Asianet Suvarna News Asianet Suvarna News

I Love U ಎಂದು ಪ್ರಪೋಸ್‌ ಮಾಡಿದ ಸಂಗೀತಾ: ನನಗೆ ಜೀವನದಲ್ಲಿ ಗುರಿಯಿದೆ ಎಂದ ಡ್ರೋನ್ ಪ್ರತಾಪ್!

ಬಿಗ್‌ಬಾಸ್ ಕನ್ನಡ 10 ಕಾರ್ಯಕ್ರಮದ  ಡ್ರೋನ್ ಪ್ರತಾಪ್‌ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೈ ಹಿಡಿದು ‘ಐ ಲವ್ ಯೂ’ ಎಂದಿದ್ದಾರೆ. ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ನೀರಾಗಿ, ಬಿದ್ದು ಬಿದ್ದು ನಕ್ಕಿದ್ದಾರೆ. 

BBK10 Sangeetha Sringeri Love Proposal To Drone Prathap In A Comic Way gvd
Author
First Published Nov 17, 2023, 7:03 AM IST

ಬಿಗ್‌ಬಾಸ್ ಕನ್ನಡ 10 ಕಾರ್ಯಕ್ರಮದ  ಡ್ರೋನ್ ಪ್ರತಾಪ್‌ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೈ ಹಿಡಿದು ‘ಐ ಲವ್ ಯೂ’ ಎಂದಿದ್ದಾರೆ. ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ನೀರಾಗಿ, ಬಿದ್ದು ಬಿದ್ದು ನಕ್ಕಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್- ಸಂಗೀತಾ, ಇಶಾನಿ- ಮೈಕಲ್, ನಮ್ರತಾ-ಸ್ನೇಹಿತ್ ಜೋಡಿಯಾಗಿ ಹೈಲೆಟ್ ಆಗಿದ್ದರು. ಕಾರ್ತಿಕ್- ಸಂಗೀತಾ ನಡುವೆ ಕುಚ್ ಕುಚ್ ನಡೆಯುತ್ತಿದೆ ಎನ್ನುವಾಗಲೇ ಕಾರ್ತಿಕ್‌ಗೆ ಕೈ ಕೊಟ್ಟು ಡ್ರೋನ್ ಪ್ರತಾಪ್‌ಗೆ ಚಾರ್ಲಿ ನಟಿ ಪ್ರಪೋಸ್ ಮಾಡಿದ್ದಾರೆ. ಪ್ರತಾಪ್‌ಗೆ ನಿನ್ನ ಹುಡುಗಿ ನಾನೇ ಒಪ್ಪಿಕೋ ಅಂತ ಕ್ಯೂಟ್ ಕ್ಯೂಟ್ ಆಗಿ ನಟಿ ಪ್ರೇಮ ನಿವೇದನೆ ಮಾಡಿದ್ದಾರೆ. 

ನಿಮ್ಮ ಬದುಕಿನಲ್ಲಿ ಮುಂದೆ ಹುಡುಗಿ ಬಂದರೆ ಪ್ರತಾಪ್ ಉತ್ತರ ಏನಾಗಿರುತ್ತೆ ಅಂತ ಪ್ರತಾಪ್‌ ಜೊತೆ ಮಾತುಕತೆ ನಡೆದಿದೆ.  ಅದಕ್ಕೆ ಅಯ್ಯೋ ನನ್ನ ಬಿಡಮ್ಮ, ನನಗೆ ಜೀವನದಲ್ಲಿ ಗುರಿ ಇದೆ. ನನ್ನ ಕೆರಿಯರ್ ಕಡೆ ನೋಡಬೇಕು ಅಂತೀನಿ, ಅಪ್ಪ ನೋಡಿದ ಹುಡುಗಿನಾ ಮದುವೆ ಆಗ್ತೀನಿ ಎಂದು ಹೇಳ್ತೀನಿ ಎಂದು ಪ್ರತಾಪ್ ರಿಯಾಕ್ಟ್ ಮಾಡಿದ್ದಾರೆ. ಈಗ ನಾನೇ ಆ ಹುಡುಗಿ, ನಿಮ್ಮ ಅಪ್ಪನ ನಾನು ಒಪ್ಪಿಸುತ್ತೇನೆ ಎಂದು ಪ್ರತಾಪ್‌ಗೆ ಸಂಗೀತಾ ಹೇಳಿದ್ದಾರೆ. ಅವರ ಮಾತು ಕೇಳಿ ಪ್ರತಾಪ್ ನಾಚಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಸಂಗೀತಾ ಕಾಡಿಸಿದ್ರೆ, ನನಗೆ ಇಷ್ಟ ಇಲ್ಲಪ್ಪಾ ಎಂದು ಪ್ರತಾಪ್ ಕೈ ಮುಗಿದಿದ್ದಾರೆ. 

