ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಿಂದ ಹೆಸರುವಾಸಿಯಾದ ಅಮೃತಾ ಅಯ್ಯಂಗಾರ್, ಲವ್ ಮಾಕ್ಟೇಲ್ 2 ಯಶಸ್ಸಿನ ನಂತರ ತಮ್ಮ ತಾಯಿಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಅವರ ತಾಯಿ ಸ್ವತಂತ್ರ ಮಹಿಳೆಯಾಗಿದ್ದು, 28 ವರ್ಷಗಳಿಂದ ಅಮೃತಾ ಅವರನ್ನು ಒಬ್ಬಂಟಿಯಾಗಿ ಬೆಳೆಸಿದ್ದಾರೆ. ತಂದೆ ಜೊತೆಗಿಲ್ಲದಿದ್ದರೂ, ತಾಯಿ ತನ್ನೆಲ್ಲಾ ಮಕ್ಕಳಿಗಾಗಿ ದುಡಿದು, ತನ್ನ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದು ಅಮೃತಾ ಹೇಳಿದ್ದಾರೆ.

ಪಾಪ್‌ ಕಾರ್ನ್‌ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಮೃತಾ ಅಯ್ಯಂಗಾರ್ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಲವ್ ಮಾಕ್ಟೇಲ್ 2 ನಿಜಕ್ಕೂ ಬಿಗ್ ಟರ್ನಿಂಗ್ ಪಾಯಿಂಟ್ ಆಗಿತ್ತು. ತಮ್ಮ ಅಯ್ಕೆಗಳ ಬಗ್ಗೆ ಸಿಕ್ಕಾಪಟ್ಟೆ ಕ್ಲಾರಿಟಿ ಇರುವ ಅಮೃತಾ ಅಯ್ಯಂಗಾರ್ ತಾಯಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. 

'ನನ್ನೆಲ್ಲಾ ಫ್ರೆಂಡ್ಸ್‌ ನನ್ನ ತಾಯಿಯನ್ನು ಡಾನ್ ಅಂತ ಕರೀತಾರೆ. ನನ್ನ ತಾಯಿ ಇಂಡಿಪೆಂಡೆಂಟ್‌, ಸೆಲ್ಫ್‌ ಮೇಡ್‌ ಮಹಿಳೆ. 28 ವರ್ಷಗಳಿಂದ ನನ್ನನ್ನ ನನ್ನ ತಾಯಿ ಒಬ್ಬರೇ ನೋಡಿಕೊಂಡಿದ್ದಾರೆ. ನಾನು ಸಿಂಗಲ್ ಪೇರೆಂಟ್ ಕಿಡ್. ನನ್ನ ತಾಯಿಗೆ 19 ವರ್ಷ ವಯಸ್ಸಿದ್ದಾಗಿನಿಂದಲೂ ದುಡಿಯುತ್ತಾ ಬಂದಿದ್ದಾರೆ. ನನ್ನ ತಂದೆ ಬದುಕಿದ್ದಾರೆ ಆದರೆ ನಮ್ಮ ಜೊತೆಗಿಲ್ಲ. ಮದುವೆಯಾದ್ಮೇಲೆ ಅಮ್ಮನಿಗೆ ಕೆಲವು ವಿಷಯಗಳು ಗೊತ್ತಾದವು. ಹೀಗಾಗಿ ಒಂದಿನ ಡಿಸೈಡ್ ಮಾಡಿದ್ದಾರೆ...ನಂಗೆ ಈ ಮನುಷ್ಯನ ಜೊತೆ ಇರೋಕ್ಕಾಗಲ್ಲ ಅಂತ. ಅಂದಿನಿಂದ 26 ವರ್ಷ ಆಯ್ತು ಒಂದು ದಿನವೂ ನನ್ನ ತಾಯಿ ನನ್ನ ತಂದೆಯ ಮುಖವನ್ನ ನೋಡಿಲ್ಲ. ನನ್ನ ತಾಯಿ ಸ್ಟ್ರಾಂಗ್ ಹೆಡೆಡ್‌ ವುಮೆನ್. ನನ್ನ ತಂದೆ ತಾಯಿ ಬೇರೆ ಬೇರೆ ಆದಾಗ ನಂಗಿನ್ನೂ 5 ವರ್ಷ ವಯಸ್ಸು' ಎಂದು ಆರ್‌ಜೆ ರಾಜೇಶ್ ಸಂದರ್ಶನದಲ್ಲಿ ಅಮೃತಾ ಅಯ್ಯಂಗಾರ್ ಮಾತನಾಡಿದ್ದಾರೆ. 

