ಕೊಲೆ ಆರೋಪದಲ್ಲಿ ನಟ ದರ್ಶನ್ ಜೊತೆ ಜೈಲು ಸೇರಿದ್ದ ಡ್ರೈವರ್ ಲಕ್ಷ್ಮಣ್ ಹಾಗು ಮ್ಯಾನೇಜರ್ ನಾಗರಾಜ್ ಸದ್ಯಕ್ಕೆ ಇಬ್ಬರನ್ನು ದರ್ಶನ್ ರಿಂದ ದೂರ ಇರಿಸಿದ್ದೇವೆ. ದರ್ಶನ್ ಎಲ್ಲಾ ಜವಾಬ್ಧಾರಿ ಈಗ ವಿಜಯಲಕ್ಷ್ಮಿ ನೋಡಿ ಕೊಳ್ಳುತ್ತಿದ್ದಾರೆ. ಜೊತೆಗೆ ನಾನು ಇದ್ದೇನೆ. ಸಿನಿಮಾ ಕೆಲಸಗಳು..
ನಟ ದರ್ಶನ್ (Darshan Thoogudeepa) ಸಾಮ್ರಾಜ್ಯ ಈಗ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ಹಾಗು ಕೈಯಲ್ಲಿ ಬಂದು ಕುಳಿತಿದೆ. ನಟ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಹಾಗು ಮ್ಯಾನೇಜರ್ ನಾಗರಾಜು ಅವರಿಗೆ ವಿಜಯಲಕ್ಷ್ಮೀ ಸದ್ಯ ಗೇಟ್ ಪಾಸ್ ಕೊಟ್ಟಿದ್ದಾರೆ. ಈ ಎಲ್ಲ ಮಾಹಿತಿಗಳು ಬಲ್ಲ ಮೂಲಗಳಿಂದ ಬಂದಿವೆ.
ಕೊಲೆ ಆರೋಪದಲ್ಲಿ ನಟ ದರ್ಶನ್ ಜೊತೆ ಜೈಲು ಸೇರಿದ್ದ ಡ್ರೈವರ್ ಲಕ್ಷ್ಮಣ್ ಹಾಗು ಮ್ಯಾನೇಜರ್ ನಾಗರಾಜ್ ಸದ್ಯಕ್ಕೆ ಇಬ್ಬರನ್ನು ದರ್ಶನ್ ರಿಂದ ದೂರ ಇರಿಸಿದ್ದೇವೆ. ಇಬ್ಬರಿಗೂ ದರ್ಶನ್ ರಿಂದ ಅಂತರ ಕಾಯ್ದುಕೊಳ್ಳಲು ಲಾಯರ್ ಹೇಳಿದ್ದಾರೆ. ಹಾಗಾಗಿ ದರ್ಶನ್ ಎಲ್ಲಾ ಜವಾಬ್ಧಾರಿ ಈಗ ವಿಜಯಲಕ್ಷ್ಮಿ ನೋಡಿ ಕೊಳ್ಳುತ್ತಿದ್ದಾರೆ. ಜೊತೆಗೆ ನಾನು ಇದ್ದೇನೆ. ಸಿನಿಮಾ ಕೆಲಸಗಳು ಶುರುವಾದ ಮೇಲೆ ಅವರೆಲ್ಲರೂ ಬರುತ್ತಾರೆ.
ಅಪ್ಪು-ಅಣ್ಣಾವ್ರ ಬಗ್ಗೆ ಲಕ್ಷ್ಮೀ ಹೀಗ್ ಹೇಳೋದಾ? ಮಹಾನ್ ನಟಿ ಹೇಳದ್ಮೇಲೆ ನಿಜ ಆಗಿರ್ಬಹುದು ಅಲ್ವಾ!
