ಕನ್ನಡಕ್ಕೆ ಹೊಸ ಓಟಿಟಿ ಬಂದಿದೆ. ಹೆಸರು ‘ಓಟಿಟಿ ಪ್ಲೇಯರ್‌’ ಎಂಬುದು. ಕನ್ನಡ ಸಿನಿಮಾ ನಿರ್ಮಾಪಕರ ಸಿನಿಮಾಗಳ ಪ್ರದರ್ಶನಕ್ಕೆ ಮತ್ತೊಂದು ವೇದಿಕೆ ಎನ್ನುತ್ತಿರುವ ಈ ಹೊಸ ಓಟಿಟಿಯನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್‌ ಹಾಗೂ ಹಿರಿಯ ನಿರ್ಮಾಪಕ ಎಸ್ ಎ ಚಿನ್ನೇಗೌಡ ಮುಂತಾದವರು ಅನಾವರಣ ಮಾಡಿದರು. 

ಕನ್ನಡಕ್ಕೆ ಹೊಸ ಓಟಿಟಿ ಬಂದಿದೆ. ಹೆಸರು ‘ಓಟಿಟಿ ಪ್ಲೇಯರ್‌’ ಎಂಬುದು. ಕನ್ನಡ ಸಿನಿಮಾ ನಿರ್ಮಾಪಕರ ಸಿನಿಮಾಗಳ ಪ್ರದರ್ಶನಕ್ಕೆ ಮತ್ತೊಂದು ವೇದಿಕೆ ಎನ್ನುತ್ತಿರುವ ಈ ಹೊಸ ಓಟಿಟಿಯನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್‌ ಹಾಗೂ ಹಿರಿಯ ನಿರ್ಮಾಪಕ ಎಸ್ ಎ ಚಿನ್ನೇಗೌಡ ಮುಂತಾದವರು ಅನಾವರಣ ಮಾಡಿದರು. ಅಂದಹಾಗೆ ಇದು ಎಲ್ಲಾ ಓಟಿಟಿಗಳಂತೆ ಆ್ಯಪ್‌ ರೀತಿಯದ್ದಲ್ಲ. 

ಇದೊಂದು ವೆಬ್‌ಸೈಟ್‌ ರೂಪದಲ್ಲಿರುತ್ತದೆ. ಹಾರ್ಲೀ ಎಂಟರ್‌ಟೈನ್‌ಮೆಂಟ್‌ ಮೀಡಿಯಾ ಸಂಸ್ಥೆಯ ಗೀತಾ ಕೃಷ್ಣನ್‌ರಾವ್‌ ಹಾಗೂ ಮುರಳಿರಾವ್‌ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ವೆಬ್‌ ಸೈಟ್‌ ಇದು. ಇದರ ಮೂಲಕ ಜಾಹೀರಾತು ಮುಕ್ತವಾಗಿ ಕನ್ನಡ ಸಿನಿಮಾಗಳನ್ನು ನೋಡಬಹುದು. ಮುರಳಿರಾವ್‌, ‘ಇದೊಂದು ಪ್ರಯೋಗ ಮತ್ತು ಹೊಸ ಪ್ರಯತ್ನ. ನಿರ್ಮಾಪಕರೊಬ್ಬರು ನಮ್ಮನ್ನು ಭೇಟಿ ಮಾಡಿ ತಮ್ಮ ಕಷ್ಟ ಹೇಳಿಕೊಂಡಾಗ ಈ ಆಲೋಚನೆ ಬಂತು. ಈಗ ಎಲ್ಲರೂ ಓಟಿಟಿಯಲ್ಲಿ ಚಿತ್ರ ಯಾವಾಗ ಬರುತ್ತೆ ಅಂತ ಕಾಯುತ್ತಾರೆ.

ನಮ್ಮ ವೆಬ್‌ ಸೈಟ್‌ಗೆ ಲಾಗಿನ್‌ ಆಗಿ ಅಲ್ಪದರ ಪಾವತಿಸಿ ಹೊಸ ಚಿತ್ರಗಳನ್ನು ನೋಡಬಹುದು. ಇದನ್ನು ಆನ್‌ಲೈನ್‌ ಥಿಯೇಟರ್ ಎನ್ನಬಹುದು‌. ಪ್ರತಿ ಚಿತ್ರಕ್ಕೂ ಬಂದ ಹಣದಲ್ಲಿ ನಿರ್ಮಾಪಕರಿಗೆ ಶೇ.70ರಷ್ಟು ಪಾಲು ನೀಡುತ್ತೇವೆ. ಚಿತ್ರದ ನೋಡಲು ಪಾವತಿಸಬೇಕಾದ ಹಣ, ಲಾಗಿನ್‌ ಬೆಲೆ ಇತ್ಯಾದಿಗಳನ್ನು ಸದ್ಯದಲ್ಲೇ ವೆಬ್‌ ಸೈಟ್‌ನಲ್ಲೇ ನೋಡಬಹುದು. ಅಲ್ಲದೆ ಉತ್ತಮ ಕಿರು ಚಿತ್ರಗಳನ್ನು ಕೂಡ ನಮ್ಮ ವೆಬ್‌ ಸೈಟ್‌ನಲ್ಲಿ ಪ್ರದರ್ಶಿಸಲಿದ್ದೇವೆ’ ಎಂದರು.

55ನೇ ಪನೋರಮ ಚಿತ್ರೋತ್ಸವಕ್ಕೆ ಕನ್ನಡದ ಎರಡು ಚಿತ್ರಗಳು ಆಯ್ಕೆ: ಯಾವುದು ಆ ಸಿನಿಮಾಗಳು!

ನ. 29ಕ್ಕೆ ನಾನಿನ್ನ ಬಿಡಲಾರೆ ಸಿನಿಮಾ ಬಿಡುಗಡೆ: ದಶಕಗಳ ಹಿಂದೆ ಅನಂತ್ ನಾಗ್ ಲಕ್ಷ್ಮೀ ಕಾಂಬಿನೇಷನ್ ಸೂಪರ್‌ಹಿಟ್‌ ಆದ ‘ನಾನಿನ್ನ ಬಿಡಲಾರೆ’ ಸಿನಿಮಾ ಶೀರ್ಷಿಕೆಯಲ್ಲಿ ಹೊಸ ಸಿನಿಮಾವೊಂದು ಬಿಡುಗಡೆಗೆ ಸಿದ್ಧವಾಗಿದೆ. ನ.29ಕ್ಕೆ ಈ ಚಿತ್ರ ರಿಲೀಸ್‌ ಆಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಂಟೆಂಟ್‌ನ ಈ ಸಿನಿಮಾವನ್ನು ಹೊಸ ತಂಡ ನಿರ್ಮಿಸಿದೆ. ಅಂಬಾಲಿ ಭಾರತಿ ನಾಯಕಿ. ಅವರೇ ನಿರ್ಮಾಪಕಿಯೂ ಹೌದು. ನವೀನ್ ಜಿ.ಎಸ್ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಪಂಚಿ, ಸೀರುಂಡೆ ರಘು, ಕೆ.ಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ.