Love You Rachchu: ಡಿಂಪಲ್ ಹುಡುಗಿಗೆ ಡಾರ್ಲಿಂಗ್ ಎಂದು ಕರೆದ ಅಜಯ್ ರಾವ್
'ಲವ್ ಯು ರಚ್ಚು' ಚಿತ್ರದ ಟೈಟಲ್ ಸಾಂಗ್ 'ಓಯ್ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ಬೋದಾ. ನಾ ಸೈಕಲ್ ಗ್ಯಾಪಲ್ಲಿ ಡೈಲಿ ಬಂದು ಲೈನ್ ಹಾಕ್ಬೋದಾ' ಎಂಬ ಸಾಲಿನ ಹಾಡು ಬಿಡುಗಡೆಯಾಗಿದ್ದು, 'ಭರ್ಜರಿ' ಚೇತನ್ ಕುಮಾರ್ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.
ಗುರು ದೇಶಪಾಂಡೆ (Guru Deshpande) ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಅಜಯ್ ರಾವ್ (Ajay Rao) ಮತ್ತು ರಚಿತಾ ರಾಮ್ (Rachita Ram) ಅಭಿನಯದ ಬಹು ನಿರೀಕ್ಷಿತ 'ಲವ್ ಯು ರಚ್ಚು' (Love You Rachchu) ಚಿತ್ರ ಡಿಸೆಂಬರ್ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ. ಇತ್ತೀಚೆಗೆ ಚಿತ್ರದ 'ಮುದ್ದು ನೀನು' (Muddu Neenu) ವಿಡಿಯೋ ಸಾಂಗ್ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸೌಂಡ್ ಮಾಡಿತ್ತು. ಇದೀಗ ಈ ಚಿತ್ರದ ಮತ್ತೊಂದು ಹಾಡು ಆನಂದ್ ಆಡಿಯೋ (Anand Audio) ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
'ಲವ್ ಯು ರಚ್ಚು' ಚಿತ್ರದ ಟೈಟಲ್ ಸಾಂಗ್ (Title Track) 'ಓಯ್ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ಬೋದಾ. ನಾ ಸೈಕಲ್ ಗ್ಯಾಪಲ್ಲಿ ಡೈಲಿ ಬಂದು ಲೈನ್ ಹಾಕ್ಬೋದಾ' ಎಂಬ ಸಾಲಿನ ಹಾಡು ಬಿಡುಗಡೆಯಾಗಿದ್ದು, 'ಭರ್ಜರಿ' ಚೇತನ್ ಕುಮಾರ್ (Chethan Kumar ) ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಕದ್ರಿ ಮಂಜುನಾಥ್ (Kadri Manikanth) ಸಂಗೀತ ಸಂಯೋಜನೆಯಿರುವ ಈ ಹಾಡು ನವೀನ್ ಸಜ್ಜು (Naveen Sajju) ಕಂಠಸಿರಿಯಲ್ಲಿ ಮೂಡಿಬಂದಿದೆ. ಈ ಹಾಡಿನಲ್ಲಿ ಅಜಯ್ ರಾವ್ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಡ್ಯಾನ್ಸ್ ಸಖತ್ ಆಗಿ ಮೂಡಿಬಂದಿದೆ. ವಿಶೇಷವಾಗಿ ಈ ಹಾಡಿಗೆ ಚಿತ್ರದ ನಾಯಕ ಅಜಯ್ ರಾವ್ ಅವರೇ ಕೊರಿಯೋಗ್ರಫಿ ಮಾಡಿದ್ದು, ಸಿನಿರಸಿಕರಿಂದ ಒಳ್ಳೆಯ ಮೆಚ್ಚುಗೆಯನ್ನು ಪಡೆದಿದೆ.
