ಜಮೀನು ವಿವಾದ ಸಂಬಂಧ ಸ್ಯಾಂಡಲ್‌ವುಡ್ ನಟಿ ಅನುಗೌಡ ಮೇಲೆ ಹಲ್ಲೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಮೀನು ವಿವಾದ ಸಂಬಂಧ ಸ್ಯಾಂಡಲ್‌ವುಡ್ ನಟಿ ಅನುಗೌಡ ಮೇಲೆ ಹಲ್ಲೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅನುಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಸಾಗರ ತಾಲೂಕಿನ ಕಸ್ಪಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ನಟಿ ಅನುಗೌಡ ಸಾಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನೀಲಮ್ಮ ಮತ್ತು ಮೋಹನ್ ಅವರು ಅನುಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನುಗೌಡ ತಂದೆ ತಾಯಿ ಕಾಸ್ಪಾಡಿಯಲ್ಲಿ ಕೃಷಿ ನೋಡಿಕೊಂಡು ಇದ್ದರು. ಅನುಗೌಡ ಆಗಾಗ ಬೆಂಗಳೂರಿನಿಂದ ಬಂದು ಹೋಗುತ್ತಿದ್ದರು. ಈ ನಡುವೆ ವಿವಾದದಲ್ಲಿ ಅನುಗೌಡ ಮೇಲೆ ಹಲ್ಲೆಯಾಗಿದೆ.
ಅನೇಕ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟಿ ಅನುಗೌಡ ನಟಿಸಿದ್ದಾರೆ. ಅನುಗೌಡ ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮದೇ ಹೆಸರು ಗಳಿಸಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನವರು ಅನು ಗೌಡ. ಆದರೆ ಸಾಗರ ತಾಲೂಕಿನ ಕಾಸ್ಪಾಡಿಯಲ್ಲಿ ಜಮೀನು ಮಾಡಿಕೊಂಡಿದ್ದರು. ಆದರೀಗ ವಿವಾದಲ್ಲಿ ಸಿಲುಕಿದೆ.
ಗುಂಡಿನ ಚಕಮಕಿ ಪಕ್ಕದಲ್ಲೇ ಸ್ಯಾಂಡ್‌ವಿಚ್ ತಿನ್ನುತ್ತಾ ಕುಳಿತ ವ್ಯಕ್ತಿ, ಇದು ಹಸಿವೋ, ಭಂಡ ಧೈರ್ಯವೋ?
ಜಮೀನಿನಲ್ಲಿ ಅನುಗೌಡ ರವರ ಅಪ್ಪ ಅಮ್ಮ ವಾಸವಾಗಿದ್ದರು. ಜಮೀನಿನ ವಿಚಾರದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ವ್ಯಾಜ್ಯವಿತ್ತು. ಇದೇ ವಿಚಾರದಲ್ಲಿ ಅನು ಗೌಡ ಅವರಿಗೆ ಸ್ಥಳೀಯ ನಿವಾಸಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
Bengaluru: ಹೋಟೆಲ್ ಉದ್ಯಮಿಯ ಬರ್ಬರ ಹತ್ಯೆ, ಲವರ್ ಜೊತೆಗೂಡಿ ಪತಿಗೆ ತಿಲಾಂಜಲಿ ಇಟ್ಟ ಪತ್ನಿ!
ಅನು ಗೌಡ ತಮಿಳಿನಲ್ಲಿ ‘ಮೌನಮಾನ ನೇರಂ’, 'ಕಲಕಲ್, ‘ಶಂಕರ’, ‘ಆಡಾದ ಆಟಮೆಲ್ಲ…’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಕನ್ನಡದಲ್ಲಿ 'ಸವಿಸವಿ ನೆನಪು, ಭೂಗತ, ವಿಷ್ಣುವರ್ಧನ್ ಜೊತೆಗೆ ಸ್ಕೂಲ್ ಮಾಸ್ಟರ್, ಸುದೀಪ್ ರವರೊಂದಿಗೆ ಕೆಂಪೇಗೌಡ, ರಮ್ಯಾಗೆ ಅಕ್ಕನಾಗಿ ದಂಡಂ ದಶಗುಣಂ, ಶಿವರಾಜ್‌ಕುಮಾರ್‌ರ ಸುಗ್ರೀವ, ಪುನೀತ್ ರಾಜ್ ಕುಮಾರ್ ಅವರ ಹುಡುಗರು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
