55ನೇ ಪನೋರಮ ಚಿತ್ರೋತ್ಸವಕ್ಕೆ ಕನ್ನಡದ ಎರಡು ಚಿತ್ರಗಳು ಆಯ್ಕೆ: ಯಾವುದು ಆ ಸಿನಿಮಾಗಳು!
ಇಂಡಿಯನ್ ಪನೋರಮ ವಿಭಾಗದ 2ನೇ ಚಿತ್ರವಾಗಿ ‘ಕೆರೆಬೇಟೆ’, 3ನೇ ಚಿತ್ರವಾಗಿ ‘ವೆಂಕ್ಯಾ’ ಚಿತ್ರಗಳು ಪ್ರದರ್ಶನ ಕಾಣಲಿವೆ. ಅಂದಹಾಗೆ ಇಂಡಿಯನ್ ಪನೋರಮದ ಫೀಚರ್ ಫಿಲ್ಮ್ ವಿಭಾಗದಲ್ಲಿ 384 ಚಿತ್ರಗಳು ಆಯ್ಕೆ ಬಯಸಿ ಬಂದಿದ್ದವು.
ಗೋವಾದಲ್ಲಿ ಇದೇ ವರ್ಷ ನವೆಂಬರ್ 20ರಿಂದ 28ರವರೆಗೂ ನಡೆಯಲಿರುವ 55ನೇ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪನೋರಮ ಚಿತ್ರೋತ್ಸವಕ್ಕೆ ರಾಜ್‌ಗುರು ನಿರ್ದೇಶನದ ‘ಕೆರೆಬೇಟೆ’ ಹಾಗೂ ಸಾಗರ್ ಪುರಾಣಿಕ್ ನಿರ್ದೇಶನದ ‘ವೆಂಕ್ಯಾ’ ಚಿತ್ರಗಳು ಆಯ್ಕೆ ಆಗಿವೆ.
ಇಂಡಿಯನ್ ಪನೋರಮ ವಿಭಾಗದ 2ನೇ ಚಿತ್ರವಾಗಿ ‘ಕೆರೆಬೇಟೆ’, 3ನೇ ಚಿತ್ರವಾಗಿ ‘ವೆಂಕ್ಯಾ’ ಚಿತ್ರಗಳು ಪ್ರದರ್ಶನ ಕಾಣಲಿವೆ. ಅಂದಹಾಗೆ ಇಂಡಿಯನ್ ಪನೋರಮದ ಫೀಚರ್ ಫಿಲ್ಮ್ ವಿಭಾಗದಲ್ಲಿ 384 ಚಿತ್ರಗಳು ಆಯ್ಕೆ ಬಯಸಿ ಬಂದಿದ್ದವು. ಈ ಪೈಕಿ 25 ಚಿತ್ರಗಳನ್ನು ಆಯ್ಕೆ ಮಾಡಿದ್ದು, ಈ 25 ಚಿತ್ರಗಳಲ್ಲಿ 2 ಮತ್ತು 3ನೇ ಚಿತ್ರಗಳಾಗಿ ಕನ್ನಡದ ‘ಕೆರೆಬೇಟೆ’ ಹಾಗೂ ‘ವೆಂಕ್ಯಾ’ ಚಿತ್ರಗಳು ಚಿತ್ರಗಳು ಸ್ಥಾನ ಪಡೆದುಕೊಂಡಿವೆ.
‘ಕೆರೆಬೇಟೆ’ ಚಿತ್ರದಲ್ಲಿ ಗೌರಿ ಶಂಕರ್ ನಾಯಕನಾಗಿ ನಟಿಸುವ ಜತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ನಾಕಿಯಾಗಿ ಬಿಂದು ಗೌಡ ನಟಿಸಿದ್ದು, ಗೋಪಾಲ್‌ಕೃಷ್ಣ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಮುಂತಾದವರು ನಟಿಸಿದ್ದಾರೆ. ಮಲೆನಾಡಿನ ಸೊಗಡನ್ನು ಬಿಂಬಿಸುವ ಸಿನಿಮಾ ಇದಾಗಿದೆ.
ಸಾಗರ್ ಪುರಾಣಿಕ್ ನಿರ್ದೇಶಿಸಿ, ನಟಿಸಿರುವ ‘ವೆಂಕ್ಯಾ’ ಚಿತ್ರವನ್ನು ನಿರ್ದೇಶಕ ಪವನ್ ಒಡೆಯರ್ ನಿರ್ಮಿಸಿದ್ದಾರೆ. ಶಿಮ್ಲಾ ಮೂಲದ ರೂಪಾಲಿ ಸೂದ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಉತ್ತರ ಕರ್ನಾಟಕ ಭಾಗದ ಕತೆಯನ್ನು ಹೇಳುವ ಸಿನಿಮಾ.
ಗೋವಾದ ಪಣಜಿಯಲ್ಲಿ ನಡೆಯುವ ಚಿತ್ರೋತ್ಸವಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯಾ ಅನೇಕ ಸಿನಿ ಗಣ್ಯರು ಸಾಕ್ಷಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಗೋವಾ ಚಿತ್ರೋತ್ಸವದಲ್ಲಿ ಕನ್ನಡದ ಎರಡೂ ಚಿತ್ರಗಳು ಪ್ರದರ್ಶನ ಕಾಣುತ್ತಿರುವುದು ವಿಶೇಷ.