ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಫ್ಯಾಮಿಲಿ ಪ್ಯಾಕ್’ ಚಿತ್ರದ 'ಬೇಕಾಗಿದೆ' ಎಂಬ ಭಾವಪೂರ್ಣ ಹಾಡೊಂದು ಬಿಡುಗಡೆಯಾಗಿದೆ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಪಿಆರ್ಕೆ ಸಂಸ್ಥೆಯಡಿ‘ಫ್ಯಾಮಿಲಿ ಪ್ಯಾಕ್’ (Family Pack) ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ (Amazon Prime) ರಿಲೀಸ್ ಆಗಿ ಸಿನಿವಿಮರ್ಶಕರಿಂದ ಹಾಗೂ ಸಿನಿಮಂದಿಯಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಇದೀಗ ಚಿತ್ರತಂಡ ಚಿತ್ರದ 'ಬೇಕಾಗಿದೆ' (Bekaagide) ಎಂಬ ಭಾವಪೂರ್ಣ ಹಾಡೊಂದನ್ನು ಬಿಡುಗಡೆ ಮಾಡಿದೆ. ಜನಪ್ರಿಯ ಸಂಗೀತ ಸಂಯೋಜಕ ವಿರಾಜ್ ಕನ್ನಡಿಗ (Viraj Kannadiga) ಸಾಹಿತ್ಯ ಬರೆದು ಹಾಡಿರುವ ಈ ಹಾಡು ವ್ಯಕ್ತಿಯ ಅಂತರಂಗದ ಅನುಭವವನ್ನು ಅನಾವರಣಗೊಳಿಸುತ್ತದೆ.
ರಿಲೀಸ್ ಆಗಿರುವ 'ಬೇಕಾಗಿದೆ' ಹಾಡಿನಲ್ಲಿ ಚಿತ್ರದ ನಾಯಕ ಅಭಿ (ಲಿಖಿತ್ ಶೆಟ್ಟಿ) ತನ್ನ ಪ್ರೀತಿಯಿಂದ ಸ್ವತಃ ತೊಂದರೆಗೊಳಗಾದಾಗ ಅನುಭವಿಸುವ ವಿಶೇಷ ಭಾವನೆಗಳನ್ನು ಸಂಯೋಜಿಸುವ ಹಾಡು. ಪ್ರೀತಿ ಮಿಶ್ರಿತ ಅಳವಾದ ಭಾವನೆಯಾಗಿದೆ. ಅಲ್ಲದೇ ಈ ಸುದೀರ್ಘ ಪ್ರಯಾಣದಲ್ಲಿ ಒಬ್ಬರ ಆತ್ಮ ಸಂಗಾತಿಯನ್ನು ಹುಡುಕಲು ಸಮಯ, ಶ್ರಮ ಹಾಗೂ ಸಮರ್ಪಣೆ ಕೂಡಾ ಬೇಕಾಗುತ್ತದೆ. ಸುತ್ತಮುತ್ತಲಿನ ಮತ್ತು ಒಳಗಿನಿಂದ ಅದನ್ನು ಅನುಭವಿಸುವ ಜನರೊಂದಿಗೆ ಸಿಂಕ್ ಆಗಿರುವ ಹಾಡು ಪ್ರಮುಖ ಪಾತ್ರಗಳ ನಡುವಿನ ಬಾವನಾತ್ಮಕ ಸಂಬಂಧಗಳಲ್ಲಿ ಒಂದಾಗಿದೆ. ಬಿಡುಗಡೆಯಾದಗಿನಿಂದ ಚಿತ್ರವನ್ನು ಮೆಚ್ಚಿರುವ ಪ್ರೇಕ್ಷಕರು ಈ ಹಾಡನ್ನು ನಿಜವಾಗಿಯೂ ಇಷ್ಟಪಡುತ್ತಾರೆ.