ಪವಿತ್ರಾ ಗೌಡ ಅಂಗಡಿಯಲ್ಲಿ ಸ್ಪೆಷಲ್ ಗಿಫ್ಟ್‌ ಖರೀದಿಸಿದ 'ಕಾಮಿಡಿ ಕಿಲಾಡಿಗಳು' ಮಂಥನ; ಎಲ್ಲರೂ ಶಾಕ್

'ಅದಾದ್ಮೇಲೆ ನಾನು ನನ್ನ ತಂದೆಯನ್ನ ಭೇಟಿ ಆಗಿದ್ದೇನೆ ಆದರೆ ಅಮ್ಮ ಬಂದಿಲ್ಲ. ಅಮ್ಮ ಹೇಳ್ತಾರೆ ನನಗೂ ಅವರಿಗೂ ಸಮಸ್ಯೆ ಇದೆ ನಿನಗೂ ಅವರಿಗೂ ಅಲ್ಲ. ನೀನು ಹೋಗಿ ಬೇಟಿ ಮಾಡು ಅಂತ. ನಾನು ಈಗಲೂ ಅಪ್ಪನ ಜೊತೆ ಚೆನ್ನಾಗಿಮಾತನಾಡುತ್ತೇನೆ. ಇವತ್ತಿಗೂ ನನ್ನ ತಾಯಿ ಬಸ್‌ನಲ್ಲಿ ಓಡಾಡುತ್ತಾರೆ. ಆಟೋದಲ್ಲಿ ಓಡಾಡಿ ಖರ್ಚು ಮಾಡಲ್ಲ. ಸುಸ್ತಾದರೂ ಎಳೆನೀರು ಕುಡಿಯಲ್ಲ. ಪ್ರತಿಯೊಂದ ರೂಪಾಯಿಯನ್ನು ನನಗಾಗಿ ಉಳಿಸುತ್ತಾರೆ. ಅವರು ಇಡೀ ಜೀವನವನ್ನೇ ನನಗಾಗಿ ಡೆಡಿಕೇಟ್ ಮಾಡಿದ್ದಾರೆ. ಅವರಿಗೆ 19 ವರ್ಷ ವಯಸ್ಸಿದ್ದಾಗಿನಿಂದ ದುಡಿಯೋಕೆ ಶುರು ಮಾಡಿ ಇಬ್ಬರು ತಂಗಿಯರು ಮೂವರು ತಮ್ಮಂದಿರ ಮದುವೆ ಮಾಡಿದ್ದಾರೆ. ಟೀಚರ್ ಆಗಿ 40 ವರ್ಷ ಸರ್ವಿಸ್‌ ಆಗಿದೆ. ನನಗೆ ನನ್ನ ತಾಯಿಯೇ ಡೊಡ್ಡ ಮೋಟಿವೇಷನ್. ನನ್ನ ತಾಯಿ ಇನ್ನೊಂದು ಮದುವೆ ಅಗಬಹುದಿತ್ತು. ಆದರೆ ನನಗೆ ಒಬ್ಬಳು ಹೆಣ್ಮಗಳು ಇದ್ದಾಳೆ. ಅವಳನ್ನು ಅವನು ಯಾವ ದೃಷ್ಟಿಯಲ್ಲಿ ನೋಡ್ತಾನೋ ಅಂತ 25 ವರ್ಷದಿಂದ ಒಬ್ಬರೇ ದುಡಿಯುತ್ತಿದ್ದಾರೆ. ಅಮ್ಮನ ಕಷ್ಟ ನನಗೆ ಈಗ ಗೊತ್ತಾಗುತ್ತಿದೆ' ಎಂದು ಅಮೃತಾ ಅಯ್ಯಂಗಾರ್ ಹೇಳಿದ್ದಾರೆ. 

ಆರೇಂಜ್‌ ಸೀರೆಯಲ್ಲಿ ಮಿಂಚಿದ ಕಾವ್ಯಾ ಗೌಡ; ಬೇರೆಯವರ ಮದ್ವೆಗೆ ರೆಡಿ ಆಗೋಕೆ ಬೇಜಾರ್ ಆಗಲ್ವಾ ಎಂದ ಫ್ಯಾನ್ಸ್