- Home
- Entertainment
- Sandalwood
- ಮಿಡಲ್ ಕ್ಲಾಸ್ ಫ್ಯಾಮಿಲಿ ಆಗಿದ್ದ ಕಾರಣ ಥಿಯೇಟರ್‌ಗೆ ಮನೆಯಿಂದ ತಿಂಡಿ ತೆಗೆದುಕೊಂಡು ಹೋಗ್ತಿದ್ವಿ: ಯಶ್
ಮಿಡಲ್ ಕ್ಲಾಸ್ ಫ್ಯಾಮಿಲಿ ಆಗಿದ್ದ ಕಾರಣ ಥಿಯೇಟರ್‌ಗೆ ಮನೆಯಿಂದ ತಿಂಡಿ ತೆಗೆದುಕೊಂಡು ಹೋಗ್ತಿದ್ವಿ: ಯಶ್
ಎರಡು ವರ್ಷದ ಮಗುವಾಗಿದ್ದಾಗಲೇ ಸಿನಿಮಾ ನೋಡಲು ಶುರು ಮಾಡಿದರು ಯಶ್. ಅಮ್ಮ ಕೊಡುತ್ತಿದ್ದ ಬಾಳೆಹಣ್ಣು ಯಾಕೆ ಎಸೆಯುತ್ತಿದ್ದರು?

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್, ಹಾಗೂ ಪ್ಯಾನ್ ಇಂಡಿಯಾ ರಾಖಿ ಬಾಯ್ ಇದೀಗ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಏಪ್ರಿಲ್‌ಗೆ ರಿಲೀಸ್ ಆಗಬೇಕಿದ್ದ ಸಿನಿಮಾ ದಿನಾಂಕವನ್ನು ಮುಂದೂಡಿದ್ದಾರೆ. ಅಭಿಮಾನಿಗಳು ತುಂಬಾ ಬೇಸರ ಕೂಡ ಆಗಿದೆ.
ಈ ಹಿಂದೆ ಸಂದರ್ಶನ ಒಂದರಲ್ಲಿ ನಟ ಯಶ್ ಭಾಗಿಯಾಗಿದ್ದರು. ಪುಟ್ಟ ಹುಡುಗ ಇದ್ದಾಗ ಚಿತ್ರಮಂದಿರಗಳಲ್ಲಿ ಹೋಗುತಿದ್ರಾ? ಆಗ ಮರೆಯಲಾಗದ ನೆನಪುಗಳು ಯಾವುದು ಎಂದು ಹಂಚಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಹೆಚ್ಚಾಗಿ ಅಂಬರೀಶ್ ಅಣ್ಣ ಸಿನಿಮಾಗಳನ್ನು ನೋಡುತ್ತಿದ್ದೆ ಆದರೆ ಪೋಷಕರು ಹೇಳುತ್ತಾರೆ ಎಲ್ಲಾ ನಟರ ಸಿನಿಮಾಗಳನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದರು ಎಂದು.
ಎರಡು ವರ್ಷದ ಮಗುವಿದ್ದಾಗಲೇ ಸಿನಿಮಾ ನೋಡಲು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಸಮಯದಿಂದ ನಾನು ಚಿತ್ರಮಂದಿರಗಳಿಗೆ ಹೋಗುತ್ತಿರುವ ನೆನಪು ಇದೆ.
ನನಗೆ ಕೋಪ ಬಂದಾಗ ಸಿಟ್ಟು ಮಾಡಿಕೊಂಡಾಗ ಬಾಳೆಹಣ್ಣನ್ನು ಎಸೆಯುತ್ತಿದೆ ಎಂದು ಪೋಷಕರು ಹೇಳುತ್ತಿರುತ್ತಾರೆ. ಯಾಕೆ ಬಾಳೆಹಣ್ಣು ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು.
ನಾವು ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದಿರುವ ಕಾರಣ ಆ ಕಾಲದಲ್ಲಿ ಚಿತ್ರಮಂದಿರಗಳಿಗೆ ನಮ್ಮ ಮನೆಯಿಂದಲೇ ತಿಂಡಿಗಳನ್ನು ತೆಗೆದುಕೊಂಡು ಹೀಗುತ್ತಿದ್ದೆ. ಆಗ ಬಾಳೆಹಣ್ಣು ಕೊಡುತ್ತಿದ್ದರು ಅಮ್ಮ.
ನನಗೆ ಸಿಟ್ಟು ಬಂದಾಗ ಅಥವಾ ಕೋಪ ಮಾಡಿಕೊಂಡಾಗ ಬಾಳೆಹಣ್ಣು ಎಸೆಯುತ್ತಿದ್ದೆ ಏಕೆಂದರೆ ಅದೊಂದು ದೊಡ್ಡ ತೊಂದರೆ ಆಗಿತ್ತು ಅದಿಕ್ಕೆ ನನಗೆ ನೆನಪಿದೆ ಎಂದು ಯಶ್ ಹೇಳಿದ್ದಾರೆ.