ಲೋ ಕಟ್ ಬ್ಲೌಸ್ನಲ್ಲಿ ಮೈಮಾಟ ಪ್ರದರ್ಶಿಸಿದ ಕಣ್ಸನ್ನೆ ಬೆಡಗಿ: ಪ್ರಿಯಾ ಅಂದಕ್ಕೆ ಮೂಕವಿಸ್ಮಿತರಾದ ಫ್ಯಾನ್ಸ್!
ಸಿನಿಮಾಗಳಿಗಿಂತ ಹೆಚ್ಚಾಗಿ ಬೋಲ್ಡ್ ಫೋಟೋಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್. ಇದೀಗ ಬೋಲ್ಡ್ ಫೋಟೋ ಮೂಲಕವೇ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.
ಮಾಲಿವುಡ್ ಬ್ಯೂಟಿ ಪ್ರಿಯಾ ವಾರಿಯರ್ ಇತ್ತೀಚಿಗೆ ಬೋಲ್ಡ್ ಅವತಾರದಲ್ಲಿ ಮಿಂಚುತ್ತಿದ್ದಾರೆ. ಕೊಂಚ ಟ್ರೆಡಿಷನಲ್, ಫುಲ್ ಮಾರ್ಡನ್ ಲುಕ್ನಲ್ಲಿ ಹಾಟ್ ಆಗಿ ಕಾಣಿಸುತ್ತಿದ್ದಾರೆ.
ದೀಪಾವಳಿ ಹಬ್ಬಕ್ಕೆ ಈ ಫೋಟೋಶೂಟ್ ಮಾಡಿಸಿದ್ದು, ಟ್ರೆಡಿಷನ್ ಲುಕ್ಗೆ ಪ್ರಿಯಾ ಲೋ ಕಟ್ ಬ್ಲೌಸ್ ಧರಿಸಿದ್ದಾರೆ. ಬ್ಲ್ಯಾಕ್ ಅಂಡ್ ಗೋಲ್ಡ್ ಡ್ರೆಸ್ನಲ್ಲಿ ಕಣ್ಸನ್ನೆ ಚೆಲುವೆ ಸಖತ್ತಾಗಿ ಮಿಂಚಿದ್ದಾರೆ.
ಸಿಂಪಲ್ ಮೇಕಪ್ ಹಾಕಿರುವ ಪ್ರಿಯಾ ವಾರಿಯರ್ ಮೂಗುತಿ ಧರಿಸಿ ಸಖತ್ ಬೋಲ್ಡ್ ಆಗಿ ಫೋಟೋಗೆ ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ನಟಿ ಬ್ಲೌಸ್ ಬಗ್ಗೆ ತರೇಹವಾರಿ ಕಮೆಂಟ್ ಮಾಡಿದ್ದಾರೆ.
ಪ್ರಿಯಾ ವಾರಿಯರ್ ಫೋಟೋಗಳು ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದ್ದು, ಕಣ್ಸನ್ನೆ ಚೆಲುವೆಯ ಹೊಸ ಅವತಾರದಿಂದ ಇದೀಗ ಸಖತ್ ಟ್ರೋಲ್ ಆಗಿದ್ದಾರೆ. ಕೆಲವು ನೆಟ್ಟಿಗರು ಕಟುವಾದ ಕಮೆಂಟ್ ಮೂಲಕ ಟೀಕಿಸಿದ್ದಾರೆ.
ಬಿಂಕ, ಬಿನ್ನಾಣದಿಂದ ಯುವಕರ ಹಾಟ್ ಫೇವರಿಟ್ ಆಗಿರುವ ಪ್ರಿಯಾ ವಾರಿಯರ್, ಗ್ಲಾಮರ್ ದಿರಿಸುಗಳಲ್ಲಿ ಆಕರ್ಷಕವಾದ ಮೈಮಾಟ ಪ್ರದರ್ಶಿಸಿ, ಅನುಯಾಯಿಗಳನ್ನು ಆಕರ್ಷಿಸುತ್ತಿದ್ದಾರೆ.
ಒಮರ್ ಲುಲು ಅವರ ‘ಒರು ಅಡಾರ್ ಲವ್’ ಮೂಲಕ ಮಾಲಿವುಡ್ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ ವಾರಿಯರ್ ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಸರಿಯಾದ ಹಿಟ್ ಚಿತ್ರ ನೀಡಿಲ್ಲ.
ಪ್ರಿಯಾ ವಾರಿಯರ್ ತನ್ನ ಒಂದೇ ಕಣ್ಣಿನಿಂದ ದೇಶದಾದ್ಯಂತ ಅಭಿಮಾನಿಗಳನ್ನು ಗೆದ್ದಿರುವ ಮಲಯಾಳಿ ಸುಂದರಿ. ಅವರ ಅದೃಷ್ಟವೇ ಹಾಗೆ. ಆದರೆ ಸಿನಿಮಾ 'ಒರು ಅಡಾರ್ ಲವ್' ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಛಾಪು ಮೂಡಿಸಲು ವಿಫಲವಾಯಿತು.