ಪೈರಸಿಗೆ ಹೆದರುವಷ್ಟುಚಿತ್ರರಂಗ ಬೇರೆ ಯಾವುದಕ್ಕೂ ಹೆದರುವುದಿಲ್ಲ. ಯಾರು ಏನು ಮಾಡಿದರೂ ಪೈರಸಿ ತಡೆಯುವುದಕ್ಕೆ ಆಗುತ್ತಲೇ ಇಲ್ಲ. ಇಂಥಾ ಹೊತ್ತಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರೀಕರಣ ಮಾಡುವುದನ್ನು ತಪ್ಪಿಸಲು ಕಾಂಟ್ರಪೈನ್ ಸಂಸ್ಥೆ ಹೊಸತೊಂದು ಸಾಫ್ಟ್‌ವೇರ್ ಕಂಡುಹಿಡಿದಿದೆ. ನಂ.26ರಂದು ಬಿಡುಗಡೆಯಾಗುತ್ತಿರುವ ಈ ಸಾಫ್ಟ್‌ವೇರ್ ಹೇಗೆ ಕಾರ್ಯ ನಿರ್ವಹಿಸುತ್ತದೆ, ಹೇಗೆ ಪೈರಸಿ ತಡೆಯುತ್ತದೆ ಎಂಬ ಪೂರ್ತಿ ವಿವರ ಇಲ್ಲಿದೆ.
ಈ ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ?
- ಈ ಹೊಸ ಸಾಫ್ಟ್‌ವೇರ್ ಒಳಗೊಂಡ ಉಪಕರಣವನ್ನು ಚಿತ್ರಮಂದಿರದಲ್ಲಿರುವ ಸ್ಪೀಕರ್‌ಗಳ ಬಳಿ ಅಳವಡಿಸಲಾಗುತ್ತದೆ. ಚಿತ್ರಮಂದಿರದ ಸೀಟು, ಅದರ ವಿಸ್ತೀರ್ಣ, ಸೌಂಡ್ ವ್ಯಾಪ್ತಿಯನ್ನು ಆಧರಿಸಿ ಈ ಡಿವೈಸ್‌ಗಳನ್ನು ಅಳವಡಿಸಬೇಕು.
- ಈ ಡಿವೈಸ್‌ನಿಂದಾಗಿ ಯಾರಾದರೂ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದರೂ ಆಡಿಯೋ ಕೇಳಿಸುವುದಿಲ್ಲ. ಕೇವಲ ದೃಶ್ಯಗಳನ್ನು ಮಾತ್ರ ಸೆರೆ ಹಿಡಿಯಬಹುದು.
ಫೇಸ್‌ಬುಕ್‌ನಲ್ಲಿ ಫ್ರೆಂಚ್ ಬಿರಿಯಾನಿ, ಕನ್ನಡಕ್ಕೆ ತಪ್ಪದ ಪೈರಸಿ ಕಾಟ!
- ದೃಶ್ಯಗಳನ್ನು ಸೆರೆ ಹಿಡಿಯಲು ಮೊಬೈಲ್ ಕ್ಯಾಮೆರಾ ಆನ್ ಮಾಡಿದರೆ ಆ ಮಾಹಿತಿಯನ್ನು ತಕ್ಷಣ ತಲುಪಿಸುವಂತಹ ಕ್ಯಾಮೆರಾ ಕೂಡ ಈ ಹೊಸ ಸಾಫ್ಟ್‌ವೇರ್ ಜತೆ ಅಳವಡಿಸಲಾಗುತ್ತದೆ. ಹಾಗಾಗಿ ಯಾರಾದರೂ ಕದ್ದು ರೆಕಾರ್ಡ್ ಮಾಡಿದರೂ ತಕ್ಷಣ ತಿಳಿಯುತ್ತದೆ.
- ಸದ್ಯಕ್ಕೆ ಪ್ರಾಯೋಗಿಕವಾಗಿ ಬೆಂಗಳೂರಿನ ಚಿತ್ರಮಂದಿರಗಳಿಗೆ ಈ ಹೊಸ ಸಾಫ್ಟ್‌ವೇರ್ ಡಿವೈಸ್‌ಗಳನ್ನು ಅಳವಡಿಸಲಾಗುತ್ತದೆ.
- ಪ್ರಯೋಗ ಯಶಸ್ವಿಯಾದರೆ ಮುಂದೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಿಗೂ ಈ ಸಾಫ್ಟ್‌ವೇರ್ ಬರಲಿದೆ.
-ಈ ಸಾಫ್ಟ್‌ವೇರ್ ಐಡಿಯಾ ಕೊಟ್ಟಿದ್ದು ರಾಹುಲ್ ರೆಡ್ಡಿ. ಇಂಜಿನಿಯರ್ ಅಶ್ವಿನ್ ಈ ಸಾಫ್ಟ್‌ವೇರ್ ಡೆವಲಪ್ ಮಾಡಿದ್ದಾರೆ. ಕಾಂಟ್ರಪೈನ್ ಸಂಸ್ಥೆ ಈ ಸಾಫ್ಟ್‌ವೇರ್ ಸಿದ್ಧಪಡಿಸಿದೆ.
ಇವರ ಹೆಸರು ಕೇಳಿದ್ರೆ ಸೂಪರ್ ಸ್ಟಾರ್ ಗಳೇ ಹೆದರುತ್ತಾರೆ!
ನ.26ರಂದು ಬಿಡುಗಡೆ
ಈ ಹೊಸ ತಂತ್ರಜ್ಞಾನ ನ.26ರಂದು ಅಧಿಕೃತವಾಗಿ ಉದ್ಘಾಟನೆ ಮಾಡಲಾಗುತ್ತಿದೆ. ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಚಾಲನೆ ನೀಡಲಿದ್ದಾರೆ. ಖ್ಯಾತ ಉದ್ಯಮಿ ನಂದೀಶ್ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ನಿರ್ಮಾಪಕ ಜಯಣ್ಣ, ಉಮಾಪತಿ ಶ್ರೀನಿವಾಸಗೌಡ, ಬಾ ಮ ಹರೀಶ್, ನಿರ್ದೇಶಕರುಗಳಾದ ರಾಜೇಂದ್ರಸಿಂಗ್‌ಬಾಬು, ದಿನಕರ ತೂಗುದೀಪ, ಬಿಆರ್ ಕೇಶವ, ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್, ಸಾರಾ ಗೋವಿಂದು, ಸಾಧು ಕೋಕಿಲಾ ಉಪಸ್ಥಿತರಿರುತ್ತಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 24, 2020, 9:22 AM IST