- Home
- Entertainment
- Cine World
- ಅಯ್ಯಯ್ಯೋ ನಾವು ಹಸುವಿನ ಹಾಲು ಮುಟ್ಟ ಏನೇ ಇದ್ರೂ ಬಾದಾಮಿ ಹಾಲು ಮಾತ್ರ: ನಟಿ ಅನುಷ್ಕಾ ಶರ್ಮಾ
ಅಯ್ಯಯ್ಯೋ ನಾವು ಹಸುವಿನ ಹಾಲು ಮುಟ್ಟ ಏನೇ ಇದ್ರೂ ಬಾದಾಮಿ ಹಾಲು ಮಾತ್ರ: ನಟಿ ಅನುಷ್ಕಾ ಶರ್ಮಾ
ವಿರಾಟ್ ಮತ್ತು ಅನುಷ್ಕಾ ಮನೆಯಲ್ಲಿಯೇ ತಯಾರಿಸುತ್ತಾರೆ ಬಾದಾಮಿ ಹಾಲನ್ನು. ಸಿಂಪಲ್ ರೆಸಿಪಿ ಹಂಚಿಕೊಂಡ ನಟಿ.

ಬಾಲಿವುಡ್ ಸಿಂಪಲ್ ಸುಂದರಿ, ವಿರಾಟ್ ಕೊಹ್ಲಿ ಮನದ ಅರಸಿ ಅನುಷ್ಕಾ ಶರ್ಮಾ ಬ್ಯೂಟಿ ಕಾಪಾಡಿಕೊಳ್ಳಲು ತುಂಬಾ ಕಾಳಜಿ ವಹಿಸುತ್ತಾರೆ. ಈ ನಟಿ ಸಾಮಾನ್ಯವಾಗಿ ಯಾವ ಹಾಲು ಕಡಿಯುತ್ತಾರೆ ಗೊತ್ತಾ?
ನಾನು ಸಾಮಾನ್ಯವಾಗಿ ಎಲ್ಲರೂ ಕುಡಿಯುವಂತೆ ಹಸುವಿನ ಹಾಲು ಕುಡಿಯುವುದಿಲ್ಲ ನಾನು ಕುಡಿಯುವುದು ಬಾದಾಮಿ ಹಾಲು ಮಾತ್ರ. ಬಾದಾಮಿ ಹಾಲನ್ನು ಮನೆಯಲ್ಲಿಯೇ ರೆಡಿ ಮಾಡಿಕೊಳ್ಳುತ್ತೀನಿ.
ನಾನು ಏನು ಮಾಡುತ್ತೀನಿ ಅಂದ್ರೆ ರಾತ್ರಿ ಬಾದಾಮಿಯನ್ನು ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ಬಾದಾಮಿ ಸಿಪ್ಪೆಯನ್ನು ತೆಗೆದು ಮಿಸ್ಕಿಯಲ್ಲಿ ರುಬ್ಬುತ್ತೀನಿ. ಕೆಲವೊಮ್ಮೆ ಮಾತ್ರ ನಾನು ಬಾದಾಮಿ ಸಿಪ್ಪೆಯನ್ನು ಹಾಗೇ ಉಳಿಸಿಕೊಳ್ಳುತ್ತೀನಿ.
ಮಿಸ್ಕಿಯಲ್ಲಿ ರುಬ್ಬಿಕೊಳ್ಳುವಾಗ ನೀರು ಬಿಟ್ಟರೆ ಏನನ್ನೂ ಬಳಸಬಾರದು. ನೀರಿನಲ್ಲಿ ಎಷ್ಟು ಗಟ್ಟಿ ಬೇಕು ಎಷ್ಟು ತೆಳು ಬೇಕು ಎಂದು ಸರಿ ಮಾಡಿಕೊಳ್ಳಬಹುದು ಎಂದು ಹಿಂದಿ ಸಂದರ್ಶನದಲ್ಲಿ ಅನುಷ್ಕಾ ಮಾತನಾಡಿದ್ದಾರೆ.
ಸುಲಭವಾಗಿ ಬಾದಾಮಿ ಹಾಲು ರೆಡಿಯಾಗಿಬಿಡುತ್ತದೆ. ಅಂಗಡಿಯಿಂದ ಹಾಲನ್ನು ತಂದು ಕುಡಿಯಬಾರದು ಅದರಲ್ಲಿ ರುಚಿ ಇರುವುದಿಲ್ಲ ಹಾಗೂ ಸಿಂಥಟಿಕ್ ಅಂಶವಿರುತ್ತದೆ ಎಂದು ಅನುಷ್ಕಾ ಹೇಳಿದ್ದಾರೆ.
ಬಾದಾಮಿ (Almond) ಹಾಲಿನಲ್ಲಿ ಕ್ಯಾಲರಿ ಕಡಿಮೆ ಇರುತ್ತದೆ. ಅಲ್ಲದೆ, ಇದರಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ದೊರೆಯುತ್ತದೆ.ಕೊಬ್ಬು (Fat) ಹಾಗೂ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಸ್ವಲ್ಪವೂ ಇರುವುದಿಲ್ಲ. ಪ್ರೊಟೀನ್ (Protein) ಅಂಶ ಅಧಿಕವಾಗಿದ್ದು, ತೂಕ ಇಳಿಸಿಕೊಳ್ಳುವ ಹಂಬಲ ಉಳ್ಳವರಿಗೆ ಅತ್ಯಂತ ಸೂಕ್ತವಾಗಿದೆ.