ನೀವು ಬೆಳೆದ ಕೂಡಲೇ ನಮ್ಮ ಭಾಷೆ, ನಮ್ಮ ನೆಲ ಇವುಗಳನ್ನೆಲ್ಲಾ ಮರಿತೀರಿ ಅಂದ್ರೆ ನೀವು ಎಷ್ಟೇ ಬೆಳೆದ್ರೂ ಕೂಡ ನಮ್ಗೆ ನಿಮ್ಮ ಬಗ್ಗೆ ಗೌರವ ಇರಲ್ಲ. ನಿಮ್ಮ ನಿಮ್ಮ ನೆಲದ ಋಣ ತೀರಿಸುವ ಜವಾಬ್ದಾರಿ ನಿಮ್ಮ ಮೇಲೆ ಇರುತ್ತೆ.. ಅದನ್ನ ಯಾರೂ ಮರೆಯೋ ಹಾಗಿಲ್ಲ. ನಮ್ಮ ಕನ್ನಡದ..

ಕನ್ನಡತಿ, ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಮತ್ತೆ ಕೊಂಟ್ರೋವರ್ಸಿ ಮಾಡಿಕೊಂಡಿದ್ದಾರೆ. ರಶ್ಮಿಕಾಗೂ ವಿವಾದಕ್ಕೂ ಭಾರೀ ನಂಟು. ಕಿರಿಕ್ ಪಾರ್ಟಿ ಸಿನಿಮಾ ಬಳಿಕ ತೆಲುಗಿಗೆ ಹೋದ ನಟಿ ರಶ್ಮಿಕಾ ಬಳಿಕ ಸಾಕಷ್ಟು ವಿವಾದಕ್ಕೆ ಕೇಂದ್ರಬಿಂದು ಆಗಿಬಿಟ್ಟಿದ್ದಾರೆ. ಅದರಲ್ಲೂ ಮುಖ್ಯವಾಗಿ ನಟಿ ರಶ್ಮಿಕಾ ಅವರು ಕನ್ನಡ ಮಾತನಾಡಲ್ಲ, ಕರ್ನಾಟಕದ ಬಗ್ಗೆ ಅಭಿಮಾನ ಇಲ್ಲ, ಹೀಗೆ ಅವರ ಬಗ್ಗೆ ಈಗಾಗಲೇ ಸಾಕಷ್ಟು ವಿವಾದಗಳು ಸುತ್ತಿಕೊಂಡಿದ್ದವು. ಇದೀಗ ಹೊಸ ವಿವಾದ ಸುತ್ತಿಕೊಂಡಿದೆ. 

ಅದೇನು ರಶ್ಮಿಕಾ ಮಂದಣ್ಣ ಹೊಸ ವಿವಾದ ಅಂತೀರಾ? ಇಲ್ಲಿದೆ ನೋಡಿ ವಿವರ.. ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತಮ್ಮ ಛಾವಾ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡುತ್ತ 'ನಾನು ಹೈದ್ರಾಬಾದ್‌ನವಳು' ಅಂತ ಹೇಳಿದ್ದಾರೆ. ಈ ಸಂಗತಿ ಸೋಷಿಯಲ್ ಮೀಡಿಯಾ ಹಾಗೂ ಮೀಡಿಯಾ ಮೂಲಕ ವೈರಲ್ ಆಗುತ್ತಿದ್ದಂತೆ ಇತ್ತ ಕನ್ನಡನಾಡಿನಲ್ಲಿ ನಟಿ ರಶ್ಮಿಕಾ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಇನ್ನು ಈ ಬಗ್ಗೆ ಕರವೇ ನಾರಾಯಣ ಗೌಡು ಸಂದರ್ಶನವೊಂದರಲ್ಲಿ ಮಾತನ್ನಾಡಿದ್ದಾರೆ.

ನಟ ದರ್ಶನ್ ಸಾಮ್ರಾಜ್ಯ ಈಗ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ಕೈಯಲ್ಲಿ.. ಮುಂದೇನು ಕಥೆ?

