ಪವಿತ್ರಾ ಗೌಡ ಕಾರಣಕ್ಕೆ.. ಕಾನೂನಿನ ಪ್ರಕಾರ ಅಪರಾಧಿಗಳು ಬೇರೆ ಯಾರೋ ಆಗಿರಬಹುದು ಅಥವಾ ಆಗಬಹುದು. ಆದರೆ, ಈ ಕೇಸ್‌ಗೆ ಸಂಬಂಧಪಟ್ಟು ಇಡೀ ಪ್ರಕರಣದ ಕೇಂದ್ರ ಬಿಂದು ಈ ಪವಿತ್ರಾ ಗೌಡ. ಹೀಗಾಗಿ, ಸಹಜವಾಗಿಯೇ ಸದ್ಯಕ್ಕಂತೂ ಪವಿತ್ರಾ ಗೌಡ ದರ್ಶನ್‌ ಟಚ್‌ನಲ್ಲಿ ಇರೋದು ಅಪಾಯ ಎಂಬ ಅರಿವು ದರ್ಶನ್‌ ಫ್ಯಾಮಿಲಿಗೆ ಇದೆ. 

ಇನ್ನು, ಸಿನಿಮಾ ಕೆಲಸ ಶುರುವಾಗೋವರೆಗೂ ದರ್ಶನ್ ಗೆ ಮ್ಯಾನೇಜರ್ ಇರಲ್ಲ. ದರ್ಶನ್ ನ ಭೇಟಿ ಮಾಡಬೇಕು ಅಂದ್ರೆ ವಿಜಯಲಕ್ಷ್ಮಿ ಅಥವ ತಮ್ಮ ದಿನಕರ್ ತೂಗುದೀಪ್ ಮೂಲಕ ಸಂಪರ್ಕಿಸಬೇಕು. ಇನ್ಮುಂದೆ ಮೊದಲಿನಂತೆ ಏನೂ ನಡೆಯಲ್ಲ ಅಂತಿದಾರೆ ಅವರನ್ನು ಹತ್ತಿರದಿಂದ ಬಲ್ಲ ಆಪ್ತರು. ರೇಣುಕಾ ಸ್ವಾಮಿ ಕೊಲೆಗೂ ಮೊದಲು ತಮ್ಮ ಗಂಡನ ಸುತ್ತ ಇದ್ದ ಕೆಲವರನ್ನ ಈಗ ದೂರ ಇಟ್ಟಿದ್ದಾರೆ ವಿಜಯಲಕ್ಷ್ಮಿ. 

ಅಪ್ಪು-ಅಣ್ಣಾವ್ರ ಬಗ್ಗೆ ಲಕ್ಷ್ಮೀ ಹೀಗ್ ಹೇಳೋದಾ? ಮಹಾನ್ ನಟಿ ಹೇಳದ್ಮೇಲೆ ನಿಜ ಆಗಿರ್ಬಹುದು ಅಲ್ವಾ!

ಸದ್ಯ ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಸ್ವಲ್ಪ ರಿಲ್ಯಾಕ್ಸ್ ನೀಡಿದೆ. ಈ ಮೊದಲು ಬೆಂಗಳೂರು ಬಿಟ್ಟು ಬೇರೆ ಕಡೆ ಹೋಗಬಾರದು ಎಂದು ಕಂಡೀಷನ್ ಹಾಕಲಾಗಿತ್ತು. ಆದರೆ, ಈಗ ಬೆಂಗಳೂರು ಬಿಟ್ಟು ಹೋಗಬಹುದು ದರ್ಶನ್. ವಿದೇಶಕ್ಕೆ ಹೋಗೋದಾದ್ರೆ ಮಾತ್ರ ಅವರಿಗೆ ಸ್ಪೆಷಲ್ ಪರ್ಮಿಷನ್ ಬೇಕು. ಆದರೆ ನಟ ದಶ್ನ್ ಸದ್ಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದು ಸರಿ ಹೋದರೆ, ಮುಂದೆ ಅರ್ಧಕ್ಕೆ ನಿಂತಿರುವ ಡೆವಿಲ್ ಶೂಟಿಂಗ್ ಕಂಟಿನ್ಯೂ ಆಗಬಹುದು.