Asianet Suvarna News Asianet Suvarna News

Love You Rachchu: ಅಜಯ್-ರಚ್ಚು ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್

ಟೈಟಲ್ ಹಾಗೂ ಹಾಡುಗಳಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡಿರುವ ಚಿತ್ರ 'ಲವ್​ ಯು ರಚ್ಚು'. ಇದೇ ಮೊದಲ ಬಾರಿಗೆ ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ಒಟ್ಟಾಗಿ ಅಭಿನಯಿಸಿದ್ದು, ಇದೀಗ ಈ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಬೆಂಬಲ ಸಿಕ್ಕಿದೆ. 

love you rachchu movie trailer will release by dhruva sarja gvd
Author
Bangalore, First Published Dec 14, 2021, 5:30 PM IST

ಟೈಟಲ್ ಹಾಗೂ ಹಾಡುಗಳಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡಿರುವ ಚಿತ್ರ 'ಲವ್​ ಯು ರಚ್ಚು' (Love You Rachchu). ಇದೇ ಮೊದಲ ಬಾರಿಗೆ ಅಜಯ್‌ ರಾವ್‌ (Ajay Rao) ಮತ್ತು ರಚಿತಾ ರಾಮ್‌ (Rachita Ram) ಒಟ್ಟಾಗಿ ಅಭಿನಯಿಸಿದ್ದು ಇಬ್ಬರನ್ನು ತೆರೆಮೇಲೆ ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ 'ಮುದ್ದು ನೀನು' (Muddu Neenu) ಹಾಡಿನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಸೌಂಡ್ ಮಾಡಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಇದೀಗ ಈ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಬೆಂಬಲ ಸಿಕ್ಕಿದೆ. 

ಹೌದು! ಗುರು ದೇಶಪಾಂಡೆ (Guru Deshpande) ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶಂಕರ್ ರಾಜ್ (Shankar Raj) ಆ್ಯಕ್ಷನ್ ಕಟ್ ಹೇಳಿದ್ದು, 'ಲವ್ ಯು ರಚ್ಚು' ಚಿತ್ರದ  ಟ್ರೈಲರ್‌ನ್ನು ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ (Dhruva Sarja) ಲಾಂಚ್ ಮಾಡಲಿದ್ದಾರೆ. ಅಜಯ್ ರಾವ್ ಸ್ನೇಹಕ್ಕೆ ಹಾಗೂ ಈ ಸಿನಿಮಾದ, ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಪಕರಾಗಿರುವ ಗುರು ದೇಶಪಾಂಡೆ ಗೆಳೆತನಕ್ಕಾಗಿ ಧ್ರುವ ಇದೇ 16ರಂದು ಚಿತ್ರದ ಟ್ರೈಲರನ್ನು ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಗುರು ದೇಶಪಾಂಡೆ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು 'ಲವ್ ಯು ರಚ್ಚು' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಡಿಸೆಂಬರ್ 16 ಸಂಜೆ 6 ಗಂಟೆಗೆ ಸ್ಕ್ರೀನ್ 1, ಜಿ.ಟಿ ಮಾಲ್ ಎಂದು ಪೋಸ್ಟ್‌ ಮಾಡಿದ್ದಾರೆ.

