ನಟ 'ಲೂಸ್ ಮಾದ' ಯೋಗಿ ಅಭಿನಯದ 50ನೇ ಸಿನಿಮಾ 'ರೋಸಿ'ಗೆ 'ಹೆಡ್‌ ಬುಷ್' ಖ್ಯಾತಿಯ ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ನವೆಂಬರ್ 16ರಂದು ಈ ಸಿನಿಮಾದ ಕಾರ್ಯಕ್ರಮವೊಂದು ಬೆಂಗಳೂರಿನ ವಿವೇಕನಗರದಲ್ಲಿ ನಡೆದಿತ್ತು.

ಇತ್ತೀಚೆಗಷ್ಟೆ ಲೂಸ್ ಮಾದ ಯೋಗಿ ನಟನೆಯ 'ರೋಸಿ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಸಿನಿಮಾದ ಫಸ್ಟ್ ಲುಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತ ಸಹ ಆಯಿತು. ಆದರೆ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಲೂಸ್ ಮಾದ ಯೋಗಿ ಆಡಿದ ಮಾತುಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ತಮ್ಮ ತಪ್ಪನ್ನು ಅರಿತುಕೊಂಡಿರುವ ನಟ ಯೋಗಿ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

ಏನಿದು ಘಟನೆ?: ನಟ 'ಲೂಸ್ ಮಾದ' ಯೋಗಿ ಅಭಿನಯದ 50ನೇ ಸಿನಿಮಾ 'ರೋಸಿ'ಗೆ 'ಹೆಡ್‌ ಬುಷ್' ಖ್ಯಾತಿಯ ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ನವೆಂಬರ್ 16ರಂದು ಈ ಸಿನಿಮಾದ ಕಾರ್ಯಕ್ರಮವೊಂದು ಬೆಂಗಳೂರಿನ ವಿವೇಕನಗರದಲ್ಲಿ ನಡೆದಿತ್ತು. ಅಲ್ಲಿಗೆ ಬಂದಿದ್ದ ಯೋಗಿ ಅವರು, ತಮಿಳಿನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈ ಸಿನಿಮಾದಲ್ಲಿ ತಮಿಳಿನ ನಟ ಸ್ಯಾಂಡಿ ಮಾಸ್ಟರ್‌ ಕೂಡ ಬಣ್ಣ ಹಚ್ಚಿದ್ದಾರೆ. ಈಚೆಗಷ್ಟೇ ತೆರೆಕಂಡ 'ಲಿಯೋ' ಸಿನಿಮಾದಲ್ಲಿ ನಟಿಸಿದ್ದ ಅವರು, ಈಗ 'ರೋಸಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

I Love U ಎಂದು ಪ್ರಪೋಸ್‌ ಮಾಡಿದ ಸಂಗೀತಾ: ನನಗೆ ಜೀವನದಲ್ಲಿ ಗುರಿಯಿದೆ ಎಂದ ಡ್ರೋನ್ ಪ್ರತಾಪ್!

ಯಾವಾಗ ಲೂಸ್ ಮಾದ ಯೋಗಿ ಬೆಂಗಳೂರಿನಲ್ಲಿ ವಿವೇಕನಗರದಲ್ಲಿ ತಮಿಳಿನಲ್ಲಿ ಮಾಡಿದ ವಿಡಿಯೋ ವೈರಲ್ ಆಯ್ತೋ, ವಿವಾದದ ಸ್ವರೂಪ ಪಡೆದುಕೊಂಡಿದೆ. ಯೋಗಿ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಪಟ್ಟು ಹಿಡಿದಿದ್ದರು. ಇದೀಗ ಈ ಕುರಿತು ಲೂಸ್ ಮಾದ ಯೋಗಿ ಅವರು ಕ್ಷಮೆ ಕೇಳಿದ್ದಾರೆ. ಆ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಲೂಸ್ ಮಾದ' ಯೋಗಿ ಹೇಳಿದ್ದೇನು?: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಲೂಸ್ ಮಾದ ಯೋಗಿ, ಬೆಂಗಳೂರಿನಲ್ಲಿ ತಮಿಳು ಮಾತನಾಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ. 'ರೋಸಿ' ಸಿನಿಮಾದ ಪೋಸ್ಟರ್ ಲಾಂಚ್ ಕಾರ್ಯಕ್ರಮದಲ್ಲಿ ತಮಿಳು ಮಾತನಾಡಿದ್ದೀನಿ ಎಂಬುದು ತುಂಬಾ ಜನಕ್ಕೆ ಬೇಜಾರಾಗಿದೆ. ನಿಜ ಏನೆಂದರೆ ನಾನು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿ ಬಳಿಕ ತಮಿಳಿನಲ್ಲಿ ಮಾತನಾಡಿ ಅಂತಿಮವಾಗಿ ಕನ್ನಡದಲ್ಲಿಯೇ ಭಾಷಣ ಮುಗಿಸಿದ್ದೀನಿ. ಆದರೂ ಸಹ ನಾನು ತಮಿಳು ಮಾತನಾಡಿದ್ದು ಕೆಲವರಿಗೆ ನೋವಾಗಿದ್ದರೆ ಕ್ಷಮೆ ಇರಲಿ' ಎಂದಿದ್ದಾರೆ. 

