ಮಗು  ನೋಡಿದಾಗ ಮರುಭೂಮಿಯಲ್ಲಿ ನೀರು ನೋಡಿದ ಹಾಗೆ ಆಗಿದೆ. ಮಗು ನೋಡಿದಾಗ ಚಿರುವನ್ನು ನೋಡಿದ ಹಾಗೆ ಆಗುತ್ತದೆ ಎಂದು ಮೇಘನಾ ತಂದೆ ಹಿರಿಯ ನಟ ಸುಂದರ್ ರಾಜ್ ಹೇಳಿದ್ದಾರೆ.

ಆಸ್ಪತ್ರೆಯಿಂದ ಮೇಘನಾ ಡಿಸ್ಚಾರ್ಜ್ ಆಗಿದ್ದು ಮೇಘನಾ ತಂದೆ ಮಾತನಾಡಿದ್ದಾರೆ. ಏಳು ದಿನಗಳ ನಂತ್ರ ನಾನು ಮಾಧ್ಯಮದವರನ್ನ ಮೀಟ್ ಮಾಡ್ತಾ ಇದ್ದೇನೆ. ತಿರುಪತಿ ತಿಮ್ಮಪ್ಪನ ಹರಕೆಯಿಂದ ನನ್ನ ಮೊಮ್ಮಗ ಹುಟ್ಟಿದ್ದಾನೆ. ಕನ್ನಡದ ನೆಲದಲ್ಲಿ ಈ ಮಗು ದಸರಾ ಹಬ್ಬದ ಸಮಯದಲ್ಲಿ ಹುಟ್ಟಿರೋದು ಶುಭ ಸೂಚಕ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅರ್ಜುನ್ ಸರ್ಜಾ 'ಜೈ ಆಂಜನೇಯ' ಚಿತ್ರದಕ್ಕೆ ದಚ್ಚು ಗೆಸ್ಟ್ ರೋಲ್?

ನವೆಂಬರ್ 1ರಂದು ಮೇಘನಾ ಎಲ್ಲರ ಜೊತೆ ಮಾತನಾಡುತ್ತಾರೆ. ಕರೋನಾ ಇರೋದ್ರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು. ಧ್ರುವಾ ಸರ್ಜಾ ಶೋಮ್ಯಾನ್, ಅರ್ಜುನ್ ಜೆಂಟಲ್ ಮ್ಯಾನ್, ನಾನು ಮೊಮ್ಮಗನನ್ನು ಕಾಯುವ ವಾಚ್ ಮ್ಯಾನ್ ಎಂದಿದ್ದಾರೆ ಹಿರಿಯ ನಟ.

ಮಗಳನ್ನ ಕೊಟ್ಟು ಮದುವೆ ಮಾಡಿ ಜವಾಬ್ದಾರಿ ಮುಗಿಯಿತು ಅಂದುಕೊಳ್ಳವಾಗಲೇ ಚಿರು ಹೋಗಿ ಬಿಟ್ಟ. ಮದ್ವೆ ಆಗದೆ ಇದ್ರೆ ಯೋಚನೆ ಇರುತ್ತಿರಲಿಲ್ಲ. ಈ ರೀತಿಯಾಗಿ ಮಗಳನ್ನು ನೋಡೋಕೆ ಕಷ್ಟ ಆಗುತ್ತಿದೆ ಎಂದಿದ್ದಾರೆ.

ಹೇಗಿದೆ ಗೊತ್ತಾ ಜೂನಿಯರ್ ಚಿರು ಜಾತಕ; ಆ ಅಪರೂಪದ ಯೋಗ ಯಾವುದು?

ಆ ಕುಟುಂಬಕ್ಕೆ ಮಗನ ಕಳೆದು ಕೊಂಡ ನೋವಿದೆ. ದೇವರು ಸುಂದರವಾದ ಮಗಳನ್ನ ಕೊಟ್ಟ, ಆದರೆ ಸುಂದರವಾದ ಜೀವನ ಕೊಡಲಿಲ್ಲ. ಮಗು ಬೆಳೆಯುವವರೆಗೂ ನನಗೆ ಆಯಸ್ಸು ಕೊಡು ಅಂತ ಕೇಳುತ್ತೇನೆ ಎಂದಿದ್ದಾರೆ.

ಮಗುಗೆ ತಂದೆ ತಾಯಿ ಮೇಘನಾ. ಮಗುವಿಗೆ ಪ್ರೀತಿಯಿಂದ ಚಿಂಟೂ ಅಂತ ಕರೆಯುತ್ತಿದ್ದೇವೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಈ ರೀತಿ ಕರಿಯುತ್ತಿದ್ದೇವೆ. ಚಿರು ಪರವಾಗಿ ಮನೆಗೆ ಬಂದ ಅವನ ಮಗನನ್ನ ಗೋಧೂಳಿ ಮುಹೂರ್ತದಲ್ಲಿ ಮನೆಗೆ ಕರೆದುಕೊಂಡು ಬಂದಿದ್ದೇವೆ ಎಂದಿದ್ದಾರೆ. 

ಅಭಿಮಾನಿಗಳು ಎಡಿಟ್ ಮಾಡಿದ ಚಿರಂಜೀವಿ ಸರ್ಜಾ ಪುತ್ರನ ಫೋಟೋ ವೈರಲ್!

ನಾವು ಈ ಮಹೂರ್ತವನ್ನ ನೋಡಿ ಮಗುವನ್ನು ತೋರಿಸಬೇಕು ಅಂದು ಕೊಂಡಿದ್ದೇವೆ. ಧ್ರುವ ಮತ್ತು ಚಿರು ರಾಮ ಲಕ್ಷ್ಮಣ ರ ಹಾಗೆ ಇದ್ದರು. ಮಗು ಸರ್ಜಾ ಕುಟುಂಬಕ್ಕೆ ಸೇರಿದ್ದು ಆಗಿದ್ದರೂ ಮಗುವನ್ನ ನಾವೇ ಬೆಳಸುತ್ತೆವೆ. ತಾಯಿಯ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದಿದ್ದಾರೆ.

ಮಗುವನ್ನ ಮೇಘನಾ ಪಾಪು ಅಂತ ಕರೆಯುತ್ತಾರೆ. ಮಗುವಿನ ಮೂಗು ತುಂಬಾ ಚನ್ನಾಗಿದೆ. ಮೂರು ತಿಂಗಳ ನಂತ್ರ ಅದ್ದೂರಿಯಾಗಿ ನಾಮಕರಣ ಮಾಡುತ್ತೇವೆ ಎಂದಿದ್ದಾರೆ.