BBK10: ಕಿರುಚಬೇಡಿ ತನಿಷಾ: ಫ್ರೆಂಡ್‌ಶಿಪ್‌ ಬ್ರೇಕಪ್ ಮಾಡಿದ ಸಂಗೀತಾ ಹಾರ್ಟ್‌ ಬ್ರೋಕಪ್!

ಅಷ್ಟಕ್ಕೆ ಸುಮ್ಮನಾಗದ ಸಂಗೀತಾ, ನಾನು ನಿನಗೆ ಇಷ್ಟ ಇಲ್ವಾ ಎಂದು ಮತ್ತೆ ಪ್ರತಾಪ್ ಕೈ ಹಿಡಿದು ಕೇಳಿದ್ದಾರೆ. ಇಲ್ಲ ಎಂದು ನಗುತ್ತಲೇ ಸಂಗೀತಾಗೆ ರಿಯಾಕ್ಟ್‌ ಮಾಡಿದ್ದಾರೆ ಪ್ರತಾಪ್.‌ ನನ್ನ ಪ್ಯೂಚರ್ ಪತಿಯನ್ನ ನಿಮ್ಮಲ್ಲಿ ಕಾಣುತ್ತಿದ್ದೇನೆ ಎಂದು ಸಂಗೀತಾ ಹೇಳಿದ್ರೆ, ಇತ್ತ ನೀವು ನನ್ನ ಅಕ್ಕ ಎಂದು ಪ್ರತಾಪ್ ಜಪ ಮಾಡಿದ್ದಾರೆ. ಇದೆಲ್ಲ ನಾನು ಒಪ್ಪಲ್ಲ. ನಿಮ್ಮ ಮೇಲೆ ನನಗೆ ತುಂಬಾ ಪ್ರೀತಿ ಆಗಿದೆ. ನಿಮ್ಮನ್ನ ನೋಡಿದ ಮೇಲೆ ಕ್ರಶ್ ಆಗಿದೆ ಎಂದು ಸಂಗೀತಾ, ಮನ ಒಲಿಸಲು ಪ್ರಯತ್ನ ಮಾಡಿದ್ದಾರೆ. 

ಬಹುಕಾಲದ ಗೆಳತಿ ಜತೆ ಗಾಯಕ ವಾಸುಕಿ ವೈಭವ್​ ಮದುವೆ: ಹುಡುಗಿ ಯಾರು ಗೊತ್ತಾ?

ನನ್ನ ಹತ್ತಿರ ದುಡ್ಡಿಲ್ಲ ಎಂದ ಡ್ರೋನ್‌ಗೆ ಪರ್ವಾಗಿಲ್ಲ ನಾನೇ ಸಾಕುತ್ತೇನೆ. ನಿಮ್ಮ ನಗು, ಹೃದಯ, ಉಸ್ತುವಾರಿ ನೋಡಿಯೇ ನಾನು ಕಳೆದು ಹೋಗಿದ್ದೀನಿ ಎಂದೆಲ್ಲಾ ಸಂಗೀತಾ ಡೈಲಾಗ್ ಹೊಡೆದಿದ್ದಾರೆ. ಆದರೂ ಅವರ ಮಾತಿಗೆ ನೋ ಎಂದಿದ್ದಾರೆ ಪ್ರತಾಪ್.‌ ಒಟ್ಟಿನಲ್ಲಿ ಈ ತಮಾಷೆಯ ಮಾತುಕತೆ ವೀಕ್ಷಕರಿಗೆ ಇಷ್ಟವಾಗಿದ್ದು, ಸಂಗೀತಾ  ಕ್ಯೂಟ್‌ನೆಸ್‌ಗೆ ವೀಕ್ಷಕರು, ಅಭಿಮಾನಿಗಳು ಫಿದಾ ಆಗಿದ್ದಾರೆ.

Follow Us:
Download App:
  • android
  • ios