ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ನಿರ್ಮಾಪಕಿಯಾಗಿ "ಫಯರ್ ಫ್ಲೈ" ಸಿನಿಮಾ ಬಿಡುಗಡೆಗೆ ಸಿದ್ಧರಾಗಿದ್ದಾರೆ. ಸಂದರ್ಶನದಲ್ಲಿ, ಮದುವೆಯ ಬಗ್ಗೆ ಯಾವುದೇ ನಿರ್ಧಾರವಿಲ್ಲ, ಒಳ್ಳೆಯ ಮನಸ್ಸಿನ, ಬೆಂಬಲ ನೀಡುವ ವ್ಯಕ್ತಿ ಬೇಕೆಂದು ಹೇಳಿದ್ದಾರೆ. ತನಗೆ ಯಶ್ ಮತ್ತು ಹೃತಿಕ್ ರೋಷನ್ ಅವರ ಮೇಲೆ ಕ್ರಶ್ ಇದೆ ಎಂದು ನಿವೇದಿತಾ ತಿಳಿಸಿದ್ದಾರೆ. ತಂದೆ ಎಲ್ಲರಿಗೂ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈಗ ನಿರ್ಮಾಪಕಿಯಾಗಿದ್ದಾರೆ. ಇಷ್ಟು ದಿನ ವೆಬ್‌ ಸೀರಿಸ್ ಹಾಗೂ ಓಟಿಟಿಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದವರು ಈಗ ಚಿತ್ರಮಂದಿರಗಳಲ್ಲಿ ಕಾಲಿಟ್ಟಿದ್ದಾರೆ. ಫಯರ್ ಫ್ಲೈ ಸಿನಿಮಾ ರಿಲೀಸ್‌ಗೆ ಸಜ್ಜಾಗಿರುವ ಕಾರಣ ಪ್ರಚಾರ ಮಾಡಲು ನಿವೇದಿತಾ ಮುಂದಾಗಿದ್ದಾರೆ.ಇದೇ ಮೊದಲು ನಿವೇದಿತಾ ಮಾಧ್ಯಮಗಳಲ್ಲಿ ಮಾತನಾಡುತ್ತಿರುವ ಕಾರಣ ಜನರಿಗೆ ಹಲವಾರು ರೀತಿಯಲ್ಲಿ ಕ್ಯೂರಿಯಾಸಿಟಿಗಳು ಇರುತ್ತದೆ. ಈಗ ಶಿವಣ್ಣ ಜೇಷ್ಠ ಪುತ್ರಿ ನಿರೂಪಮಾ ಮದುವೆ ಆಯ್ತು ಈಗ ಕಿರಿಯ ಪುತ್ರಿ ನಿವೇದಿತಾ ಮದುವೆ ಯಾವಾಗ ಎಂದು? ಅಷ್ಟೇ ಅಲ್ಲ ಸ್ಟಾರ್ ಮಕ್ಕಳಿಗೂ ಕ್ರಶ್‌ಗಳು ಇರ್ತಾರ ಎಂದು. ನಾಚುತ್ತಲೇ ಉತ್ತರಿಸಿದ್ದಾರೆ ನಿವೇದಿತಾ. 

ನಿವೇದಿತಾ ಮದುವೆ ಪ್ಲಾನ್:

'ನನ್ನ ಮದುವೆ ವಿಚಾರದ ಬಗ್ಗೆ ಐಡಿಯಾನೇ ಇಲ್ಲ ಆದರೆ go with the flow ಅಷ್ಟೇ. ಹುಡುಗ ಹೇಗಿರಬೇಕು ಅನ್ನೋ ಡ್ರೀಮ್ ಎಲ್ಲರಿಗೂ ಇರುತ್ತೆ ಆದರೆ ಏನ್ ಆಗುತ್ತದೆ ನೋಡಬೇಕು.ಇದೇ ತರ ಇರಬೇಕು ಅನ್ನೋದು ಏನ್ ಇಲ್ಲ ಆದರೆ ಸಿಂಪಲ್ ಆಗಿ ಒಳ್ಳೆ ಮನಸ್ಸು ಇರುವ ಹುಡುಗ ಆದರೆ ಸಾಕು ನನ್ನ ಕೆಲಸಗಳಿಗೆ ಸಪೋರ್ಟ್ ಮಾಡಬೇಕು' ಎಂದು ನಿವೇದಿತಾ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇನ್ನು ಇಂಡಸ್ಟ್ರಿಯಲ್ಲಿ ಇರುವ ವ್ಯಕ್ತಿ ಅಥವಾ ಹೊರಗಡೆ ಇರುವ ವ್ಯಕ್ತಿಯನ್ನು ಮದುವೆ ಆಗ್ತೀರಾ? ಎಂದು ಪ್ರಶ್ನೆ ಮಾಡಿದಾಗ ಗೊತ್ತಿಲ್ಲ ಎಂದು ನಕ್ಕಿದ್ದಾರೆ ನಿವೇದಿತಾ. 

ಮಿಡಲ್ ಕ್ಲಾಸ್ ಫ್ಯಾಮಿಲಿ ಆಗಿದ್ದ ಕಾರಣ ಥಿಯೇಟರ್‌ಗೆ ಮನೆಯಿಂದ ತಿಂಡಿ ತೆಗೆದುಕೊಂಡು ಹೋಗ್ತಿದ್ವಿ: ಯಶ್

ಸೆಲೆಬ್ರಿಟಿ ಕ್ರಶ್:

'ನನಗೂ ಸೆಲೆಬ್ರಿಟಿ ಕ್ರಶ್‌ಗಳು ತುಂಬಾ ಇದಾರೆ. ಕನ್ನಡದಲ್ಲಿ ಹೇಳಬೇಕು ಅಂದ್ರೆ ಯಶ್ ತುಂಬಾನೇ ಇಷ್ಟ. ಬಾಲಿವುಡ್‌ನಲ್ಲಿ ಹೃತಿಕ್ ರೋಶನ್ ತುಂಬಾನೇ ಇಷ್ಟ ಆಮೇಲೆ ಸಲ್ಮಾನ್ ಖಾನ್ ಮೇಲೆ ಇತ್ತು. ಬಹುತೇಕ ಕನ್ನಡ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ್ದೀನಿ ಪರಭಾಷೆಯಿಂದ ರಜನಿಕಾಂತ್ ಸರ್ ಆಮೇಲೆ ಮನೆಗೆ ಕಮಲ್ ಹಾಸನ್ ಸರ್ ಬಂದಿದ್ದಾರೆ. ಬೇರೆ ಭಾಷೆಯವರು ಮನೆಗೆ ಬಂದು ತಂದೆಯನ್ನು ಭೇಟಿ ಮಾಡಿ ಸಿನಿಮಾ ರಿಲೀಸ್ ಮಾಡುವುದಕ್ಕೆ ತುಂಬಾನೇ ಖುಷಿ ಇದೆ ತಂದೆ ತುಂಬಾ ಓಪನ್ ವ್ಯಕ್ತಿ ಪ್ರತಿಯೊಬ್ಬರಿಗೂ ಸಪೋರ್ಟ್ ಮಾಡುತ್ತಾರೆ' ಎಂದು ನಿವೇದಿತಾ ಹೇಳಿದ್ದಾರೆ.

ಅಯ್ಯಯ್ಯೋ ನಾವು ಹಸುವಿನ ಹಾಲು ಮುಟ್ಟ ಏನೇ ಇದ್ರೂ ಬಾದಾಮಿ ಹಾಲು ಮಾತ್ರ: ನಟಿ ಅನುಷ್ಕಾ ಶರ್ಮಾ