- Home
- Entertainment
- Sandalwood
- ‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಪುನೀತ್ ರಾಜಕುಮಾರ್ ಅವರ ‘ಯುವರತ್ನ’ ಸಿನಿಮಾ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದ ನಟಿ ಸಯ್ಯೇಷಾ ಸೈಗಲ್ ಇದೀಗ ಯುವರತ್ನ ಸಿನಿಮಾದ ನೀನಾದೆ ನಾ ಹಾಡನ್ನು ನೆನಪಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಸದ್ಯ ನಟಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

ಸಯ್ಯೇಷಾ ಸೈಗಲ್
ಮುಂಬೈ ಮೂಲಕದ ಸಯ್ಯೇಷಾ ಸೈಗಲ್ ದಕ್ಷಿಣ ಭಾರತದ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದರು. ಅದರಲ್ಲೂ ಕನ್ನಡಿಗರ ಹೃದಯ ಗೆದ್ದಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಮೂಲಕ. ಈವಾಗಲೂ ಈ ಜನರ ಅಚ್ಚುಮೆಚ್ಚು.
ಹಾಡನ್ನು ನೆನಪಿಸಿಕೊಂಡ ನಟಿ
ಯುವರತ್ನ ಸಿನಿಮಾ 2021ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದ ‘ನೀನಾದೆ ನಾ ನೀನಾದೆ ನಾ’ ಹಾಡು ಅದೆಷ್ಟೋ ಪ್ರೇಮಿಗಳ ಹೃದಯದಲ್ಲಿ ಲಗ್ಗೆ ಇಟ್ಟಿತ್ತು. ಈವಾಗಲೂ ಜನರು ಗುನುಗುವ ಈ ಹಾಡನ್ನು ಇದೀಗ ಸಯ್ಯೇಷಾ ನೆನಪಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಏನು ಹೇಳಿದ್ದಾರೆ ಸಯ್ಯೇಷಾ
ನನಗೆ ಸಂತೋಷವಾಗಿದೆ! ಇಲ್ಲಿಯವರೆಗೆ #NeenadeNaa ಗೆ ಸಿಕ್ಕಿರುವ ಪ್ರೀತಿಯನ್ನು ನೋಡುವುದು ಎಷ್ಟು ಅದ್ಭುತವಾಗಿದೆ! 100 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ ಈ ಹಾಡು! ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು! ಎಂದು ಸಯ್ಯೇಷಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಅರ್ಮನ್ ಮಲೀಕ್
ನೀನಾದೆ ನಾ ಹಾಡನ್ನು ಹಿಂದಿ ಗಾಯಕ ಅರ್ಮನ್ ಮಲೀಕ್ ಹಾಡಿದ್ದರು. ಈ ಹಾಡು ಬಿಡುಗಡೆಯಾದಗಲೇ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಐದು ವರ್ಷಗಳ ಬಳಿಕವೂ ಈ ಹಾಡನ್ನು ಜನ ಕೇಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹಲವು ಸಂಗೀತ ಕಾರ್ಯಕ್ರಮ, ಡ್ಯಾನ್ಸ್ ಶೋಗಳನ್ನು ಈ ಹಾಡು ಸದ್ದು ಮಾಡುತ್ತಿರುತ್ತವೆ. ಈ ಹಾಡನ್ನು ಪುನೀತ್ ಜೊತೆ ಸಯ್ಯೇಷಾ ಡುಯೆಟ್ ಹಾಡಿದ್ದರು.
ಸಯ್ಯೇಷಾ ಸೈಗಲ್ ಸಿನಿಮಾ ಎಂಟ್ರಿ
18ನೇ ವಯಸ್ಸಿಗೆ ಸಯೇಷಾ, ಅಖಿಲ್ ಎನ್ನುವ ತೆಲುಗು ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಇವರು ಶಿವಾಯ್, ವಾನ್ಮಗನ್, ಕಾಪಾನ್, ಟೆಡ್ಡಿ ಯುವರತ್ನ ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿಯಾಗಿ ಮಿಂಚಿದರು.
ಆರ್ಯ ಜೊತೆ ಮದುವೆ
ಘಜನಿಕಾಂತ್, ಟೆಡ್ಡಿ, ಕಾಪ್ಪನ್ ಸಿನಿಮಾಗಳಲ್ಲಿ ತಮಿಳು ನಟ ಆರ್ಯ ಜೊತೆ ತೆರೆ ಹಂಚಿಕೊಂಡಿದ್ದ ಸಯೇಷಾ ಬಳಿಕ ತನಗಿಂತ 17 ವರ್ಷ ಹಿರಿಯನಾದ ಆರ್ಯನನ್ನು ಪ್ರೀತಿಸಿ, ಅವರ ಜೊತೆಗೆ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಗುವಿನ ಆರೈಕೆಯಲ್ಲಿ ಬ್ಯುಸಿ
ಮದುವೆಯಾದ ಬಳಿಕವೂ ಸಿನಿಮಾದಲ್ಲಿ ಸಯೇಷಾ ನಟಿಸಿದ್ದರು, 2021 ರಲ್ಲಿ ಸಯೇಷಾ- ಆರ್ಯಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಆರಿಯಾನಾ ಎಂದು ಹೆಸರಿಟ್ಟಿದ್ದಾರೆ. ಮಗುವಾದ ಬಳಿಕ ಸಯೇಷಾ ಸಿನಿಮಾಗಳಿಂದ ದೂರವಿದ್ದು, ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