ಕಿಡಿ ಹಚ್ಚಿದ 'ಫಸ್ಟ್‌ನೈಟ್' ಹೇಳಿಕೆ: ರಚಿತಾ ರಾಮ್ ಕ್ಷಮೆಗೆ ಪಟ್ಟು
'ಲವ್ ಯು ರಚ್ಚು' ಚಿತ್ರ ರೊಮ್ಯಾಂಟಿಕ್ ಕಥಾಹಂದರವನ್ನೊಳಗೊಂಡಿದ್ದು, ಚಿತ್ರದ ಕಥೆಯನ್ನು ಶಶಾಂಕ್ (Shashank) ಬರೆದಿದ್ದಾರೆ. ಈ ಚಿತ್ರಕ್ಕೆ ಶಂಕರ್ ರಾಜ್ (Shankar Raj) ಆ್ಯಕ್ಷನ್ ಕಟ್ ಹೇಳಿದ್ದು, ಕದ್ರಿ ಮಂಜುನಾಥ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇದು ನನ್ನ ಪ್ರೊಡಕ್ಷನ್‌ನಲ್ಲಿ ಬರಬೇಕಿದ್ದ ಸಿನಿಮಾ. ಆದರೂ ಈ ಸಿನಿಮಾಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಚಿತ್ರದ ಮೇಕಿಂಗ್ ವೇಳೆ ಘರ್ಷಣೆಗಳಾಗಿವೆ. ಒಂದು ಡೈಮಂಡ್ ಹೊರಬರಬೇಕು ಅಂದರೆ ಅನೇಕ ಕಠಿಣತೆಗಳನ್ನು ಹಾದು ಬರುವುದು ಅನಿವಾರ್ಯ. ನಮ್ಮ ಈ ಸಿನಿಮಾ ರೆಕಾರ್ಡ್ ಕ್ರಿಯೇಟ್ ಮಾಡುವ ವಿಶ್ವಾಸ ಇದೆ. ಎಲ್ಲ ಸನ್ನಿವೇಶಗಳನ್ನೂ ಸಮಚಿತ್ತದಿಂದ ನಿಭಾಯಿಸುವ ಗಂಡನ ಪಾತ್ರವನ್ನಿಲ್ಲಿ ನಿಭಾಯಿಸಿದ್ದೇನೆ' ಎಂದು ಅಜಯ್ ರಾವ್ ಹೇಳಿದ್ದಾರೆ.
ಈ ಚಿತ್ರದಲ್ಲಿ ಅಜಯ್ ರಾವ್ ಮಗಳು ಚರಿಷ್ಮಾ (Charishma) ಬಾಲ ನಟಿಯಾಗಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಸನ್ನಿವೇಶವೊಂದರಲ್ಲಿ ಪುಟ್ಟ ಮಗುವೊಂದು ಅಭಿನಯಿಸಬೇಕಾಗಿತ್ತು. ನಮ್ಮ ಚಿತ್ರದ ನಾಯಕ ಅಜಯ್ ರಾವ್ ಮಗಳು ಚರಿಷ್ಮಾ ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾಳೆ, ಅವಳಿಂದ ಈ ಸನ್ನಿವೇಶ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಎಂದು ಇಡೀ ಚಿತ್ರತಂಡಕ್ಕೆ ಅನಿಸಿತು. ಅದರಂತೆ ಚರಿಷ್ಮಾ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಸಿನಿಮಾದಲ್ಲಿ ಚರಿಷ್ಮಾ ತುಂಬ ಕ್ಯೂಟ್ ಆಗಿ ಕಾಣುತ್ತಾಳೆ ಎಂದು ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದ್ದಾರೆ.
Love You Rachchu: ಡಿಸೆಂಬರ್ 31ರಂದು ತೆರೆಮೇಲೆ ಬರಲಿದ್ದಾರೆ ಅಜಯ್-ರಚ್ಚು ಜೋಡಿ
ಸದ್ಯ 'ಲವ್ ಯು ರಚ್ಚು' ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಸಿನಿಮಾದ ಟ್ರೇಲರ್ (Trailer) ಬಿಡುಗಡೆ ಯೋಜನೆ ಹಾಕಿಕೊಂಡಿದೆ. ಇನ್ನು ಫೈಟರ್ ವಿವೇಕ್ ಅವರು ಈ ಚಿತ್ರದ ಚಿತ್ರೀಕರಣದ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.