ವಿಜಯಲಕ್ಷ್ಮಿ ತಮ್ಮ ಪತಿ ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ರೇಣುಕಾ ಸ್ವಾಮಿ ಕೊಲೆಗೂ ಮುಂಚೆ ದರ್ಶನ್ ಸುತ್ತ ಇದ್ದ ಹಲವರಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ ವಿಜಯಲಕ್ಷ್ಮೀ. ಆರ್ ಆರ್ ನಗರದಲ್ಲಿರೋ ರೇಣುಕಾ ಕೊಲೆ ಆರೋಪಿ ವಿನಯ್ ಗೆ ಗೇಟ್ ಪಾಸ್ ಕೊಟ್ಟಿರೋ ವಿಜಯಲಕ್ಷ್ಮಿ. ಕೊಲೆ ಅರೋಪಿ ದರ್ಶನ್ ಸುತ್ತ ಅಷ್ಟದಿಗ್ಬಂದನವನ್ನೆ ಹಾಕಿರೋ ವಿಜಯಲಕ್ಷ್ಮಿ ಮತ್ತು ದಿನಕರ್. ನಟಿ ಹಾಗೂ ಪವಿತ್ರಾ ಗೌಡ ಅವರಿಂದಲೂ ನಟ ದರ್ಶನ್‌ಗೆ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ.
ಸಿನಿಮಾ ಕೆಲಸ ಶುರುವಾಗೋ ವರೆಗೂ ದರ್ಶನ್ ಗೆ ಮ್ಯಾನೇಜರ್ ಇರಲ್ಲ. ದರ್ಶನ್ ನ ಭೇಟಿ ಮಾಡಬೇಕು ಅಂದ್ರೆ ವಿಜಯಲಕ್ಷ್ಮಿ ಅಥವ ತಮ್ಮ ದಿನಕರ್ ತೂಗುದೀಪ್ ಮೂಲಕ ಸಂಪರ್ಕಿಸಬೇಕು. ಇನ್ಮುಂದೆ ಮೊದಲಿನಂತೆ ಏನೂ ನಡೆಯಲ್ಲ ಅಂತಿದಾರೆ ಅವರನ್ನು ಹತ್ತಿರದಿಂದ ಬಲ್ಲ ಆಪ್ತರು. ರೇಣುಕಾ ಸ್ವಾಮಿ ಕೊಲೆಗೂ ಮೊದಲು ಗಂಡನ ಸುತ್ತ ಇದ್ದ ಕೆಲವರನ್ನ ಈಗ ದೂರ ಇಟ್ಟಿದ್ದಾರೆ ವಿಜಯಲಕ್ಷ್ಮಿ ಎನ್ನಲಾಗಿದೆ.
ಕಿರಿಕ್ ಕೀರ್ತಿ ಜೊತೆ ಖಳನಟ ಕೀರ್ತಿರಾಜ್ ಮಾತುಕಥೆ.. ಏನೆಲ್ಲಾ ಹೇಳಿದ್ರು?.. ದರ್ಶನ್-ಸುದೀಪ್ ಬಗ್ಗೆ..
ಸದ್ಯ ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಸ್ವಲ್ಪ ರಿಲ್ಯಾಕ್ಸ್ ನೀಡಿದೆ. ಈ ಮೊದಲು ಬೆಂಗಳೂರು ಬಿಟ್ಟು ಬೇರೆ ಕಡೆ ಹೋಗಬಾರದು ಎಂದು ಕಂಡೀಷನ್ ಹಾಕಲಾಗಿತ್ತು. ಆದರೆ, ಈಗ ಬೆಂಗಳೂರು ಬಿಟ್ಟು ಹೋಗಬಹುದು ದರ್ಶನ್. ವಿದೇಶಕ್ಕೆ ಹೋಗೋದಾದ್ರೆ ಮಾತ್ರ ಅವರಿಗೆ ಸ್ಪೆಷಲ್ ಪರ್ಮಿಷನ್ ಬೇಕು. ಆದರೆ ನಟ ದಶ್ನ್ ಸದ್ಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದು ಸರಿ ಹೋದರೆ, ಮುಂದೆ ಅರ್ಧಕ್ಕೆ ನಿಂತಿರುವ ಡೆವಿಲ್ ಶೂಟಿಂಗ್ ಕಂಟಿನ್ಯೂ ಆಗಲಿದೆ.