'ನಾನು ಇತ್ತೀಚೆಗೆ ಚಲನಚಿತ್ರಕ್ಕೆ ಸಂಬಂಧಪಟ್ಟ ಕಾರ್ಯಕ್ರಮವೊಂದನ್ನು ಆಂಧ್ರಪ್ರದೇಶದಲ್ಲಿ ವೀಕ್ಷಿಸುತ್ತಿದ್ದೆ. ಅಲ್ಲಿ ರಶ್ಮಿಕಾ ಮಂದಣ್ಣ, ಕೊಡಗಿನ ಹೆಣ್ಣು ಮಗಳು ಏನಂದ್ರು ಅಂತ ಗೊತ್ತು. ಕನ್ನಡದ ಸಿನಿಮಾ ಮೂಲಕ ಹಲವು ಬಾಷೆಗಳಲ್ಲಿ ನಟಿಸಿ ಇಂದು ರಾಷ್ಟ್ರಮಟ್ಟದಲ್ಲಿ ಬೆಳೆದು ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಅವರು 'ಐ ಆಮ್ ಫ್ರಂ ಆಂಧ್ರ ಪ್ರದೇಶ್', ನಾನು ಆಂಧ್ರಪ್ರದೇಶದ ಹೆಣ್ಣುಮಗಳು ಅಂತ ಹೇಳಿಕೆ ಕೊಡ್ತಾಳಲ್ಲಾ, ಒಂದಿಷ್ಟು ಬೆಳೆದ ತಕ್ಷಣ, ನಿಮ್ಗೆ ಬೇರೆ ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕಿದ ತಕ್ಷಣ, ನೀವು ಕನ್ನಡ ನಾಡನ್ನೇ ಮರಿತೀರಿ ಅಂದ್ರೆ, ನೀವು ಎಂಥ ಮೇರು ಸಾಧಕರು ಇದೀರಿ ಅಂದ್ರೆ, ನಮಗೆ ಅನ್ನಿಸುತ್ತೆ...

ನೀವು ಬೆಳೆದ ಕೂಡಲೇ ನಮ್ಮ ಭಾಷೆ, ನಮ್ಮ ನೆಲ ಇವುಗಳನ್ನೆಲ್ಲಾ ಮರಿತೀರಿ ಅಂದ್ರೆ ನೀವು ಎಷ್ಟೇ ಬೆಳೆದ್ರೂ ಕೂಡ ನಮ್ಗೆ ನಿಮ್ಮ ಬಗ್ಗೆ ಗೌರವ ಇರಲ್ಲ. ನಿಮ್ಮ ನಿಮ್ಮ ನೆಲದ ಋಣ ತೀರಿಸುವ ಜವಾಬ್ದಾರಿ ನಿಮ್ಮ ಮೇಲೆ ಇರುತ್ತೆ.. ಅದನ್ನ ಯಾರೂ ಮರೆಯೋ ಹಾಗಿಲ್ಲ. ನಮ್ಮ ಕನ್ನಡದ ರಾಷ್ಟ್ರಕವಿ ಕುವೆಂಪು ಅವರು ಹೇಳ್ತಾರಲ್ಲಾ, 'ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು..' ಅಂತ. ಅದನ್ನು ನೀವೆಲ್ಲಾ ಚೆನ್ನಾಗಿ ಅರ್ಥ ಮಾಡ್ಕೊಳ್ಳಿ.. ' ಎಂದಿದ್ದಾರೆ ನಾರಾಯಣ ಗೌಡರು. 

ಅಪ್ಪು-ಅಣ್ಣಾವ್ರ ಬಗ್ಗೆ ಲಕ್ಷ್ಮೀ ಹೀಗ್ ಹೇಳೋದಾ? ಮಹಾನ್ ನಟಿ ಹೇಳದ್ಮೇಲೆ ನಿಜ ಆಗಿರ್ಬಹುದು ಅಲ್ವಾ!

ಹೌದು, ಅದ್ಯಾಕೋ ನಟಿ ರಶ್ಮಿಕಾ ಮಂದಣ್ಣಗೂ ವಿವಾದಕ್ಕೂ ಭಾರಿ ನಂಟು. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಂದಿದ್ದಕ್ಕೋ ಏನೋ ಎಂಬಂತೆ, ಒಂದಾದ ಬಳಿಕ ಮತ್ತೊಂದು ಕಾಂಟ್ರೋವರ್ಸಿ ಹೇಳಿಕೆ ಕೊಡುತ್ತಲೇ ಇದ್ದಾರೆ. ಆದರೆ, ಕನ್ನಡ ಸಿನಿಮಾಗಳನ್ನು ಬಿಟ್ಟು ಬೇರೆ ಭಾಷೆಗಳಲ್ಲಿ ಅವರು ನಟಿಸುತ್ತಲೇ ಇದ್ದಾರೆ. ಅಷ್ಟೇ ಅಲ್ಲ, ಅವರ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಕೂಡ ಮಾಡುತ್ತಿವೆ. ಒಟ್ಟಿನಲ್ಲಿ ಹೇಳಬೇಕು ಅಂದ್ರೆ, ರಶ್ಮಿಕಾಗೆ ಟೈಂ ಸರಿಯಿಲ್ವಾ?