ಯಾರಿಗೂ ಬೇಸರ ಮಾಡಲೆಂದು, ನೋವು ನೀಡಲೆಂದು ನಾನು ಆ ಕಾರ್ಯಕ್ರಮದಲ್ಲಿ ತಮಿಳು ಮಾತನಾಡಲಿಲ್ಲ, ಬದಲಿಗೆ ಅಲ್ಲಿ ಸಾಕಷ್ಟು ಜನ ತಮಿಳರು ಇದ್ದರು ಅಲ್ಲದೆ, ನಮ್ಮ 'ರೋಸಿ' ಸಿನಿಮಾವನ್ನು ಸಹ ನಾವು ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲಿಯೂ ಬಿಡುಗಡೆ ಮಾಡುತ್ತಿದ್ದೇವೆ ಇದೆಲ್ಲ ಕಾರಣದಿಂದ ನಾನು ಆ ಸ್ಥಳದಲ್ಲಿ ತಮಿಳಿನಲ್ಲಿ ಮಾತನಾಡಿದೆ. ನಾನು ತಮಿಳಿನಲ್ಲಿ ಮಾತನಾಡಿದ್ದು ತಪ್ಪು ಅನ್ನಿಸಿದರೆ ಕ್ಷಮೆ ಇರಲಿ' ಎಂದು ಕೈಮುಗಿದಿದ್ದಾರೆ ಯೋಗಿ. 

ಲೋ ಕಟ್ ಬ್ಲೌಸ್‌ನಲ್ಲಿ ಮೈಮಾಟ ಪ್ರದರ್ಶಿಸಿದ ಕಣ್ಸನ್ನೆ ಬೆಡಗಿ: ಪ್ರಿಯಾ ಅಂದಕ್ಕೆ ಮೂಕವಿಸ್ಮಿತರಾದ ಫ್ಯಾನ್ಸ್!

ಇನ್ನು ಸೂರಿ ನಿರ್ದೇಶನದ 'ದುನಿಯಾ' ಚಿತ್ರದಲ್ಲಿ ಯೋಗಿ ಸಣ್ಣ ಪಾತ್ರ ಮಾಡಿದ್ದರು. ಲೂಸ್‌ ಮಾದ ಆಗಿ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ 'ನಂದ ಲವ್ಸ್ ನಂದಿತಾ' ಚಿತ್ರದ ಮೂಲಕ ಹೀರೊ ಆಗಿದ್ದರು. ಸದ್ಯ 50 ಸಿನಿಮಾಗಳ ಗಡಿಯಲ್ಲಿದ್ದಾರೆ. ಈ ಹಾದಿಯಲ್ಲಿ ಬಹಳ ಏಳುಬೀಳು ಕಂಡಿದ್ದಾರೆ. ಇದರಿಂದ ಸಾಕಷ್ಟು ಪಾಠ ಕಲಿತಿರೋದಾಗಿಯೂ ಯೋಗಿ 'ರೋಸಿ' ಮುಹೂರ್ತ ಸಮಾರಂಭದಲ್ಲಿ ಹೇಳಿದ್ದರು.