'ಫ್ಯಾಮಿಲಿ ಪ್ಯಾಕ್' PRK ಪ್ರೊಡಕ್ಷನ್ನೊಂದಿಗೆ ಪ್ರೈಮ್ ವೀಡಿಯೊದ ಇತ್ತೀಚಿನ ಬಹು-ಚಲನಚಿತ್ರ ಪ್ರಕಟಣೆಯ ಒಂದು ಭಾಗವಾಗಿದೆ, ಇದು ಪ್ರಪಂಚದಾದ್ಯಂತದ ಪ್ರತ್ಯೇಕ ಪ್ರೈಮ್ ಸದಸ್ಯರಿಗೆ ಲಭ್ಯವಿರುತ್ತದೆ. ಮೂರು ಚಿತ್ರಗಳ ಘೋಷಣೆಯು ದಿವಂಗತ ನಟ ಮತ್ತು ಚಲನಚಿತ್ರ ನಿರ್ಮಾಪಕ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಾಟಿಯಿಲ್ಲದ ಕೊಡುಗೆಗೆ ಗೌರವವಾಗಿದೆ. ಅರ್ಜುನ್ ಕುಮಾರ್.ಎಸ್ ಮತ್ತು ದಿವಂಗತ ಪುನೀತ್ ರಾಜ್‌ಕುಮಾರ್ ಅವರ PRK ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ, ಮಾನವನ ಭಾವನೆಗಳ ಒಂದು ಪ್ರೀತಿಯ ಕಥೆ. ನಟರಾದ ರಂಗಾಯಣ ರಘು, ಅಮೃತ ಅಯ್ಯಂಗಾರ್ ಮತ್ತು ಲಿಖಿತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. 'ಫ್ಯಾಮಿಲಿ ಪ್ಯಾಕ್' ಭಾರತ ಮತ್ತು ಪ್ರಪಂಚದ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ವಿಶೇಷವಾಗಿ ಪ್ರೈಮ್ ವಿಡಿಯೋ ಮೂಲಕ ಬಿಡುಗಡೆಯಾಗಿದೆ.
Puneeth Rajkumar ಇಷ್ಟಪಟ್ಟಿದ್ದ 'ಫ್ಯಾಮಿಲಿ ಪ್ಯಾಕ್' ಚಿತ್ರದ ಟ್ರೇಲರ್ ರಿಲೀಸ್!
ಇತ್ತೀಚೆಗಷ್ಟೇ 'ಫ್ಯಾಮಿಲಿ ಪ್ಯಾಕ್' ಚಿತ್ರತಂಡ ಚಿತ್ರದ ಸಕ್ಸಸ್ ಮೀಟ್ ಆಯೋಜಿಸಿತ್ತು. ಪುನೀತ್ ಅವರ ಅನುಪಸ್ಥಿತಿಯನ್ನು ಹೇಳಿಕೊಳ್ಳುತ್ತಲೇ ಒಬ್ಬೊಬ್ಬರೇ ಮಾತು ಆರಂಭಿಸಿದರು. ಚಿತ್ರದ ನಿರ್ದೇಶಕ ಅರ್ಜುನ್ ಕುಮಾರ್ ಮಾತನಾಡಿ, ಈ ಸಂದರ್ಭದಲ್ಲಿ ಪುನೀತ್ ಅವರನ್ನು ನಾವು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಪೂರ್ತಿ ಸಿನಿಮಾ ನೋಡದಿದ್ದರೂ, ಡಬ್ಬಿಂಗ್ ವರ್ಷನ್ ನೋಡಿ ಖುಷಿಪಟ್ಟಿದ್ದರು. ಪೂರ್ಣ ಪ್ರಮಾಣದ ಸಿನಿಮಾ ನೋಡುವ ಮುಂಚೆಯೇ ಹೊರಟು ಹೋದರು. ಇನ್ನು ಚಿತ್ರಕ್ಕೆ ವೀಕ್ಷಕಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸ್ಕ್ರೀಮಿಂಗ್ ಎಷ್ಟು ಗಂಟೆ ಎಂಬ ವಿಚಾರ ಮೂರು ವಾರದ ಬಳಿಕ ಗೊತ್ತಾಗಲಿದೆ. ಭಾರತದಲ್ಲಿ ನಮ್ಮ ಸಿನಿಮಾ ಟ್ರೆಂಡಿಂಗ್ನಲ್ಲಿ ಏಳನೇ ಸ್ಥಾನ ಪಡೆದಿತ್ತು. ಇದರ ಜತೆಗೆ ತೆಲುಗಿನಿಂದಲೂ ಸಿನಿಮಾ ಮಾತುಕತೆಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಆ ಬಗ್ಗೆ ತಿಳಿಸಲಿದ್ದೇನೆ ಎಂಬುದು ನಿರ್ದೇಶಕರ ಮಾತು. 