Love You Rachchu: ಡಿಸೆಂಬರ್ 31ರಂದು ತೆರೆಮೇಲೆ ಬರಲಿದ್ದಾರೆ ಅಜಯ್-ರಚ್ಚು ಜೋಡಿ

ಕೆಲ ದಿನಗಳ ಹಿಂದೆಯಷ್ಟೇ 'ಲವ್ ಯು ರಚ್ಚು' ಸಿನಿಮಾದ ಟೈಟಲ್ ಸಾಂಗ್ (Title Track) 'ಓಯ್ ಡಿಂಪಲ್ ಡಿಂಪಲ್ ಹುಡುಗಿ, ನಿನ್ನ ಡಾರ್ಲಿಂಗ್ ಅನ್ಬೋದಾ.. ನಾ ಸೈಕಲ್ ಗ್ಯಾಪಲ್ಲಿ ಡೈಲಿ ಬಂದು ಲೈನ್ ಹಾಕ್ಬೋದಾ..' ಎಂಬ ಹಾಡು ಬಿಡುಗಡೆಯಾಗಿ, ಸಿನಿಪ್ರಿಯರಿಂದ ಸಖತ್ ಮೆಚ್ಚುಗೆ ಪಡೆದಿದೆ. ನಿರ್ದೇಶಕ ಹಾಗೂ ಗೀತ ರಚನೆಕಾರ ಭರ್ಜರಿ ಚೇತನ್ ಕುಮಾರ್ (Chethan Kumar) ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ನವೀನ್ ಸಜ್ಜು (Naveen Sajju) ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಸಂಗೀತ ನಿರ್ದೇಶಕ ಕದ್ರಿ ಮಂಜುನಾಥ್ (Kadri Manikanth) ಕ್ಯಾಚೀ ಟ್ಯೂನ್ ಹಾಕಿದ್ದಾರೆ. 

love you rachchu movie trailer will release by dhruva sarja gvd

'ಲವ್‌ ಯು ರಚ್ಚು' ಚಿತ್ರದಲ್ಲಿ ಅಜಯ್‌ ರಾವ್‌ ಮಗಳು ಚರಿಷ್ಮಾ (Charishma) ಬಾಲ ನಟಿಯಾಗಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಸನ್ನಿವೇಶವೊಂದರಲ್ಲಿ ಪುಟ್ಟ ಮಗುವೊಂದು ಅಭಿನಯಿಸಬೇಕಾಗಿತ್ತು. ನಮ್ಮ ಚಿತ್ರದ ನಾಯಕ ಅಜಯ್‌ ರಾವ್‌ ಮಗಳು ಚರಿಷ್ಮಾ ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾಳೆ, ಅವಳಿಂದ ಈ ಸನ್ನಿವೇಶ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಎಂದು ಇಡೀ ಚಿತ್ರತಂಡಕ್ಕೆ ಅನಿಸಿತು. ಅದರಂತೆ ಚರಿಷ್ಮಾ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಸಿನಿಮಾದಲ್ಲಿ ಚರಿಷ್ಮಾ ತುಂಬ ಕ್ಯೂಟ್‌ ಆಗಿ ಕಾಣುತ್ತಾಳೆ ಎಂದು ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಈ ಹಿಂದೆ ತಿಳಿಸಿದ್ದಾರೆ.

Love You Rachchu: ಡಿಂಪಲ್ ಹುಡುಗಿಗೆ ಡಾರ್ಲಿಂಗ್ ಎಂದು ಕರೆದ ಅಜಯ್‌ ರಾವ್‌

ಸಿನಿಮಾ ಆರಂಭದಲ್ಲಿಯೇ 'ಲವ್‌ ಯು ರಚ್ಚು' ಚಿತ್ರ ಸಾಕಷ್ಟು ಸುದ್ದಿ ಮಾಡಿತ್ತು. ಫೈಟರ್​ ವಿವೇಕ್​ ಅವರು ಸಾಹಸ ಚಿತ್ರೀಕರಣದ​ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್​ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.ಇನ್ನು 'ಲವ್‌ ಯು ರಚ್ಚು' ಚಿತ್ರ ರೊಮ್ಯಾಂಟಿಕ್ ಕಥಾಹಂದರವನ್ನೊಳಗೊಂಡಿದ್ದು, ಚಿತ್ರದ ಕಥೆಯನ್ನು ಶಶಾಂಕ್ (Shashank) ಬರೆದಿದ್ದಾರೆ. ಈ ಚಿತ್ರಕ್ಕೆ ಶಂಕರ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು,  ಕದ್ರಿ ಮಂಜುನಾಥ್ ಸಂಗೀತ ಸಂಯೋಜನೆಯಿದೆ. ಇದೇ ಡಿಸೆಂಬರ್ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿಈ ಚಿತ್ರ ಬೆಳ್ಳಿತೆರೆ ಮೇಲೆ ಬಿಡುಗಡೆಯಾಗಲಿದೆ. 
 

Follow Us:
Download App:
  • android
  • ios