ಸ್ಯಾಂಡಲ್‌ವುಡ್‌ ಮನೆ ಮಗಳು, ಮೇಘನಾ ರಾಜ್‌ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಗುಡ್‌ ನ್ಯೂಸ್‌ವೊಂದನ್ನು ರಿವೀಲ್ ಮಾಡಿರುವುದಾಗಿ ಸೂಚನೆ ನೀಡುತ್ತಿದ್ದರು. ಇದೀಗ ಏನೆಂದು ರಿವೀಲ್ ಮಾಡಿದ್ದಾರೆ.

ತಿಂಗಳ ನಂತರ ಸ್ನೇಹಿತರ ಜೊತೆ ಕಾಣಿಸಿಕೊಂಡ ಮೇಘನಾ ರಾಜ್! 

ಮೇಘನಾ ಫೋಸ್ಟ್:
'Jr C, ನಮ್ಮ ಸಿಂಬಾ.  ನೀವೆಲ್ಲರೂ ನಮ್ಮ ಪುಟ್ಟ ಕಂದಮ್ಮನನ್ನು ನೋಡಲು ಕಾತುರಳಾಗಿದ್ದೀರಿ,' ಎಂದು ಬರೆದುಕೊಂಡ ಮೇಘನಾ ರಾಜ್. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಇಷ್ಟು ವರ್ಷದಲ್ಲಿ ಸೆರೆ ಹಿಡಿದ ಹಲವು ಫೋಟೋಗಳನ್ನು ಕೊಲ್ಯಾಜ್ ಮಾಡಿ, ಆ ನಂತರ ಪೂರ್ತಿ ಮುಖ ಕಾಣಿಸಿದ ಪುತ್ರನ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಹಂಚಿಕೊಂಡು ಹಾಯ್‌ ಹೇಳಿರುವ ಧ್ವನಿ ಕೇಳಿಸಿದ್ದಾರೆ. 'ಇದೀಗ ನೀವು ಅವನ ಧ್ವನಿ ಕೇಳಿದ್ದೀರಾ. ಇದೇ ಫೆ.14 ಅವನನ್ನು ನೋಡಿ ಹಾಯ್ ಹೇಳಬಹುದು,' ಎಂದು ವಿಡಿಯೋ ಅಂತ್ಯದಲ್ಲಿ ಬರೆಯಲಾಗಿದೆ.  

"

ಮೇಘನಾ ಸಿಹಿ ವಿಚಾರ ಹಂಚಿಕೊಳ್ಳುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರು ಕೂಡ ಅಪ್ಡೇಟ್ ನೀಡುತ್ತಿದ್ದರು. ಪುತ್ರನ ಫೋಟೋನೇ ನೋಡಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಧ್ವನಿ ಮಾತ್ರ ಕೇಳಿಸಿದೆ.  ಇತ್ತೀಚಿಗೆ ಜೂನಿಯರ್ Cಗೆ ಪೋಲಿಯೋ ಲಸಿಕೆ ಹಾಕಿಸುತ್ತಿರುವ ಫೋಟೋ ಹಂಚಿ ಕೊಂಡಿದ್ದರು. ಪುತ್ರನ ಕೈ ಬೆರಳು ತೋರಿಸಿ, ಕ್ರಿಸ್ಮಸ್‌ ಶುಭಾಶಯಗಳನ್ನು ತಿಳಿಸಿದ್ದರು. ಪ್ರೇಮಿಗಳ ದಿನದಂದು ಸರ್ಜಾ ಕುಟುಂಬದಿಂದ ಸ್ಪೆಷಲ್ ಫೋಟೋ ರಿವೀಲ್ ಆಗುವುದು ಕನ್ಫರ್ಮ್ ಆಗಿದೆ.

ಮೇಘನಾ ರಾಜ್‌ ಪುತ್ರನಿಗೆ ಸಿಗ್ತು ಮತ್ತೊಂದು ಸ್ಪೆಷಲ್ ಗಿಫ್ಟ್‌: ಜೂನಿಯರ್ C ಫುಲ್ ಖುಷ್! 

ಕಳೆದ ವರ್ಷ ಜೂನ್ 8ರಂದು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದ ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ಐದು ತಿಂಗಳ ಗರ್ಭಿಣಿಯಾಗಿದ್ದರು.

 

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)