ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಂಥನ, ನಟಿ ಪವಿತ್ರಾ ಗೌಡ ಅವರ 'ರೆಡ್‌ ಕಾರ್ಪೆಟ್ 777' ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಸುದ್ದಿಯಲ್ಲಿದ್ದ ಪವಿತ್ರಾ ಗೌಡ, ಇತ್ತೀಚೆಗಷ್ಟೇ ಸ್ಟುಡಿಯೋವನ್ನು ಪುನಃ ತೆರೆದಿದ್ದಾರೆ. ಮಂಥನ ತಮ್ಮ ಹುಟ್ಟುಹಬ್ಬಕ್ಕೆ ವಿಶೇಷ ಉಡುಪನ್ನು ಪವಿತ್ರಾ ಗೌಡ ಅವರಿಂದ ಉಡುಗೊರೆಯಾಗಿ ಪಡೆದಿದ್ದಾರೆ. ಈ ಭೇಟಿಯ ಫೋಟೋಗಳನ್ನು ಮಂಥನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಅದೆಷ್ಟೋ ಜನ ಸಾಮಾನ್ಯರು ಬೆಳಕಿಗೆ ಬಂದರು. ಸೀಸನ್ 2ರಲ್ಲಿ ಮಂಥನ ಸ್ಪರ್ಧಿಸಿದ್ದರು. ಫಿನಾಲೆ ಮುಟ್ಟದಿದ್ದರೂ ಕನ್ನಡಿಗರ ಮನಸ್ಸಿಗೆ ಹತ್ತಿರವಾದರು. ಅದಾದ ಮೇಲೆ ಅಲ್ಲೊಂದು ಇಲ್ಲೊಂದು ಶೋಗಳನ್ನು ನೀಡುತ್ತಾ ಮಂಥನ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟರು. ಸಖತ್ ಹಾಟ್‌ ಫೋಟೋಗಳನ್ನು ಅಪ್ಲೊಡ್ ಮಾಡಿ ಸುದ್ದಿಯಲ್ಲಿ ಇರುವ ಮಂಥನ ಈಗ ಡಿಸೈನರ್ ಉಡುಪು ಖರೀದಿಸಿರುವುದಾಗಿ ಬರೆದುಕೊಂಡಿದ್ದಾರೆ. ಆಶ್ಚರ್ಯ ಏನೆಂದರೆ ಪಕ್ಕದಲ್ಲಿ ಇರುವುದು ಪವಿತ್ರಾ ಗೌಡ. 

ಹೌದು! ರಾಜರಾಜೇಶ್ವರಿ ನಗರದಲ್ಲಿ ನಟಿ ಪವಿತ್ರಾ ಗೌಡ 'ರೆಡ್‌ ಕಾರ್ಪೆಟ್ 777' ಸ್ಟುಡಿಯೋ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಾದ ಅಂಗಡಿ ಬಂದ್ ಮಾಡಿದ್ದರು. ಜಾಮೀನು ಪಡೆದು ಹೊರ ಬರುತ್ತಿದ್ದಂತೆ ಸಣ್ಣ ಪುಟ್ಟ ಕೆಲಸ ಶುರು ಮಾಡಿಸಿ ಫೆಬ್ರವರಿ 14 ಸ್ಟುಡಿಯೋ ಓಪನಿಂಗ್ ಮಾಡಿದ್ದರು. ಈಗ ಅದೇ ಅಂಗಡಿಗೆ ಮಂಥನ ತಮ್ಮ ಪ್ರೀತಿ ಪಾತ್ರರೊಂದಿಗೆ ಭೇಟಿ ನೀಡಿದ್ದಾರೆ. ತಮ್ಮ ಜೀವನ ಸ್ಪೆಷಲ್ ವ್ಯಕ್ತಿಯಿಂದ ಸ್ಪೆಷಲ್ ಉಡುಕೊರೆ ಗಿಫ್ಟ್ ಆಗಿ ಪಡೆದಿರುವುದಾಗಿ ಬರೆದುಕೊಂಡಿದ್ದಾರೆ. ಅಂಗಡಿಗೆ ಭೇಟಿ ನೀಡಿದಾಗ ಪವಿತ್ರಾ ಇದ್ದ ಕಾರಣ ಒಂದೆರಡು ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. 

ಒಂದು ಸಲ ಗಂಡ ತರುಣ್ ಬರೋದು ಮತ್ತೊಂದ ಸಲ ಹೆಂಡ್ತಿ ಸೋನಲ್‌ ಬರೋದಿ, ಏನ್ ಸಂಸಾರನೇ ಮಾಡ್ಬಾರ್ದಾ: ಕುರಿ ಪ್ರತಾಪ್

'ನನ್ನ ಜೀವನದ ಕನಸು ನನಸು ಆಗುವ ಸಮಯ ಬಂದಿದೆ ಅದುವೇ ಅದ್ಭುತ ಟ್ಯಾಲೆಂಟ್ ಇರುವ ಡಿಸೈನರ್ ಪವಿತ್ರಾ ಗೌರ ಅವರಿಂದ. ಅವರು ತೋರಿಸುವ ಆಥಿತ್ಯ ಹಾಗೂ ಬಟ್ಟೆಗಳ ಮೇಲೆ ಮಾಡಿರುವ ಕೆಲಸ ನಿಜಕ್ಕೂ ಸೂಪರ್. ನನ್ನ ಬರ್ತಡೇ ಬಟ್ಟೆ ಮೇಲೆ ಇರುವ ಪ್ರತಿಯೊಂದು ಡಿಸೈನರ್ ಸೂಪರ್ ಆಗಿದೆ. ನಾನು ತಡವಾಗಿ ಬಂದರೂ ಕೂಡ ಕಾದು ಸೂಪರ್ ಸೆಲೆಕ್ಷನ್ ಮಾಡಿದ್ದರು. ನಿಜಕ್ಕೂ ಒಳ್ಳೆಯ ಮನಸ್ಸಿನವರು ನೀವು. ಈಗ ನಾನು ಆಯ್ಕೆ ಮಾಡಿರುವ ಉಡುಗೆ ತುಂಬಾನೇ ಸ್ಪೆಷಲ್ ಹಾಗೂ ಬೆಲೆ ಕಟ್ಟಲು ಆಗದು ಕಾರಣ ನನ್ನ ಲವ್ ಕೊಡಿಸಿದ್ದು. ಥ್ಯಾಂಕ್ಸ್‌ ಯು ಬೂ. ನನ್ನ ಹುಟ್ಟುಹಬ್ಬ ಸ್ಪೆಷಲ್ ಮಾಡುತ್ತಿರುವುದಕ್ಕೆ. ನನಗೆ ಆಗುತ್ತಿರುವ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನನ್ನ ಹುಟ್ಟಹಬ್ಬವನ್ನು ಸ್ಟೈಲ್‌ನಲ್ಲಿ ಆಚರಣ ಮಾಡಲು ಕಾಯುತ್ತಿರುವೆ. ಥ್ಯಾಂಕ್ಸ್‌ ಪವಿತ್ರಾ ಮೇಡಂ' ಎಂದು ಮಂಥನ ಬರೆದುಕೊಂಡಿದ್ದಾರೆ. 

6 ವರ್ಷ ಸೀರಿಯಲ್‌ ಬಿಟ್ಟಿದ್ರೂ ಅವಕಾಶ ಬಂತು ಆದರೆ ನಾನು ಕಂಡಿಷನ್ ಹಾಕಿದೆ: 'ಭಾಗ್ಯ ಲಕ್ಷ್ಮಿ' ಕಾವೇರಿ

View post on Instagram