ಜೂನಿಯರ್ ಚಿರು ಆರೈಕೆಯಲ್ಲಿ ಬ್ಯುಸಿಯಾಗಿರುವ ನಟಿ ಮೇಘನಾ ರಾಜ್ ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆ ಭೋಜನ ಸವಿದಿದ್ದಾರೆ.ರಾಗಿಣಿ ಪ್ರಜ್ವಲ್ ಹಾಗೂ ಪನ್ನಗಾ ಭರಣ ಶೇರ್ ಮಾಡಿಕೊಂಡ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮೇಘನಾ, ಚಿರು ಹಾಗೂ ಬೇಬಿ ಸಿ ಯಾವುದೇ ವಿಚಾರ ಇದ್ದರೂ, ಫ್ಯಾನ್ ಪೇಜ್‌ನಲ್ಲಿ ಮೊದಲು ಕಾಣಬಹುದು.

ಮೇಘನಾ ರಾಜ್‌ ಪುತ್ರನಿಗೆ ಸಿಗ್ತು ಮತ್ತೊಂದು ಸ್ಪೆಷಲ್ ಗಿಫ್ಟ್‌: ಜೂನಿಯರ್ C ಫುಲ್ ಖುಷ್! 

ಪ್ರಜ್ವಲ್ ದೇವರಾಜ್, ರಾಗಿಣಿ ಚಂದ್ರನ್, ಪನ್ನಗಾ ಭರಣ, ನಿಕಿತಾ ಸೇರಿದಂತೆ ಚಿರುಗಿದ್ದ ಎಲ್ಲಾ ಆಪ್ತ ಗೆಳೆಯರು ಒಂದಾಗಿ ಹೋಟೆಲ್‌ನಲ್ಲಿ ಭೇಟಿ ಮಾಡಿದ್ದಾರೆ. ತೊಟ್ಟಿಲು ಶಾಸ್ತ್ರದ ನಂತರ ಮೇಘನಾ ಈಗಲೇ ಕ್ಯಾಮೆರಾ ಎದುರು ಬಂದಿರುವುದು. ರಾಗಿಣಿ ಚಂದ್ರನ್ ಹಾಗೂ ಪನ್ನಗಾ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾರೆ. ಈ ವೇಳೆ ಮೇಘನಾ ಆರೋಗ್ಯದ ಬಗ್ಗೆ ಏನೇ ಕೇಳಿದ್ದರೂ ಉತ್ತರ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಬೇಬಿ Cಗೆ ಪೋಲಿಯೊ ಹಾಕಿಸಲಾಗಿತ್ತು, ಪುಟ್ಟ ಕಂದಮ್ಮ ಬೇರ ಮೇಲೆ ಇಂಕ್ ಮಾರ್ಕ್‌ ನೋಡಿ ಮೇಘನಾ ಸಂತಸ ಪಟ್ಟರು. 

ಪುತ್ರನ ಬೆರಳು ಹಿಡಿದ ಮೇಘನಾ ರಾಜ್; Baby Ma ಕೊಟ್ಟ ಬೆಸ್ಟ್‌ ಗಿಫ್ಟ್‌! 

ಮಗನ ಜೊತೆ ಬ್ಯುಸಿಯಾಗಿರುವ ಮೇಘನಾ ರಾಜ್‌ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವುದರ ಬಗ್ಗೆ ಈ ಹಿಂದೆ ಸಂದರ್ಶವೊಂದರಲ್ಲಿ ಹೇಳಿದ್ದರು. ಬಣ್ಣವೇ ಬದುಕು ಎಂದು ಭಾವಿಸಿರುವ ನಟಿ ಎಂದಿಗೂ ಚಿತ್ರರಂಗದಿಂದ ದೂರು ಉಳಿಯುವುದಿಲ್ಲ ಎಂಬ ಭರವಸೆ ನೀಡಿದ್ದಾರೆ . ಇದೇ ಫೆಬ್ರವರಿ 19ರಂದು ಧ್ರುವ ಸರ್ಜಾ ಪೊಗರು ಸಿನಿಮಾ ರಿಲೀಸ್ ಆಗಲಿದ್ದು, ಮೇಘನಾ ಕೂಡ ಕೆಲವೊಂದು ಫೋಟೋ ಹಾಗೂ ವಿಡಿಯೋ ಶೇರ್ ಮಾಡುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ.