ಪುತ್ರನ ಆರೈಕೆಯಲ್ಲಿ ಬ್ಯುಸಿಯಾಗಿರುವ ನಟಿ ಮೇಘನಾ ರಾಜ್‌ ಮನೆಗೆ ಅಭಿಮಾನಿಗಳು ತಂದು ಕೊಡುತ್ತಿರುವ ಡಿಫರೆಂಟ್ ಉಡುಗೊರೆಗಳನ್ನು ಜೋಪಾನವಾಗಿ ಎತ್ತಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಗ ಪಡೆದ ಸ್ಪೆಷಲ್ ಗಿಫ್ಟ್‌ ಬಗ್ಗೆ ಬರೆದುಕೊಂಡಿದ್ದಾರೆ.

ಪುತ್ರನ ಬೆರಳು ಹಿಡಿದ ಮೇಘನಾ ರಾಜ್; Baby Ma ಕೊಟ್ಟ ಬೆಸ್ಟ್‌ ಗಿಫ್ಟ್‌! 

ಮೇಘನಾ ಪೋಸ್ಟ್:
'ಸಂತೋಷದ ಕ್ಷಣವನ್ನು ಕಾಪಾಡಿಕೊಳ್ಳಬೇಕೆಂದರೆ ಫ್ರೇಮ್ ಮಾಡಿಡಬೇಕು. ಈ ಗಿಫ್ಟ್‌ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್. ಆ ಪುಟ್ಟ ಕೈ-ಕಾಲುಗಳನ್ನು ಸದಾ ಚಿರಂಜೀವಿಯಾಗಿಡಲು ಸಹಾಯ ಮಾಡಿದೀರಾ. ಖಂಡಿತವಾಗಿಯೂ ಜೂನಿಯರ್ ಸಿ ಇದನ್ನು ಇಷ್ಟ ಪಡುತ್ತಾನೆ,' ಎಂದು ಬರೆದುಕೊಂಡಿದ್ದಾರೆ.

ಮಕ್ಕಳ ಪಾದ ಹಾಗೂ ಹಸ್ತವನ್ನು ವ್ಯಾಕ್ಸ್‌ವೊಳಗೆ ಅದ್ದಿ ಕೊಂಚ ಸಮಯದ ನಂತರ ಅದರಿಂದ ತೆರೆದರೆ ಅದೇ ಶೇಪ್ ಬರುತ್ತದೆ. ಸಣ್ಣ ಪುಟ್ಟ ಕಾರ್ವಿಂಗ್ ಮಾಡಿ ಬಣ್ಣ ಹಚ್ಚಿಕೊಡಲಾಗುತ್ತದೆ. ಇದನ್ನು ಫ್ರೇಮ್‌ ಮಾಡಿ ಅನಿಲಾ ಎಂಬುವರು ಮೇಘನಾಗೆ ಗಿಫ್ಟ್ ಮಾಡಿದ್ದಾರೆ.

ಅರ್ಜುನ್‌ ಸರ್ಜಾ ನಿಶ್ಚಿತಾರ್ಥ; ಪುಟ್ಟ ಚಿರಂಜೀವಿ ಸರ್ಜಾ, ಅನು ಪ್ರಭಾಕರ್‌ ನೋಡಿ! 

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮೇಘನಾ ಪುತ್ರನ ಕೈ ಬೆರಳು ಹಿಡಿದ ಫೋಟೋ ಶೇರ್ ಮಾಡಿಕೊಂಡಿದ್ದರು. ಪುತ್ರನ ಫೋಟೋವನ್ನು ಸ್ಪೆಷಲ್ ರೀತಿಯಲ್ಲಿ ರಿವೀಲ್ ಮಾಡಬಹುದೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)