ಇನ್ನು ಚಿತ್ರದ ನಾಯಕ ಲಿಖಿತ್ ಶೆಟ್ಟಿ ಸಹ ಖುಷಿಯಲ್ಲಿದ್ದಾರೆ. ಸಂಕಷ್ಟಕರ ಗಣಪತಿ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಅದಾದ ಬಳಿಕ ಓಟಿಟಿಯಲ್ಲಿ ತೆರೆಗೆ ಬಂದಿತ್ತು. ಅಲ್ಲಿ ಆ ಸಿನಿಮಾಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿದ್ದೆ. ಇದೀಗ ನನ್ನ ಎರಡನೇ ಸಿನಿಮಾ ಫ್ಯಾಮಿಲಿ ಪ್ಯಾಕ್ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿ, ಎಲ್ಲ ಕಡೆಯಿಂದಲೂ ಮೆಚ್ಚುಗೆ ಪಡೆದಿದೆ. ಸಿನಿಮಾ ಶುರುವಾದಾಗ ಇದು ಥಿಯೇಟರ್ ಸಿನಿಮಾ ಎಂದು ಅಪ್ಪು ಅವರು ಹೇಳಿದ್ದರು. ಆದರೆ, ಅದೇ ಸಮಯದಲ್ಲಿ ಪ್ಯಾಂಡಮಿಕ್ ಬಂತು. ಹಾಗಾಗಿ ಒಟಿಟಿಗೆ ಸಿನಿಮಾ ಸೇಲ್ ಆಯ್ತು. ಹಾಕಿದ ಬಂಡವಾಳದ ಎರಡು ಪಟ್ಟು ಆದಾಯ ಸಿಕ್ಕಿದೆ. ಸ್ಯಾಟ್ಲೈಟ್ ಹಕ್ಕು ಮಾರಾಟಕ್ಕೂ ಮಾತುಕತೆಗಳು ನಡೆಯುತ್ತಿವೆ ಎನ್ನುತ್ತಾರೆ ಲಿಖಿತ್.
ಕೆ.ಎಂ. ಚೈತನ್ಯ ನಿರ್ದೇಶನದ ಕಾಮಿಡಿ ಚಿತ್ರದಲ್ಲಿ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್
ನಟ ರಂಗಾಯಣ ರಘು ಮಾತನಾಡಿ 'ಫ್ಯಾಮಿಲಿ ಪ್ಯಾಕ್ ನನಗೆ ಒಂದು ಹೊಸ ಆಯಮಾವನ್ನು ತಂದುಕೊಟ್ಟಿದೆ. ಕೇವಲ ಸಿನಿಮಾಗೆ ಸಿಕ್ಕ ಅವಕಾಶ ಮಾತ್ರವಲ್ಲದೇ , ನನ್ನನ್ನು ಬಹಳ ವ್ಯತ್ಯಾಸವಾಗಿ ಹೊಸ ಮುಖದ ನಟನಾಗಿ ಪರಿಚಯವನ್ನು ಇದು ಮಾಡಿದೆ. ಅತಿಮಾನುಷ ಶಕ್ತಿಯಾಗಿ ನಟಿಸಿ ಪ್ರೇಕ್ಷಕರ ಮನಸ್ಸನ್ನು ಮುಟ್ಟುವುದು ಒಂದು ರೀತಿಯಲ್ಲಿ ಛಲದ ಕೆಲಸ. ಫ್ಯಾಮಿಲಿ ಪ್ಯಾಕ್ ಒಂದು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಉತ್ತಮ ಮನೋರಂಜನೆಯನ್ನು ನೀಡುತ್ತದೆ ಎಂಬ ಆಶಯ ನಂಗಿದೆ' ಎಂದು ಹೇಳಿದ್ದಾರೆ.

